ʼಯುಐʼ ಜಗತ್ತು ತೆರೆಗೆ ಬರಲು ಸಿದ್ದ – ಯಾವಾಗ ರಿಲೀಸ್‌ ಆಗಲಿದೆ ಉಪ್ಪಿ ಸಿನಿಮಾ?

ʼಯುಐʼ ಜಗತ್ತು ತೆರೆಗೆ ಬರಲು ಸಿದ್ದ – ಯಾವಾಗ ರಿಲೀಸ್‌ ಆಗಲಿದೆ ಉಪ್ಪಿ ಸಿನಿಮಾ?

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಇಷ್ಟು ದಿನ ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಹಲವು ವರ್ಷಗಳ ಬಳಿಕ ಉಪ್ಪಿ ನಿರ್ದೇಶನಕ್ಕೆ ಮರಳಿದ್ದಾರೆ. ಈ ಕಾರಣದಿಂದ ಉಪೇಂದ್ರ ಅವರ ‘UI’ ಚಿತ್ರದ ಮೇಲೆ ಅಭಿಮಾನಿಗಳಿ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಇದೀ ಅಕ್ಟೋಬರ್‌ ನಲ್ಲಿ ಸಿನಿಮಾ ರಿಲೀಸ್‌ ಆಗಲಿದೆ ಅಂತಾ ಉಪ್ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೂವರು ಪ್ಲೇಯರ್ಸ್ ಗೆ IPL ಬಾಗಿಲು ಬಂದ್ ಆಗುತ್ತಾ? – ಸೀನಿಯರ್ಸ್‌ಗೆ ಅನ್‌ಸೋಲ್ಡ್‌ ಭಯ?

ಉಪೇಂದ್ರ ನಟಿಸಿ, ನಿರ್ದೇಶನ ಮಾಡುತ್ತಿರುವ ಯುಐ ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ರಿಲೀಸ್ ಮಾಡೋದಾಗಿ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ. ಆದ್ರೆ ಉಪ್ಪಿ ದಾದ ಇಲ್ಲೂ ಕೂಡ ಟ್ವಿಸ್ಟ್‌ ನೀಡಿದ್ದಾರೆ. ಉಪೇಂದ್ರ ಅಕ್ಟೋಬರ್‌ನಲ್ಲಿ ಮಾತ್ರ ರಿಲೀಸ್‌ ಆಗಲಿದೆ ಅಂತಾ ಹೇಳಿದ್ದಾರೆ. ಆದ್ರೆ ಯಾವ ದಿನಾಂಕ ಅಂತಾ ಹೇಳದೆ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

ಇನ್ನೂ ಟೈಟಲ್‌ನಲ್ಲೇ ವಿಭಿನ್ನತೆ ತೋರಿಸಿರುವ ನಟ ಉಪೇಂದ್ರ ಈ ಬಾರಿ ಕಲಿಯುಗದ ಕಥೆ ಹೇಳೋಕೆ ಹೊರಟಿದ್ದಾರೆ. ಉಪೇಂದ್ರಗೆ ಜೋಡಿಯಾಗಿ ಕೊಡಗಿನ ಬೆಡಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಈ ಚಿತ್ರವನ್ನು ಲಹರಿ ಸಂಸ್ಥೆ ಮತ್ತು ಕೆ ಪಿ ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತವಿದೆ. ಅಂದಹಾಗೆ, ಯುಐ ಸಿನಿಮಾ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ.

Shwetha M

Leave a Reply

Your email address will not be published. Required fields are marked *