ವಾಟ್ಸಾಪ್ ಬಳಕೆದಾರರಿಗೆ ಮೆಟಾ ಕಂಪನಿಯಿಂದ ಗುಡ್ ನ್ಯೂಸ್ – ಒಂದೇ ಫೋನ್ ನಲ್ಲಿ ಏಕಕಾಲಕ್ಕೆ 2 ಅಕೌಂಟ್ ಬಳಸಲು ಅವಕಾಶ

ವಾಟ್ಸಾಪ್ ಬಳಕೆದಾರರಿಗೆ ಮೆಟಾ ಕಂಪನಿಯಿಂದ ಗುಡ್ ನ್ಯೂಸ್ – ಒಂದೇ ಫೋನ್ ನಲ್ಲಿ ಏಕಕಾಲಕ್ಕೆ 2 ಅಕೌಂಟ್ ಬಳಸಲು ಅವಕಾಶ

ವಾಟ್ಸಾಪ್ ಬಳಕೆದಾರರಿಗೆ ಗುಡ್​ನ್ಯೂಸ್ ಒಂದು ಬಂದಿದೆ. ಒಂದೇ ಫೋನ್​ನಲ್ಲಿ ಎರಡೆರಡು ಅಕೌಂಟ್ ಬಳಸಬಹುದು. ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್‌ ಹೊಸ ಫೀಚರ್‌ ಪ್ರಕಟಿಸಲು ಮುಂದಾಗುತ್ತಿದೆ. ಇನ್ನು ಮುಂದೆ ವಾಟ್ಸಪ್‌ನಲ್ಲಿ ಏಕಕಾಲದಲ್ಲಿ ಎರಡು ಮೊಬೈಲ್ ನಂಬರ್‌ಗಳ ಅಕೌಂಟ್ ಬಳಸಿ ಸಂಹವನ ನಡೆಸಬಹುದು.

ಇದನ್ನೂ ಓದಿ : ಚಳಿಗಾಲಕ್ಕೂ ಮುನ್ನ ದೆಹಲಿಯ ಗಾಳಿ ಗುಣಮಟ್ಟ ಕುಸಿತ – ಮತ್ತೊಮ್ಮೆ ಅಪ್ಪಳಿಸಲಿದ್ಯಾ ವಿಷಪೂರಿತ ಗಾಳಿ?

ಕೋಟ್ಯಂತರ ಬಳಕೆದಾರರ ನೆಚ್ಚಿನ ವಾಟ್ಸಾಪ್​ ಈಗ ಮತ್ತಷ್ಟು ಅಪ್​ಡೇಟ್ ಆಗ್ತಿದೆ. ಫೋನ್‌ಗೆ ಹೇಗೆ ಎರಡೆರೆಡು ಸಿಮ್‌ ಇದೆಯೋ ಹಾಗೆಯೇ ಇನ್ಮುಂದೆ ನೀವು ಏಕಕಾಲದಲ್ಲಿ ಎರಡು ವಾಟ್ಸಾಪ್‌ ಖಾತೆಗಳನ್ನು ಲಾಗ್ ಇನ್ ಮಾಡಬಹುದು. ಹೊಸ ಫೀಚರ್ ಪ್ರಕಾರ ಬ್ಯುಸಿನೆಸ್ ಹಾಗೂ ಪರ್ಸನಲ್‌ ನಂಬರ್​ನಲ್ಲಿ ಬೇರೆ ಬೇರೆ ಅಕೌಂಟ್​ಗಳನ್ನ ಕ್ರಿಯೇಟ್ ಮಾಡಬಹುದು. ಈ ಹಿಂದೆ, ವಾಟ್ಸಾಪ್‌ನಲ್ಲಿ ಬೇರೆ ಖಾತೆ ಬಳಸಲು ಬಳಕೆದಾರರು ಮತ್ತೊಂದು ಅಕೌಂಟ್‌ನಿಂದ ಲಾಗ್ ಔಟ್ ಆಗಬೇಕಿತ್ತು. ನಂತರ ತಮ್ಮ ಇನ್ನೊಂದು ಖಾತೆಗೆ ಲಾಗ್​ಇನ್ ಆಗ್ಬೇಕಿತ್ತು. ಈ ಮೊದಲು ಎರಡು ನಂಬರ್‌ ಅಕೌಂಟ್ ಬಳಸಬೇಕಾದರೆ ಎರಡು ಮೊಬೈಲ್‌ಗಳನ್ನು ಇಟ್ಟುಕೊಳ್ಳಬೇಕಿತ್ತು ಅಥವಾ ಇನ್ನೊಂದು ನಂಬರ್‌ಗೆ ಲಾಗೌಟ್ ಮಾಡಿ ಬದಲಿಸಿಕೊಳ್ಳಬೇಕಿತ್ತು. ಈ ರೀತಿ ಮಾಡಿದರೆ ಮೊದಲು ಬಳಸುವ ಹಾಲಿ ನಂಬರ್‌ನ ಅಕೌಂಟ್ ಸಂಪರ್ಕ ಕೈತಪ್ಪುತ್ತಿತ್ತು. ಇನ್ನು ಮುಂದೆ ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸಾಪ್ ನಂಬರ್‌ ಇಟ್ಟುಕೊಂಡು ಏಕಕಾಲದಲ್ಲಿ ಬಳಸಲು ಸಾಧ್ಯವಾಗುತ್ತದೆ.

ಎರಡು ಅಕೌಂಟ್‌ ಬಳಸುವುದು ಹೇಗೆ?

ವಾಟ್ಸಾಪ್‌ನಲ್ಲಿ ಏಕಕಾಲದಲ್ಲಿ ಎರಡು ಅಕೌಂಟ್‌ಗಳ ನಂಬರ್‌ಗಳನ್ನು ಹೊಂದುವುದು ಸರಳ ಪ್ರಕ್ರಿಯೆಯಾಗಿದೆ. ಇದೀಗ ಬಳಕೆದಾರರಿಗೆ ಅನುಕೂಲವಾಗಲೆಂದು ಮೆಟಾ ಕಂಪನಿ ಹೊಸ ಫೀಚರ್ ತಂದಿದೆ. ಎರಡೆರಡು ವಾಟ್ಸಾಪ್ ಖಾತೆ ಹೊಂದಲು ಬಳಕೆದಾರರಿಗೆ ‌ಮತ್ತೊಂದು ಸಿಮ್ ಕಾರ್ಡ್ ‌ಅಗತ್ಯವಿದೆ. ಹೊಸ ಫೀಚರ್​ನಿಂದ ಪ್ರತಿ ಬಾರಿ ಲಾಗ್ ಔಟ್ ಮತ್ತು ಲಾಗ್ ಇನ್ ಮಾಡಬೇಕಾದ ಕಿರಿಕಿರಿ ಇರೋದಿಲ್ಲ. ಹಾಗೇ ಮೆಸೇಜ್‌ಗಳನ್ನು ತಪ್ಪಾಗಿ ಕಳುಹಿಸುವ ತಾಪತ್ರಯನೂ ಬರೋದಿಲ್ಲ. ನಮಸ್ಕಾರ.

 

Shantha Kumari