ಮಧ್ಯಪ್ರದೇಶದಲ್ಲಿ ಬೋರ್‌ವೆಲ್‌ಗೆ ಬಿದ್ದ 2 ವರ್ಷದ ಬಾಲಕ – 70 ಅಡಿ ಆಳದಲ್ಲಿರೋ ಕಂದ, ಭರದಿಂದ ಸಾಗಿರೋ ರಕ್ಷಣಾಕಾರ್ಯ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಗುರುವಾರ ಸಂಜೆ ಎರಡೂವರೆ ವರ್ಷದ ಪುಟ್ಟ ಬಾಲಕನೊಬ್ಬ ತೆರೆದ ಬೋರ್‌ವೆಲ್‌ಗೆ ಬಿದ್ದಿದ್ದು, ಸುಮಾರು 70 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಅಂದಾಜಿಸಲಾಗಿದೆ. ಆತನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮಗುವಿನ ಚಲನವಲನಗಳನ್ನು ಗಮನಿಸಲು ಬೋರ್‌ವೆಲ್‌ನೊಳಗೆ ಕ್ಯಾಮೆರಾದಿಂದ ನೋಡಲಾಗುತ್ತಿದೆ.
ಉಜ್ಜಯಿನಿ ಜಿಲ್ಲೆಯ ಬಡನಗರ ತಹಸಿಲ್ ವ್ಯಾಪ್ತಿಯ ಝಲಾರಿಯಾ ಗ್ರಾಮ ದಲ್ಲಿ ಏಪ್ರಿಲ್ 9 ರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಾಲಕನನ್ನು ರಾಜಸ್ಥಾನದ ಪಾಲಿ ಜಿಲ್ಲೆಯ ಭಗೀರಥ್ಎಂ ದು ಗುರುತಿಸಲಾಗಿದೆ. ಕುರಿಗಾಹಿ ಕುಟುಂಬಕ್ಕೆ ಸೇರಿದ ಈ ಬಾಲಕ, ತನ್ನ ಪೋಷಕರೊಂದಿಗೆ ಕುರಿ ಮೇಯಿಸಲು ಇಲ್ಲಿಗೆ ಬಂದಿದ್ದನು. ಕುರಿ ಬೋರ್‌ವೆಲ್ ಮೇಲಿದ್ದ ಕಲ್ಲನ್ನು ತಳ್ಳಿದಾಗ, ಕುತೂಹಲದಿಂದ ಬೋರ್‌ವೆಲ್ ಒಳಗೆ ಇಣುಕಿ ನೋಡಿದ ಬಾಲಕ ಆಯತಪ್ಪಿ ಒಳಗೆ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹುಲಿಕಲ್ ಘಾಟ್‌ನಲ್ಲಿ ಮಣ್ಣು ಕುಸಿದು ಮೃತಪಟ್ಟ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ – ಸಿಎಂ ಘೋಷಣೆ
ಬಾಲಕನು ಸುಮಾರು 70 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಅಂದಾಜಿಸಲಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ಪೊಲೀಸರು ಜೆಸಿಬಿ ಹಾಗೂ ಪೋಕ್ಲೇನ್ ಯಂತ್ರಗಳ ಸಹಾಯದಿಂದ ಬೋರ್‌ವೆಲ್‌ಗೆ ಸಮಾನಾಂತರವಾಗಿ ಗುಂಡಿ ತೋಡುತ್ತಿದ್ದಾರೆ. ಆಮ್ಲಜನಕ ಸರಬರಾಜು: ಬೋರ್‌ವೆಲ್‌ನೊಳಗೆ ಪೈಪ್ ಮೂಲಕ ಆಮ್ಲಜನಕವನ್ನು ನಿರಂತರವಾಗಿ ಕಳುಹಿಸಲಾಗುತ್ತಿದೆ.

ನೋಡಿರಿ

