ಗೌತಮ್ ಅದಾನಿಗೆ ಮಹಾ ಸಂಕಷ್ಟ – ನೆಲಕಚ್ಚಿದ ಷೇರು, ಎಷ್ಟು ಕೋಟಿ ಲಾಸ್?
ಅರೆಸ್ಟ್ ವಾರೆಂಟ್.. ಏನಿದು ಆರೋಪ?
ಎಷ್ಟು ಹಣವಿದ್ದರೇನು.. ಎಷ್ಟು ಶ್ರೀಮಂತರಾದ್ರೇನು?.. ಗ್ರಾಹಚಾರ ಕೊಟ್ಟರೇ ಎಷ್ಟೇ ದುಡ್ಡು ಇದ್ದರು ಪ್ರಯೋಜನಕ್ಕೆ ಬರಲ್ಲ.. ಯಾವುದು ನಾವು ಅಂದುಕೊಂಡ ಹಾಗೋ ಆಗಲ್ಲ.. ಅದಕ್ಕೆ ತಾಜಾ ಉದಾಹರಣೆ ಅದಾನಿ.. ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ.. ಮಕ್ಕಳು ಮರಿ ಮಕ್ಕಳು.. ಅವರ ಮಕ್ಕಳು ಕುಂತು ತಿಂದ್ರು ಕರಗದಷ್ಟು ಆಸ್ತಿ ಗೌತಮ್ ಅದಾನಿ ಬಳಿ ಇದೆ. ಆದ್ರೆ ಈಗ ಲಂಚದ ಆರೋಪದಲ್ಲಿ ಜೈಲು ಸೇರುವ ಸ್ಥಿತಿಗೆ ಗೌತಮ್ ಅದಾನಿ ಬಂದಿದ್ದಾರೆ.. ಹಾಗಿದ್ರೆ ಅವರ ಮೇಲೆ ಇರೋ ಆರೋಪವೇನು? ಎಷ್ಟು ಕೋಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ:‘ಪುಷ್ಪ 2’ ಸಿನಿಮಾ ಟಿಕೆಟ್ ದರ ಹೆಚ್ಚಳ ಸಾಧ್ಯತೆ – ಅಲ್ಲು ಅರ್ಜುನ್ ಅಭಿಮಾನಿಗಳ ಅಸಮಾಧಾನ
ಗೌತಮ್ ಅದಾನಿ, ಸಾಗರ್ ಅದಾನಿ ಸೇರಿ 8 ಮಂದಿ ವಿರುದ್ಧ ಅಮೆರಿಕ ಕೋರ್ಟ್ನಲ್ಲಿ ವಂಚನೆಯ ಆರೋಪ ದಾಖಲಾಗಿದೆ. ಗೌತಮ್ ಅದಾನಿ, ಸಾಗರ್ ಅದಾನಿ ವಿರುದ್ಧ ನ್ಯೂಯಾರ್ಕ್ ಈಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್ನಿಂದ ಅರೆಸ್ಟ್ ವಾರಂಟ್ ಹೊರಡಿಸಲಾಗಿದೆ. ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿ ಗುತ್ತಿಗೆ ಪಡೆದ ಆರೋಪ ಈ 8 ಮಂದಿ ವಿರುದ್ಧ ಕೇಳಿಬಂದಿದೆ.
ಅದಾನಿ ಗ್ರೂಪ್ ಗೆ ಹಿಂಡನ್ಬರ್ಗ್ ಬಳಿಕ ಮತ್ತೊಂದು ಗಂಡಂತಾರ ಎದುರಾಗಿದೆ. ಗೌತಮ್ ಅದಾನಿ ಸೇರಿದಂತೆ ಎಂಟು ಮಂದಿ ವಿರುದ್ಧ ಅಮೆರಿಕದಲ್ಲಿ ವಂಚನೆಯ ಆರೋಪ ದಾಖಲಾಗಿವೆ. ಗೌತಮ್ ಅದಾನಿ ಮಾತ್ರವಲ್ಲದೇ ಅವರ ಸೋದರಳಿಯ ಸಾಗರ್ ಅದಾನಿ, ವಿನೀತ್ ಎಸ್ ಜೈನ್, ರಂಜಿತ್ ಗುಪ್ತಾ, ಸಿರಿಲ್ ಕ್ಯಾಬೆನಿಸ್, ಸೌರಭ್ ಅಗರ್ವಾಲ್, ದೀಪಕ್ ಮಲ್ಹೋತ್ರಾ ಮತ್ತು ರೂಪೇಶ್ ಅಗರ್ವಾಲ್ ವಿರುದ್ಧ ಲಂಚದ ಆರೋಪ ಹೊರಿಸಲಾಗಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಅದಾನಿ ಮತ್ತು ಇತರ ಆರೋಪಿಗಳು ಬಹುಕೋಟಿ ಮೌಲ್ಯದ ಸೌರಶಕ್ತಿ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ 2100 ಕೋಟಿಗಿಂತಲೂ ಹೆಚ್ಚು ಲಂಚವನ್ನು ನೀಡುವುದಾಗಿ ಆಮಿಷ ನೀಡಿದ್ದಾರೆಂಬ ಆರೋಪ. ಈ ಸುದ್ದಿ ಹೊರಬಂದ ನಂತರ, ಅದಾನಿ ಗ್ರೂಪ್ನ ಎಲ್ಲಾ ಕಂಪನಿಗಳ ಷೇರುಗಳು ಗುರುವಾರ ನೆಲಕಚ್ಚಿವೆ. ಅಮೆರಿಕದ ಹೂಡಿಕೆದಾರರ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರಿಂದ ಮತ್ತು ಅಮೆರಿಕದ ಕಾನೂನಿನ ಪ್ರಕಾರ ಆ ಹಣವನ್ನು ಲಂಚವಾಗಿ ನೀಡುವುದು ಅಪರಾಧ ಎಂಬ ಕಾರಣಕ್ಕೆ ಅಮೆರಿಕದಲ್ಲಿ ಪ್ರಕರಣ ದಾಖಲಾಗಿದೆ. ಈ ಲಂಚದ ಹಣವನ್ನು ಸಂಗ್ರಹಿಸಲು ಗೌತಮ್ ಅದಾನಿ ಅವರು ಅಮೆರಿಕ, ವಿದೇಶಿ ಹೂಡಿಕೆದಾರರು ಮತ್ತು ಬ್ಯಾಂಕ್ಗಳಿಗೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಲಾಗಿದೆ . ಈ ಯೋಜನೆಯು 20 ವರ್ಷಗಳಲ್ಲಿ $2 ಶತಕೋಟಿಗಿಂತ ಹೆಚ್ಚಿನ ಲಾಭವನ್ನು ಗಳಿಸುವ ನಿರೀಕ್ಷೆಯಿತ್ತು. ಬುಧವಾರವಷ್ಟೇ, ಅದಾನಿ ಗ್ರೂಪ್ 20 ವರ್ಷಗಳ ಗ್ರೀನ್ ಬಾಂಡ್ಗಳ ಮಾರಾಟದಿಂದ $600 ಮಿಲಿಯನ್ ಸಂಗ್ರಹಿಸುವುದಾಗಿ ಘೋಷಿಸಿತ್ತು. ಇದಾದ ಕೆಲವೇ ಗಂಟೆಗಳ ನಂತರ ಗೌತಮ್ ಅದಾನಿ ಮೇಲೆ ವಂಚನೆಯ ಆರೋಪ ಬಂದಿದೆ. ಆರೋಪ ಬರುತ್ತಿದ್ದಂತೆ ಗ್ರೀನ್ ಎನರ್ಜಿ ಕಂಪನಿ ಈ ಯೋಜನೆ ವಾಪಸ್ ತೆಗೆದುಕೊಂಡಿದೆ.