ಅಮೆರಿಕದಿಂದ ಇಸ್ರೇಲ್‌ಗೆ ಯುದ್ಧ ವಿಮಾನ ಎಂಟ್ರಿ.. ಇರಾನ್ ಕಥೆ ಮುಗಿತಾ?

ಅಮೆರಿಕದಿಂದ ಇಸ್ರೇಲ್‌ಗೆ ಯುದ್ಧ ವಿಮಾನ ಎಂಟ್ರಿ.. ಇರಾನ್ ಕಥೆ ಮುಗಿತಾ?
Iran Supreme Leader Ayatollah Khamenei (left) and US President Donald Trump [File photos] | AFP

ಗಾಜಾ & ಇಸ್ರೇಲ್, ಯೆಮನ್ & ಇಸ್ರೇಲ್, ಲೆಬನಾನ್ & ಇಸ್ರೇಲ್, ಸಿರಿಯಾ & ಇಸ್ರೇಲ್ ಯುದ್ಧ ನಡುವೆ ದಿಢೀರ್, ಇರಾನ್ ಜೊತೆಯಲ್ಲಿಯೂ ಇದೀಗ ಘೋರ ಯುದ್ಧವನ್ನು ಶುರು ಮಾಡಿದೆ ಇಸ್ರೇಲ್. ಮಧ್ಯಪ್ರಾಚ್ಯದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿ, ಪರಮಾಣು ಸಾಮರ್ಥ್ಯವನ್ನ ಅಂದ್ರೆ ಅಣುಬಾಂಬ್ ಇರುವ ಇರಾನ್ ವಿರುದ್ಧವೇ ನೇರವಾಗಿ ದೊಡ್ಡ ಮಟ್ಟದ ದಾಳಿ ನಡೆಸಿ ಕಾರ್ಯಾಚರಣೆ ಮುಂದುವರಿಸಿದೆ ಇಸ್ರೇಲ್.  ಇರಾನ್ ಕೂಡ ದಾಳಿ ನಡೆಸುತ್ತಿದೆ. ಎರಡು ದೇಶಗಳು ಜಿದ್ದಿಗೆ ಬಿದ್ದಂತೆ ಡ್ರೋಣ್ ಕ್ಷಿಪಣಿ ದಾಳಿಯನ್ನ ನಡೆಸುತ್ತಿದ್ದು, ಒಬ್ಬರನೊಬ್ಬರು ಧ್ವಂಸ ಮಾಡಿಕೊಳ್ಳುತ್ತಿದ್ದಾರೆ.  ಇಸ್ರೇಲ್ ನ್ಯೂಕ್ಲಿಯರ್ ದಾಳಿ ಮಾಡಿ ಇಡೀ ಇರಾನ್ ನೆಲವನ್ನು ಉಡಾಯಿಸಲು ಸಜ್ಜಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಟ್ರಂಪ್ ಮಾತು ಧಿಕ್ಕರಿಸಿದ ಇರಾನ್     

ಮಧ್ಯಪ್ರಾಚ್ಯ ದೇಶಗಳಾದ ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನ 6ನೇ ದಿನಕ್ಕೆ ಕಾಲಿಟ್ಟಿದ್ದು, ಎರಡು ದೇಶಗಳ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ಈ ಮಧ್ಯೆ ಅಮೆರಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇರಾನ್‌ಗೆ ಬೇಷರತ್ತಾಗಿ ಶರಣಾಗುವಂತೆ ಕರೆ ನೀಡಿದ್ದು, ಈ ಕರೆಯನ್ನು ಇರಾನ್‌ ಧಿಕ್ಕರಿಸಿದೆ. ಜೊತೆಗೆ   ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿಯನ್ನು ಮುಂದುವರಿಸಿದೆ. ಇರಾನ್‌ ಆಕಾಶದ ಮೇಲೆ ಇಸ್ರೇಲ್‌ಗೆ ಸಂಪೂರ್ಣ ನಿಯಂತ್ರಣವಿದೆ ಎಂದು ಇಸ್ರೇಲ್‌ ಹೇಳಿಕೊಂಡಿದ್ದರೆ, ಟೆಲ್ ಅವಿವ್‌ನಲ್ಲಿರುವ ಪ್ರಮುಖ ಗುಪ್ತಚರ ಕೇಂದ್ರದ ಮೇಲೆ ದಾಳಿ ನಡೆಸಿದೆ ಎಂದು ಇರಾನ್ ಹೇಳಿದೆ. ನಾಗರಿಕ ಮತ್ತು ಮಿಲಿಟರಿ ಗುರಿಗಳ ಮೇಲೆ ದಾಳಿಗಳು ನಡೆದಿವೆ ಎಂದು ಇಸ್ರೇಲಿ ಮೂಲಗಳು ದೃಢಪಡಿಸಿವೆ. ಇರಾನ್‌ನ ಪರಮಾಣು ನೆಲೆಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಇರಾನ್‌ ಮೇಲಿನ ಇಸ್ರೇಲಿ ದಾಳಿಗಳಲ್ಲಿ ಕನಿಷ್ಠ 585 ಜನರು ಸಾವನ್ನಪ್ಪಿದ್ದಾರೆ ಮತ್ತು 1,326 ಜನರು ಗಾಯಗೊಂಡಿದ್ದಾರೆ ಎಂದು  ವರದಿಯಾಗಿದೆ.

ವಾರ್‌ಗೆ ಎಂಟ್ರಿ ಆಗುತ್ತಾ ಅಮೆರಿಕ?

ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ತಾಳ್ಮೆ ಕ್ಷೀಣಿಸುತ್ತಿದೆ.   ಇರಾನ್‌ ಬೇಷರತ್ತಾಗಿ ಶರಾಣಾಗಬೇಕು ಇಲ್ಲವಾದಲ್ಲಿ ಪರಿಸ್ಥಿತಿತಿ ನೆಟ್ಟಗಿರಲ್ಲ ಎಂದು ಹೇಳಿದ್ದಾರೆ. ಈ ಮಧ್ಯೆ ಇರಾನಿನ ದಾಳಿಗಳಿಂದ ಇಸ್ರೇಲ್ ಅನ್ನು ರಕ್ಷಿಸಲು ಮತ್ತು ಅಮೆರಿಕದ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸುವ ಇರಾನ್‌ನ ದಾಳಿಗೆ ಪ್ರತಿಕ್ರಿಯಿಸಲು ಅಮೆರಿಕವು ಮಧ್ಯಪ್ರಾಚ್ಯಕ್ಕೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮಿಲಿಟರಿ ವಿಮಾನಗಳು ಮತ್ತು ಯುದ್ಧನೌಕೆಗಳನ್ನು ಸ್ಥಳಾಂತರಿಸುತ್ತಿದೆ. ನಿಧಾನವಾಗಿ ಇರಾನ್ ಮೇಲೆ ದಾಳಿ ನಡೆಸೋಕೆ ಅಮೆರಿಕಾ ಕೂಡ ಮುಂದಾಗುತ್ತಿದೆ. , ಅಮೆರಿಕವು ಮಧ್ಯಪ್ರಾಚ್ಯಕ್ಕೆ 30 ಕ್ಕೂ ಹೆಚ್ಚು ವೈಮಾನಿಕ ಇಂಧನ ತುಂಬುವ ಟ್ಯಾಂಕರ್‌ಗಳನ್ನು ಕಳುಹಿಸಿದೆ. ಈ ಟ್ಯಾಂಕರ್‌ಗಳು ಇಸ್ರೇಲಿ ಯುದ್ಧ ವಿಮಾನಗಳಿಗೆ ಗಾಳಿಯಲ್ಲಿ ಇಂಧನ ತುಂಬಲು ಸಹಾಯ ಮಾಡುತ್ತವೆ, ಇದರಿಂದಾಗಿ ಅವು ಇರಾನ್‌ನ ಆಳದಲ್ಲಿ ದೂರದವರೆಗೆ ದಾಳಿ ಮಾಡಬಹುದು. ಈ ಸಿದ್ಧತೆಗಳು ಕೇವಲ ಇಂಧನ ತುಂಬುವುದಕ್ಕೆ ಸೀಮಿತವಾಗಿಲ್ಲ ಎಂದು ಮೂಲಗಳು ಹೇಳುತ್ತವೆ. ಪರಿಸ್ಥಿತಿ ಹದಗೆಟ್ಟರೆ, ಅಮೆರಿಕ-ಇಸ್ರೇಲ್ ಜಂಟಿಯಾಗಿ ಬಂಕರ್-ಮುರಿದುಗೊಳಿಸುವ ಬಾಂಬ್‌ಗಳೊಂದಿಗೆ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಬಹುದು ಎಂಬ ಆಯ್ಕೆಯನ್ನು ಯುಎಸ್ ಸೆಂಟ್ರಲ್ ಕಮಾಂಡ್ ಟ್ರಂಪ್‌ಗೆ ನೀಡಿದೆ. ಇದು ಅಮೆರಿಕದ ಚಟುವಟಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಖಮೇನಿ ಕಥೆ ಮುಗಿಸಲು ಆಪರೇಷನ್?

ಇರಾನ್ ದೇಶದ ಸುಪ್ರೀಂ ಲೀಡರ್ ಅಂತಾ ಕರೆಯಲಾಗುವ ಖಮೇನಿ ಅಡಗಿ ಕೂತಿರುವ ಜಾಗ ನಮಗೆ ಗೊತ್ತಾಗಿದೆ, ಖಮೇನಿ ಕಥೆ ಕೂಡ ಮುಗಿಸಲಾಗುವುದು ಎಂಬ ಮುನ್ಸೂಚನೆಯನ್ನ   ಇಸ್ರೇಲ್ & ಅಮೆರಿಕ ನೀಡದೆ.

 ಟೆಹ್ರಾನ್‌ನಲ್ಲಿ ಸ್ಮಾಶಾನ ಮೌನ

ಇಸ್ರೇಲ್‌ ದಾಳಿಯಿಂದ ಇರಾನ್‌ನ ರಾಜಧಾನಿ ಟೆಹ್ರಾನ್‌ ಅಕ್ಷರಶಃ ಕಂಗೆಟ್ಟಿದೆ. ಮಧ್ಯಪ್ರಾಚ್ಯದ ಅತಿದೊಡ್ಡ ನಗರಗಳಲ್ಲಿ ಒಂದಾದ ಟೆಹ್ರಾನ್ ಸುಮಾರು 10 ದಶಲಕ್ಷ ಜನರನ್ನು ಹೊಂದಿದೆ. ಇದು ಸರಿಸುಮಾರು ಇಸ್ರೇಲ್‌ನ ಸಂಪೂರ್ಣ ಜನಸಂಖ್ಯೆಗೆ ಸಮನಾಗಿರುತ್ತದೆ. ಯುದ್ಧ ಪ್ರಾರಂಭವಾದಾಗಿನಿಂದ ಜನರು ಟೆಹ್ರಾನ್‌ ನಿಂದ ಪಲಾಯನ ಮಾಡುತ್ತಿದ್ದಾರೆ. ನಗರದಲ್ಲಿ ಸ್ಮಶಾನ ಮೌನ ಆವರಿಸಿದೆ. ಅನೇಕ ಅಂಗಡಿಗಳು ಮುಚ್ಚಲ್ಪಟ್ಟಿವೆ. ಜನರು ತಮ್ಮ ಪ್ರಾಣ ಉಳಿದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳವಾರ ತೆಹ್ರಾನ್‌ ಮೇಲೆ ಇಸ್ರೇಲ್‌ ಮಾಡಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಖಮೇನಿಯವರ ಆಪ್ತರಾಗಿದ್ದ ಸೇನಾ ಸಲಹೆಗಾರ  ಅಲಿ ಶಾದ್ಮಾನಿಯನ್ನು ಹತ್ಯೆಗೈಯ್ಯಲಾಗಿದೆ. ಇದನ್ನು ಇಸ್ರೇಲ್‌ ಸೇನೆ ಧೃಡಪಡಿಸಿದೆ. ಆದರೆ ಇರಾನ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಭಾನುವಾರವಷ್ಟೇ, ಇರಾನ್‌ನ ಸೇನಾ ಗುಪ್ತಚರ ಮುಖ್ಯಸ್ಥ ಮೊಹಮ್ಮದ್‌ ಕಾಜೆಮಿಯನ್ನು ಹತ್ಯೆಗೈಯ್ಯಲಾಗಿತ್ತು. ಈ ಮೂಲಕ, ‘ಖಮೇನಿ ಸಾವಿನೊಂದಿಗೇ ಈ ಸಂಘರ್ಷ ಅಂತ್ಯವಾಗುವುದು’ ಎಂದು ಘೋಷಿಸಿರುವ ಇಸ್ರೇಲ್‌, ಖಮೇನಿಯರ ಆತ್ಯಾಪ್ತರನ್ನೆಲ್ಲಾ ಒಬ್ಬರ ಮೇಲೊಬ್ಬರಂತೆ ಮುಗಿಸುತ್ತಿದೆ.

 ಟೆಹ್ರಾನ್‌ ತೊರೆಯಿರಿ ಕರೆ ಕೊಟ್ಟ ಟ್ರಂಪ್‌, ಇಸ್ರೇಲ್‌

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಇರಾನ್‌ ಅಣ್ವಸ್ತ್ರವನ್ನು ಹೊಂದಬಾರದು. ಎಲ್ಲರೂ ತಕ್ಷಣವೇ ತೆಹ್ರಾನ್‌ ತೊರೆಯಿರಿ’ ಎಂದು ಕರೆ ನೀಡಿದ್ದಾರೆ. ಅತ್ತ ಇಸ್ರೇಲ್‌ ಸೇನೆ ಕೂಡ, ತೆಹ್ರಾನ್‌ನಲ್ಲಿರುವ 3,33,000 ಜನರಿಗೆ ಸ್ಥಳಾಂತರಗೊಳ್ಳಬೇಕು ಎಂದು ಸೂಚಿಸಿದೆ. ಈ ಮೂಲಕ, ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುವ ಪರೋಕ್ಷ ಸಂದೇಶ ನೀಡಿದೆ. ಗಾಜಾದಲ್ಲಿ ಕೂಡ ಇದೇ ರೀತಿ ಇಸ್ರೇಲ್‌, ನಗರವನ್ನು ತೆರವು ಮಾಡಿಸಿ ಹಮಾಸ್‌ ಉಗ್ರರ ಮೇಲೆ ದಾಳಿ ನಡೆಸಿತ್ತು.

ಟರ್ಕಿಯತ್ತ ಇರಾನಿಗಳ ಗುಳೆ

ಇಸ್ರೇಲ್‌ನ ಸತತ ದಾಳಿಗಳಿಂದ ಇರಾನ್‌ ಜನರು ಕಂಗೆಟ್ಟಂತೆ ಕಾಣುತ್ತಿದ್ದು, ಟರ್ಕಿಯತ್ತ ತಮ್ಮ ಸಾಮಾನು ಸರಂಜಾಮಿನೊಂದಿಗೆ ವಲಸೆ ಹೋಗುತ್ತಿದ್ದಾರೆ. ಟರ್ಕಿಯಲ್ಲಿ ತಾತ್ಕಾಲಿಕ ಆಶ್ರಯ ನೀಡುವಂತೆ ಅಲ್ಲಿನ ಸರ್ಕಾರಕ್ಕೆ ಕೋರಿದ್ದಾರೆ. ಇರಾನ್‌ನೊಂದಿಗೆ ಟರ್ಕಿ 569 ಕಿ.ಮೀ. ಉದ್ದದ ಗಡಿ ಹಂಚಿಕೊಂಡಿದೆ.

ಇರಾನ್ ಇಸ್ರೇಲ್ ವಾರ್ ಇರಾಕ್ ಸೈಲೆಂಟ್ 

ಇದೀಗ ಇಸ್ರೇಲ್ ಮೇಲೆ ಯುದ್ಧ ಸಾರಿರುವ ಇರಾನ್ ನ್ಯೂಕ್ಲಿಯರ್ ಬಾಂಬ್ ಪಡೆದುಕೊಳ್ಳುವುದಕ್ಕೆ ಭಾರೀ ಸಿದ್ಧತೆಯಲ್ಲಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಈ ಎರಡೂ ದೇಶಗಳ ನಡುವಿನ ದೇಶವಾದ ಇರಾಕ್ ಸೈಲೆಂಟ್ ಆಗಿದೆ. ಇರಾಕ್ ದೇಶವು ಇರಾನ್‌ ಮತ್ತು ಇಸ್ರೇಲ್‌ನ ನಡುವಿನ ಬಗ್ಗೆ ಯಾವುದೇ ವಿಚಾರವನ್ನೂ ಪ್ರಸ್ತಾಪನೆ ಮಾಡುತ್ತಿಲ್ಲ. ಇದರ ನಡುವೆ ಅನವಶ್ಯಕವಾಗಿ ಇಸ್ರೇಲ್ ದೇಶವು ಇರಾಕ್‌ನ ಎಳೆದು ತಂದಿದೆ. ಇರಾಕ್ ದೇಶದ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್‌ಗೆ ಆಗಿದ್ದ ಗತಿಯೇ ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೂ ಆಗಬುಹುದೇನೋ ಅಂತ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್‌ ಹೇಳಿದ್ದಾರೆ. ಇದು ಮತ್ತೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇಸ್ರೇಲ್ ಅಂತೂ ರೊಚ್ಚಿಗೆದ್ದು ಕೂತಿದ್ದು ತನ್ನ ಕೈಗೆ ಸಿಗುವ ಇರಾನ್ ದೇಶದ ಯಾರನ್ನೂ ಬಿಡುತ್ತಿಲ್ಲ. ಹುಡುಕಿ ಹುಡುಕಿ ಹೊಡೆಯುತ್ತಿದೆ. ಅದರಲ್ಲೂ ಇರಾನ್ ದೇಶದ ಸೇನೆ ಮುಖ್ಯಸ್ಥರು & ರಾಜಕೀಯ ನಾಯಕರನ್ನ ಮುಲಾಜು ನೋಡದೆಯೇ ಮುಗಿಸುತ್ತಿದೆ. ಇಸ್ರೇಲ್‌ಗೆ ಅಮೆರಿಕ ಕೂಡ ಸಂಪೂರ್ಣವಾಗಿ ಕೈ ಜೋಡಿಸಿದ್ರೆ, ಭೀಕರ ಅನಾಹುತ ನಡೆಯುವುದು ಪಕ್ಕಾ.

Kishor KV