ಕೆನಡಾ ವಿರುದ್ಧ ಯುಎಇಗೆ ರೋಚಕ ಗೆಲುವು – ಕೊನೇ ಓವರ್ನಲ್ಲಿ ಕ್ರಿಕೆಟ್ ಲೋಕವನ್ನೇ ಬೆರಗಾಗಿಸಿದ ಯುಎಇ

ಟಿ20 ವಿಶ್ವಕಪ್ ನಲ್ಲಿ ಯುಎಇ ತಂಡ ಕ್ರಿಕೆಟ್ ಲೋಕವನ್ನೇ ಬೆಕ್ಕಸ ಬೆರಗು ಮಾಡಿದೆ. ಕೆನಡಾ ತಂಡವನ್ನು 5 ವಿಕೆಟ್ಗಳಿಂದ ಸೋಲಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ:ಟಿ20 ವಿಶ್ವಕಪ್ನಲ್ಲಿ ಆಸೀಸ್ಗೆ ಮುಖಭಂಗ – ಜಿಂಬಾಬ್ವೆ ವಿರುದ್ಧ ಸೋತ ಆಸ್ಟ್ರೇಲಿಯಾ
ಶುಕ್ರವಾರ ನಡೆದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತನ್ನ ಎದುರಾಳಿ ತಂಡ ಕೆನಡಾವನ್ನು ಕೊನೇ ಓವರ್ನಲ್ಲಿ ಸೋಲಿಸಿ ವಿಜಯಶಾಲಿಯಾಗಿದೆ. ಕೆನಡಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರು ಎಡವಿದರೂ ಕೂಡಾ ಹರ್ಷ್ ಠಾಕರ್ 41 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಲು ಸಹಾಯ ಮಾಡಿದರು. ನವನೀತ್ ಧಲಿವಾಲ್ ಕೂಡ 34 ರನ್ ಬಾರಿಸಿದರು. 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 150 ರನ್ ಸ್ಕೋರ್ ದಾಖಲಾಯಿತು. ಯುಎಇ ಬೌಲರ್ ಜುನೈದ್ ಸಿದ್ದಿಕಿ ಮಾರಕ ಬೌಲಿಂಗ್ ಮಾಡಿ, 5 ವಿಕೆಟ್ಗಳ ಗೊಂಚಲು ಪಡೆದರು.
151 ರನ್ಗಳ ಗುರಿಯನ್ನು ಬೆನ್ನಟ್ಟಿದ ಯುಎಇ ತಂಡವು ಆರಂಭದಲ್ಲಿ ಆಘಾತ ಅನುಭವಿಸಿತು. ನಾಯಕ ಮೊಹಮ್ಮದ್ ವಾಸಿಮ್ ಕೇವಲ 4 ರನ್ಗಳಿಸಿ ಔಟ್ ಆದರು. ನಂತರ ಬಂದ ಅಲಿಶಾನ್ ಶರಫು 13 ಎಸೆತಗಳಲ್ಲಿ 5, ಮಯಾಂಕ್ ಚೌದರಿ 6 ಎಸೆತಗಳಲ್ಲಿ 4, ಹರ್ಷಿತ್ ಕೌಶಿಕ್ 9 ಎಸೆತಗಳಲ್ಲಿ 5 ರನ್ಗಳಿಸಿ ಔಟ್ ಆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಕಡೆ ಆರ್ಯಾನ್ಶ್ ಶರ್ಮಾ ಏಕಾಂಗಿಯಾಗಿ ಹೋರಾಡುತ್ತಾ ಸ್ಕೋರ್ ಕಡಿಮೆಯಾಗದಂತೆ ತಡೆದರು. ಯುಎಇ 66ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಆರಂಭಿಕ ಆಟಗಾರ ಆರ್ಯನ್ ಶರ್ಮಾ ಜೊತೆಗೆ ಸೇರಿದ ಶೋಯೆಬ್ ಖಾನ್ 84 ರನ್ಗಳ ಮ್ಯಾಚ್ ವಿನ್ನಿಂಗ್ ಜೊತೆಯಾಟ ನಡೆಸಿದರು. ಇವರಿಬ್ಬರ ನಡುವಿನ 84 ರನ್ಗಳ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸಿತು. ಖಾನ್ ಕೇವಲ 29 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ಗಳ ಸಹಿತ 51 ರನ್ ಗಳಿಸಿ ತಂಡದ ಸ್ಕೋರ್ ಟೈ ಆದ ನಂತರ ಔಟ್ ಆದರು. ಆರ್ಯನ್ಶ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದು 6 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 72 ರನ್ಗಳಿಸಿ ಕೊನೇ ಓವರ್ನಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ನೋಡಿರಿ

