ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ಫೈಟ್‌ – ಉಗ್ರಂ ಮಂಜು ತೆಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ!

ಬಿಗ್‌ ಬಾಸ್‌ ಮನೆಯಲ್ಲಿ ಮತ್ತೆ ಫೈಟ್‌ – ಉಗ್ರಂ ಮಂಜು ತೆಲೆಗೆ ಬಾಟಲಿಯಿಂದ ಹೊಡೆದ ಮೋಕ್ಷಿತಾ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಫಿನಾಲೆ ಹಂತಕ್ಕೆ ಬಂದಿದೆ. ಇದೀಗ ದೊಡ್ಮನೆಯಲ್ಲಿ ನಾಮಿನೇಷನ್ ಬೆಂಕಿ ಹೊತ್ತುಕೊಂಡಿದೆ. ಈ ಬಾರಿ ವಿಭಿನ್ನವಾಗಿ ನೇರವಾಗಿ ನಾಮಿನೇಷನ್ ಟಾಸ್ಕ್ ನೀಡಲಾಗಿದೆ. ಇದೀಗ ಮೋಕ್ಷಿತಾ ಪೈ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಮೇಲೆ ಮುಗಿ ಬಿದ್ದಿದ್ದೇಕೆ PAK? – ಅಫ್ಘಾನ್ ಕೈಯಲ್ಲಿ ಪಾಕ್ ಸರ್ವನಾಶ?

ಸ್ಪರ್ಧಿಗಳು ಮನೆಯಿಂದ ಆಚೆ ಕಳುಹಿಸಲು ಇಷ್ಟ ಪಡುವ ಸ್ಪರ್ಧಿಗಳ ತಲೆ ಮೇಲೆ ಬಾಟಲಿಯಿಂದ ಹೊಡೆದು ನಾಮಿನೇಟ್ ಮಾಡಬೇಕು. ಅಂತೆಯೇ ಭವ್ಯ ಗೌಡ ಅವರು, ಐಶ್ವರ್ಯ ಅವರ ತಲೆಗೆ ಬಾಟಲಿ ಹೊಡೆದಿದ್ದಾರೆ. ಇನ್ನು ಮೋಕ್ಷಿತಾ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ.

ಈ ವೇಳೆ ಮಂಜು ಹಾಗೂ ಮೋಕ್ಷಿತಾ ಮಧ್ಯೆ ಟಾಕ್ ಫೈಟ್ ನಡೆದಿದೆ. ಮೋಕ್ಷಿತಾ ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಇದಕ್ಕೆ ರೊಚ್ಚಿಗೇಳುವ ಮಂಜು, ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್​​ಗೆ ಬರ್ತೀನಿ ಎಂದಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಕೇಳಿದ್ದಾರೆ.

ಆಗ ಕೆರಳಿದ ಮೋಕ್ಷಿತಾ, ಅಂದರೆ ನೀವು ಮನೆಯಲ್ಲಿ ಕಾಣಿಸಿಕೊಳ್ಳೋದು ಒಬ್ಬರಿಗೆ ತೆಗೆದುಕೊಂಡು ಹೋಗಿ ಇಬ್ಬರಿಗೆ ಕೊಟ್ಟಾಗಲೇ ಅಂತಾನಾ? ನೀವು ಯಾರು ನನಗೆ ವೈಸ್​ ರೈಸ್ ಮಾಡೋಕೆ ಎಂದು ಆವಾಜ್ ಹಾಕಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ನನ್ನ ನಿರ್ಧಾರ ಎಂದು ಬಾಟಲಿಯಿಂದ ತಲೆಗೆ ಹೊಡೆದಿದ್ದಾರೆ.

Shwetha M

Leave a Reply

Your email address will not be published. Required fields are marked *