ಉತ್ತರ ಪ್ರದೇಶ ಎರಡು ಸ್ಥಳಗಳಿಗೆ ಮರುನಾಮಕರಣ – ಒಪ್ಪಿಗೆ ನೀಡಿದ ಕೇಂದ್ರ

ಉತ್ತರ ಪ್ರದೇಶ ಎರಡು ಸ್ಥಳಗಳಿಗೆ ಮರುನಾಮಕರಣ – ಒಪ್ಪಿಗೆ ನೀಡಿದ ಕೇಂದ್ರ

ನವದೆಹಲಿ: ರಾಜ್ಯ ಸರಕಾರದ ಶಿಫಾರಸಿನ ಮೇರೆಗೆ ಉತ್ತರ ಪ್ರದೇಶದ ಎರಡು ಸ್ಥಳಗಳ ಹೆಸರನ್ನು ಬದಲಾಯಿಸಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯವು ರಾಜ್ಯ ಸರ್ಕಾರದ ಶಿಫಾರಸುಗಳನ್ನು ಅನುಸರಿಸಿ ಪೂರ್ವ ಉತ್ತರಪ್ರದೇಶದಲ್ಲಿರುವ ಗೋರಖ್‌ಪುರದ ಮುನ್ಸಿಪಲ್ ಕೌನ್ಸಿಲ್ ಮತ್ತು ಡಿಯೋರಿಯಾದ ಹಳ್ಳಿಯ ಹೆಸರುಗಳನ್ನು ಬದಲಾಯಿಸಲು ತನ್ನ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ – ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಗೋರಖ್‌ಪುರ ಜಿಲ್ಲೆಯ ಮುಂಡೇರಾ ಬಜಾರ್ ಮುನ್ಸಿಪಲ್ ಕೌನ್ಸಿಲ್ ಅನ್ನು ಚೌರಿ-ಚೌರಾ ಎಂದು ಮತ್ತು ಡಿಯೋರಿಯಾ ಜಿಲ್ಲೆಯ ತೆಲಿಯಾ ಅಫ್ಘಾನ್ ಗ್ರಾಮದ ಹೆಸರನ್ನು ತೆಲಿಯಾ ಶುಕ್ಲಾ ಎಂದು ಬದಲಾಯಿಸಲು ಕೇಂದ್ರ ಗೃಹ ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡಿದೆ ಎಂದು ರಾಜ್ಯ ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ.

ಫೆಬ್ರವರಿ 4, 1922ರಂದು ಗೋರಖ್‌ಪುರ ಜಿಲ್ಲೆಯಲ್ಲಿ ನಡೆದ ಚೌರಿ ಚೌರಾ ಘಟನೆಯ 100 ವರ್ಷಗಳ ನೆನಪಿಗಾಗಿ ಮುಂಡೇರಾ ಬಜಾರ್ ಮುನ್ಸಿಪಲ್ ಕೌನ್ಸಿಲ್ ಈಗ ಚೌರಿ ಚೌರಾ ಮುನ್ಸಿಪಲ್ ಕೌನ್ಸಿಲ್ ಆಗಲಿದೆ. ಈ ಪ್ರದೇಶದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಪೊಲೀಸರು ಆಗ ಭಾಗವಹಿಸುತ್ತಿದ್ದ ಪ್ರತಿಭಟನಾಕಾರರ ದೊಡ್ಡ ಗುಂಪಿನ ಮೇಲೆ ಗುಂಡು ಹಾರಿಸಿದ್ದರು.

ಡಿಯೋರಿಯಾ ಜಿಲ್ಲೆಯ ಸ್ಥಳೀಯ ಮೂಲಗಳ ಪ್ರಕಾರ, ತೆಲಿಯಾ ಅಫ್ಘಾನ್ ಗ್ರಾಮವು ಪೂರ್ವ ಉತ್ತರಪ್ರದೇಶದ ಜಿಲ್ಲೆಯ ಬರ್ಹಾಜ್ ತೆಹ್ಸಿಲ್ ಅಡಿಯಲ್ಲಿ ತೆಲಿಯಾ ಶುಕ್ಲಾ ಗ್ರಾಮವಾಗಿ ಈಗಾಗಲೇ ಜನಪ್ರಿಯವಾಗಿದೆ. ಭೂ ಕಂದಾಯ ದಾಖಲೆಗಳಲ್ಲಿ ಇದು ತೆಲಿಯಾ ಆಫ್ಘನ್ ಎಂದು ನೋಂದಾಯಿಸಲ್ಪಟ್ಟಿದೆ. ಅದು ಈಗ ತೆಲಿಯಾ ಶುಕ್ಲಾ ಎಂದು ಬದಲಾಗಲಿದೆ.

suddiyaana