ವೈಭವ್‌ಗೆ ಉಪನಾಯಕ ಪಟ್ಟ ಬೇಕಿತ್ತಾ? – ರಹಾನೆ ನಿವೃತ್ತಿಗೆ ಕೊಹ್ಲಿ, ಸಚಿನ್ ಭಾವುಕ

ವೈಭವ್‌ಗೆ ಉಪನಾಯಕ ಪಟ್ಟ ಬೇಕಿತ್ತಾ? – ರಹಾನೆ ನಿವೃತ್ತಿಗೆ ಕೊಹ್ಲಿ, ಸಚಿನ್ ಭಾವುಕ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

CSK ತಂಡದ ಸ್ಟಾರ್ ಆಟಗಾರ ಎಂ.ಎಸ್ ಧೋನಿ IPL ನಿವೃತ್ತಿ ಬಗ್ಗೆ ಕಳೆದೊಂದು ವರ್ಷದಿಂದ ಭಾರಿ ಚರ್ಚೆ ನಡೆಯುತ್ತಿದೆ. ಇದೀಗ ಮಾಹಿ ನಿವೃತ್ತಿ ಬಗ್ಗೆ ಮತ್ತೊಂದು ಸುದ್ದಿ ಭಾರಿ ಸದ್ದು ಮಾಡ್ತಿದೆ. ಧೋನಿ 2027ರಲ್ಲಿ IPLಗೆ ನಿವೃತ್ತಿ ಪಡೆಯಲಿದ್ದಾರೆ. ಅದಾದ ಬಳಿಕ CSK ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಫ್ರಾಂಚೈಸಿ ಅಪ್ಡೇಟ್ ನೀಡಿಲ್ಲ.

ಕ್ಯಾಪ್ಟನ್ ರಜತ್ ಪಾಟಿದಾರ್ ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ಗುಂಜನಾ ಪಾಟಿದಾರ್ ಹಾಗೂ ಮಗು ಜೊತೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕ್ರಿಕೆಟ್ ಭವಿಷ್ಯಕ್ಕಾಗಿ ಹಾಗೂ ಕುಟುಂಬಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸದ್ಯ ಇದ್ರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಇದನ್ನೂ ಓದಿ: ಭುವನೇಶ್ವರ್ ಕುಮಾರ್ ಗೆ ಭಾರತದ ಬಾಗಿಲು ಓಪನ್? -2027ರ ODI ವಿಶ್ವಕಪ್ ಆಡ್ತಾರಾ?

ಸಚಿನ್ ತೆಂಡೂಲ್ಕರ್ ಮತ್ತೆ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಸಚಿನ್ ತನ್ನ ಸೊಸೆಗೆ ಸಾನಿಯಾ ಅವರಿಗೆ ಚಹಾ ಅಥವಾ ಕಾಫಿ ಬೇಕಾ ಅಂತ ಕೇಳ್ತಾರೆ. ಆಗ ಸಾನಿಯಾ ಬ್ಲಾಕ್ ಕಾಫಿ ಬೇಕೆಂದು ಹೇಳುತ್ತಿದ್ದಂತೆ, ಅದನ್ನು ತರುವಂತೆ ಸಿಬ್ಬಂದಿಗೆ ಸಚಿನ್ ಸೂಚನೆ ನೀಡಿದ್ರು.  ಈ ಸಣ್ಣ ಕಾಳಜಿಯ ನಡೆ ಅಭಿಮಾನಿಗಳ ಮನಸ್ಸು ಗೆದ್ದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳಪೆ ಫಾರ್ಮ್‌ನಿಂದ ಟಿ20ಯಿಂದ ಕೈ ಬಿಟ್ರು, ಸೂರ್ಯಕುಮಾರ್ ಯಾದವ್‌ ಛಲ ಬಿಡಿಗೆ ನೆಟ್ಸ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಬಗ್ಗೆ ಪೋಸ್ಟ್ ಹಾಕಿಕೊಂಡಿರೋ ಸೂರ್ಯಕುಮಾರ್ ಭಾನುವಾರ ಮೋಜಿನಿಂದ ಕೂಡಿತ್ತು. ತ್ವರಿತ ಓಟ. ಕೇವಲ ಮೂರು ಗಂಟೆಗಳಲ್ಲಿ 1000 ಎಸೆತಗಳಿಗೆ ಬ್ಯಾಟಿಂಗ್‌ ನಡೆಸಿದ್ದೇನೆ. ಒಳ್ಳೆಯ ಅನುಭವ ಎಂದು ತಾವು ಹಂಚಿಕೊಂಡಿರುವ ವಿಡಿಯೋ ಬರೆದುಕೊಂಡಿದ್ದಾರೆ.

ರಹಾನೆ ನಿವೃತ್ತಿಯ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಚಿನ್ ತೆಂಡೂಲ್ಕರ್, ‘ನಿಮ್ಮ ಗಮನಾರ್ಹ ವೃತ್ತಿಜೀವನಕ್ಕೆ ಅಭಿನಂದನೆಗಳು. ಅಜಿಂಕ್ಯ, ನಾವು ಮೊದಲ ಬಾರಿಗೆ ಮುಂಬೈ ಪರ ಬ್ಯಾಟಿಂಗ್ ಮಾಡಿದಾಗ, ಅವಕಾಶಗಳ ಹಿಂದೆ ಓಡದ ವ್ಯಕ್ತಿಯನ್ನು ನಾನು ನಿನ್ನಲ್ಲಿ ನೋಡಿದ್ದೇವೆ ಎಂದಿದ್ದಾರೆ. ಹಾಗೇ ಕೊಹ್ಲಿ ಕೂಡ ಟ್ವೀಟ್ ಮಾಡಿ  ನೀವು ಭಾರತೀಯ ಕ್ರಿಕೆಟ್‌ಗಾಗಿ ಅದ್ಭುತ ಕೆಲಸ ಮಾಡಿದ್ದೀರಿ, ಸ್ಲಿಪ್ಸ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಫೀಲ್ಡರ್ ಮತ್ತು ಟೆಸ್ಟ್‌ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಪಾಲುದಾರ ಎಂದು ಬರೆದುಕೊಂಡಿದ್ದಾರೆ.

ದುಲೀಪ್ ಟ್ರೋಫಿಗಾಗಿ ಈಸ್ಟ್ ಝೋನ್ ತಂಡದ ಉಪನಾಯಕರಾಗಿ 15 ವರ್ಷದ ವೈಭವ್ ಸೂರ್ಯವಂಶಿಯನ್ನು ನೇಮಕ ಮಾಡಿರುವುದಕ್ಕೆ ಕೆಲ ಕ್ರಿಕೆಟ್ ದಿಗ್ಗಜರು ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಈಸ್ಟ್ ಝೋನ್ ಆಯ್ಕೆಗಾರರಲ್ಲಿ ಒಬ್ಬರಾದ ಪ್ರವಂಜನ್ ಮಲ್ಲಿಕ್ ಈ ನಿರ್ಧಾರದ ಹಿಂದಿನ ಕಾರಣ ವಿವರಿಸಿದ್ದಾರೆ. ಈ ಯುವ ಆಟಗಾರನಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಆಯ್ಕೆಗಾರರು ಬಯಸಿದ್ದರು. ಅವರು ದಿನದಿಂದ ದಿನಕ್ಕೆ ಹೆಚ್ಚು ಪಕ್ವವಾಗುತ್ತಿದ್ದಾರೆ. ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರಿಂದ ಅವರು ಇನ್ನಷ್ಟು ಬೆಳೆಯಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶ್ ದಯಾಳ್ ಅವರಿಗೆ ಅಲಹಾಬಾದ್ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಗಾಜಿಯಾಬಾದ್‌ನ ನ್ಯಾಯಾಲಯದಲ್ಲಿ ಅವರ ವಿರುದ್ಧ ನಡೆಯುತ್ತಿದ್ದ ಅತ್ಯಾಚಾರ ಪ್ರಕರಣಕ್ಕೆ ತಾತ್ಕಾಲಿಕವಾಗಿ ತಡೆ ಹಾಕಲಾಗಿದೆ.  ಎರಡು ಕಡೆಯ ವಾದ ಕೇಳಿದ ಕೋರ್ಟ್  ಮಧ್ಯಂತರ ಪರಿಹಾರ ನೀಡಿ ವಿಚಾರಣೆಯನ್ನು ನಿಲ್ಲಿಸಲು ಹೇಳಿದೆ. ಎಲ್ಲಾ ವಿವರಗಳನ್ನು ನೋಡಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದೆ. ಈ ಆದೇಶದಿಂದ ಯಶ್ ದಯಾಳ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಅವರನ್ನು ಹೊಸ ಕೋಚ್ ಆಗಿ ನೇಮಿಸಲಾಗಿದೆ. ಅವರು ಬ್ರೆಂಡನ್ ಮೆಕಲಮ್ ಅವರ ಸ್ಥಾನವನ್ನು ತುಂಬಲಿದ್ದಾರೆ. ಬೆನ್ ಸ್ಟೋಕ್ಸ್ ಬದಲಿಗೆ ಜೋ ರೂಟ್ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ.  ರೂಟ್ ಈ ಹಿಂದೆ ಇಂಗ್ಲೆಂಡ್‌ನ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ನಾಲ್ಕು ವರ್ಷಗಳ ನಂತರ ಜೋ ರೂಟ್ ಮತ್ತೊಮ್ಮೆ ಟೆಸ್ಟ್ ನಾಯಕರಾಗಿದ್ದಾರೆ.

ಐಸಿಸಿ ಮಹಿಳಾ ಅಂಡರ್-19 ವಿಶ್ವಕಪ್ 2027 ಏಷ್ಯಾ ಕ್ವಾಲಿಫೈಯರ್‌ನಲ್ಲಿ ಯುಎಇ ತಂಡ ಮಲೇಷ್ಯಾ ವಿರುದ್ಧ 1 ರನ್ ರೋಮಾಂಚಕ ಜಯ ಸಾಧಿಸಿ, ಮೊದಲ ಬಾರಿಗೆ ವಿಶ್ವಕಪ್​ಗೆ ಅರ್ಹತೆ ಪಡೆದಿದೆ. ಯುಎಇ ಮಹಿಳಾ ತಂಡ 95 ರನ್ ಗಳಿಸಿ, ಮಲೇಷ್ಯಾವನ್ನು 94 ರನ್‌ಗಳಿಗೆ ಕಟ್ಟಿಹಾಕಿತು. ಮಹಾಕ್ ಠಾಕೂರ್ ನಾಯಕತ್ವದ ಯುಎಇ, ಅರ್ಹತಾ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದು, 2027ರಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಸ್ಥಾನ ಭದ್ರಪಡಿಸಿಕೊಂಡಿದೆ.

ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯ ಕುರಿತಾದ ಮಹತ್ವದ ಅಪ್‌ಡೇಟ್ಸ್‌ ಹೊರಬಿದ್ದಿದೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಕ್ಷಿಣ ಆಫ್ರಿಕಾ, ನಮೀಬಿಯಾ ಹಾಗೂ ಜಿಂಬಾಬ್ವೆ ಆತಿಥ್ಯ ವಹಿಸಿವೆ. ಈ ಮೂರು ದೇಶಗಳ 12 ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ಖಚಿತಪಡಿಸಿದೆ. ಜೊತೆಗೆ ಜೋಹಾನ್ಸ್‌ಬರ್ಗ್‌ನ ಇನಾಂಡಾ ಪೋಲೋ ಕ್ಲಬ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿಶ್ವಕಪ್ ಲೋಗೋವನ್ನು ಅನಾವರಣಗೊಳಿಸಲಾಯಿತು.

 

Kishor KV

Leave a Reply

Your email address will not be published. Required fields are marked *