ಪ್ರೇಯಸಿಗಾಗಿ ಹೆಂಡ್ತಿಗೆ ಡಿವೋರ್ಸ್‌! –  ಗಂಡನ ಬಿಟ್ಟು ಬರಲು ಒಪ್ಪದಿದ್ದಕ್ಕೆ ಆಕೆಯನ್ನ ಕೊಂದು ತಾನೂ ಜೀವ ಬಿಟ್ಟ ಪಾಗಲ್‌!

ಪ್ರೇಯಸಿಗಾಗಿ ಹೆಂಡ್ತಿಗೆ ಡಿವೋರ್ಸ್‌! –  ಗಂಡನ ಬಿಟ್ಟು ಬರಲು ಒಪ್ಪದಿದ್ದಕ್ಕೆ ಆಕೆಯನ್ನ ಕೊಂದು ತಾನೂ ಜೀವ ಬಿಟ್ಟ ಪಾಗಲ್‌!

ಈಗಿನ ಕಾಲದಲ್ಲಿ ಪ್ರೀತಿ, ಪ್ರೇಮಕ್ಕೆ ಬೆಲೆಯಿಲ್ಲ ಅನ್ನೋತರ ಆಗಿದೆ. ಇದೀಗ ಇಲ್ಲೊಂದು ಕಡೆ ಪ್ರೇಯಸಿಗಾಗಿ ಪತ್ನಿಗೆ ಡಿವೋರ್ಸ್‌ ನೀಡಿದ್ದ. ಆದ್ರೆ ಪ್ರೇಯಸಿ ಆತನಿಗೆ ಚಮಕ್‌ ಕೊಟ್ಟಿದ್ದಾಳೆ. ಇದ್ರಿಂದ ಸಿಟ್ಟಾದ ಆತ ಗರ್ಲ್‌ಫ್ರೆಂಡ್‌ನ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್‌ ಬೆಲೆ ಏರಿಕೆ ಎಫೆಕ್ಟ್!‌ – ಸಿಲಿಕಾನ್‌ ಸಿಟಿ ಹೋಟೆಲ್‌ಗಳಲ್ಲಿ ಊಟ, ತಿಂಡಿ ದರ ಹೆಚ್ಚಳ!

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ  ಕಾರಿನಲ್ಲೇ ಮಹಿಳೆ ಸಜೀವ ದಹನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪತಿಯನ್ನು ಬಿಟ್ಟು ಬರಲು ಒಪ್ಪದಿದ್ದಕ್ಕೆ ಪ್ರಿಯತಮೆಯನ್ನು ಕಾರಿನಲ್ಲಿ ಕೊಲೆ ಮಾಡಿ ಅದಕ್ಕೆ ಬೆಂಕಿ ಹಚ್ಚಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ಪ್ರಿಯಕರ ರಾಮಾಂಜಿನಪ್ಪ ಪ್ರಿಯತಮೆ ಸುಜಾತಳನ್ನು (35) ಕಾರಿನಲ್ಲಿ ಕೊಲೆ ಮಾಡಿ, ನಂತರ ಪೆಟ್ರೋಲ್‌ ಸುರಿದು ಬೆಂಕಿಯಿಟ್ಟಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಸುಜಾತಾ ದೇವನಹಳ್ಳಿ ಮೂಲದವರು ಎನ್ನಲಾಗಿದೆ.

ಅಷ್ಟಕ್ಕೂ ಆಗಿದ್ದೇನು?

ಮೃತ ಸುಜಾತಾ ಹಾಗೂ ರಾಮಾಂಜಿನಪ್ಪ ಅನೈತಿಕ ಸಂಬಂಧ ಹೊಂದಿದ್ದರು. ಇದೇ ಕಾರಣದಿಂದಾಗಿ ಕಳೆದ 4 ತಿಂಗಳ ಹಿಂದೆ ರಾಮಾಂಜಿನಪ್ಪ ಹೆಂಡತಿಯಿಂದ ಡಿವೋರ್ಸ್ ಪಡೆದುಕೊಂಡಿದ್ದ. ಬಳಿಕ ಸುಜಾತಳಿಗೂ ಗಂಡನ ಬಿಟ್ಟು ಬರುವಂತೆ ಟಾರ್ಚರ್ ಮಾಡುತ್ತಿದ್ದ. ಆದರೆ ಸುಜಾತ ಗಂಡನ ಬಿಟ್ಟು ಬರಲು ಒಪ್ಪಿರಲಿಲ್ಲ. ಸಿಟ್ಟಿನಲ್ಲಿ ಏ.2ರಂದು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆ ಬಚ್ಚಹಳ್ಳಿ ಬಳಿ ಕಾರಿನಲ್ಲಿ ಸುಜಾಳನ್ನು ಹೊಡೆದು ಕೊಲೆ ಮಾಡಿ, ಬಳಿಕ ಕಾರಿಗೆ ಬೆಂಕಿಯಿಟ್ಟು ಪರಾರಿಯಾಗಿದ್ದ.

ಪೊಲೀಸರು ಕಾರು ಪರಿಶೀಲನೆ ಮಾಡಿದಾಗ ಮಾರಸಂದ್ರದ ಸುರೇಶ್ ಅವರದ್ದು ಎಂದು ಗೊತ್ತಾಗಿತ್ತು. ಬಳಿಕ ಸುರೇಶ್ ಅವರ ಕಾರನ್ನು ರಾಮಾಂಜಿನಪ್ಪ ತೆಗೆದುಕೊಂಡು ಹೋಗಿರುವುದಾಗಿ ತಿಳಿದುಬಂದಿತ್ತು. ಇದೀಗ ಬೆಂಗಳೂರಿನ ಬಿಡದಿ ಬಳಿ ರೈಲ್ವೇ ನಿಲ್ದಾಣ ಬಳಿ ರಾಮಾಂಜಿನಪ್ಪ ಶವ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

Shwetha M