ತಮ್ಮ ತಂಡ ತೊರೆಯಲಿದ್ದಾರೆ ಇಬ್ಬರು ದಿಗ್ಗಜ ಆಟಗಾರರು – ಐಪಿಎಲ್ನಲ್ಲಿ ಫ್ರಾಂಚೈಸಿಗಳು ನಾಯಕರಿಗೆ ಅವಮಾನ ಮಾಡೋದು ಸರಿನಾ?

ತಮ್ಮ ತಂಡ ತೊರೆಯಲಿದ್ದಾರೆ ಇಬ್ಬರು ದಿಗ್ಗಜ ಆಟಗಾರರು – ಐಪಿಎಲ್ನಲ್ಲಿ ಫ್ರಾಂಚೈಸಿಗಳು ನಾಯಕರಿಗೆ ಅವಮಾನ ಮಾಡೋದು ಸರಿನಾ?

2024ರ ಐಪಿಎಲ್ ಟೂರ್ನಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಟ್ರೋಫಿಗೆ ಮುತ್ತಿಡೋಕೆ ಟಾಪ್ ಫೋರ್ ತಂಡಗಳ ನಡುವೆ ರೇಸ್ ಸ್ಟಾರ್ಟ್ ಆಗಿದೆ. ಇನ್ನೇನು ಈ ಸೀಸನ್ ಕಂಪ್ಲೀಟ್ ಆಯ್ತು ಅನ್ನುವಾಗ್ಲೇ ಮುಂದಿನ ಆವೃತ್ತಿಯ ಲೆಕ್ಕಾಚಾರಗಳು ಶುರುವಾಗುತ್ತವೆ. ವರ್ಷದ ಅಂತ್ಯದಲ್ಲಿ ಹರಾಜು ಪ್ರಕ್ರಿಯೆಗಳು ನಡೆಯಲಿದ್ದು, ಹಲವು ಆಟಗಾರರು ಅದಲು ಬದಲಾಗ್ತಾರೆ. ಜೊತೆಗೆ ಮುಂದಿನ ವರ್ಷ ಒಂದಷ್ಟು ಟೀಮ್​ಗಳ ನಾಯಕತ್ವ ಕೂಡ ಚೇಂಜ್ ಆಗೋದು ಫಿಕ್ಸ್ ಆಗಿದೆ. ಕೆಲವ್ರು ವಯಸ್ಸಿನ ಕಾರಣದಿಂದ ಕ್ಯಾಪ್ಟನ್ಸಿ ತೊರೆದ್ರೆ ಇನ್ನೂ ಕೆಲವ್ರು ಅವಮಾನದಿಂದ ತಂಡ ಬಿಡೋ ಎಲ್ಲಾ ಸಾಧ್ಯತೆ ಇದೆ. ನಾಯಕತ್ವ ತೊರೆಯಲಿರುವ ರೇಸ್​ನಲ್ಲಿ ಟಾಪ್ 2ನಲ್ಲಿರೋ ಆಟಗಾರರಲ್ಲಿ ಒಬ್ರು ಹಿಟ್​ಮ್ಯಾನ್ ರೋಹಿತ್ ಶರ್ಮಾ. ಮತ್ತೊಬ್ರು ಕನ್ನಡಿಗ ಕೆ.ಎಲ್ ರಾಹುಲ್. ಭಾರತ ಕಂಡ ಈ ಇಬ್ಬರು ದಿಗ್ಗಜ ಆಟಗಾರರು ಇದೀಗ ಐಪಿಎಲ್​ನಲ್ಲಿ ಫ್ರಾಂಚೈಸಿಗಳಿಂದ ಅವಮಾನಕ್ಕೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ 2025ರ ಸೀಸನ್​ಗೆ ತಂಡವನ್ನೇ ತೊರೆಯೋ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ರೋಹಿತ್ ಮತ್ತು ರಾಹುಲ್ ಅನುಭವಿಸಿದ ನೋವು ಎಂಥಾದ್ದು? ಫ್ರಾಂಚೈಸಿಗಳು ನಡೆಸಿಕೊಂಡಿದ್ದು ಸರಿನಾ? ಮುಂದಿನ ಸಲ ಟೀಂ ಚೇಂಜ್ ಮಾಡಿದ್ರೆ ಯಾವ ಫ್ರಾಂಚೈಸಿ ಸೇರ್ತಾರೆ ಅನ್ನೋ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 12 ವರ್ಷ ಆಯಸ್ಸು.. ಇಷ್ಟದ ಊಟವಿಲ್ಲ – RCB ಆಟಗಾರ ಕ್ಯಾಮರೂನ್ ಗ್ರೀನ್ ಬದುಕಿನ ರೋಚಕ ಕಥೆ

2024ರ ಐಪಿಎಲ್ ಮಸ್ತ್ ಎಂಟರ್​ಟೈನಿಂಗ್ ಆಗಿದೆ. ಸಿಕ್ಸ್, ಫೋರ್​ಗಳಿಗೆ ಲೆಕ್ಕ ಇಲ್ಲ. ದಾಖಲೆಗಳ ಧೂಳೀಪಟ ಇನ್ನೂ ನಿಂತಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತೀ ಹೆಚ್ಚು ಸ್ಕೋರ್ ಈ ಸೀಸನ್​ನಲ್ಲೇ ಆಗಿದೆ. ಜೊತೆ ಜೊತೆಗೆ ಒಂದಷ್ಟು ವಿವಾದ, ಗೊಂದಲ, ಮುನಿಸು, ಮನಸ್ಥಾಪಗಳಿಗೂ ಸಾಕ್ಷಿಯಾಗಿದೆ. ಅದ್ರಲ್ಲೂ 5 ಬಾರಿ ಟ್ರೋಫಿಗೆ ಮುತ್ತಿಕ್ಕಿದ್ದ ಮುಂಬೈ ಇಂಡಿಯನ್ಸ್​ನಲ್ಲಂತೂ ಈ ಬಾರಿಯ ಬದಲಾವಣೆಗಳು ಟೂರ್ನಿ ಆರಂಭದಲ್ಲೇ ಬಾರೀ ವಿವಾದ ಹುಟ್ಟು ಹಾಕಿತ್ತು. ಹಿಟ್​ಮ್ಯಾನ್ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದ್ದು ಅಭಿಮಾನಿಗಳನ್ನ ಕೆರಳಿಸಿತ್ತು. ಹೀಗಾಗಿ ಟೂರ್ನಿ ಆರಂಭದಿಂದ್ಲೂ ಮುಂಬೈ ಫ್ಯಾನ್ಸ್ ರೋಹಿತ್ ಶರ್ಮಾ ಪರ ಘೋಷಣೆಗಳನ್ನ ಕೂಗುತ್ತಾ ಹಾರ್ದಿಕ್ ಪಾಂಡ್ಯರನ್ನ ಕಿಚಾಯಿಸುತ್ತಲೇ ಬಂದಿದ್ರು. ಮತ್ತೊಂದೆಡೆ ಸೋಶಿಯಲ್ ಮೀಡಿಯಾಗಳಲ್ಲಿ ಪಾಂಡ್ಯ ಟ್ರೋಲ್ ಅಂತೂ ಬೇರೆಯದ್ದೇ ಲೆವೆಲ್​ನಲ್ಲಿತ್ತು. ಆದ್ರೆ ಏನ್ ದುರಾದೃಷ್ಟವೋ ಏನೋ ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಟೀಂ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಒಂದೊಂದು ಮ್ಯಾಚ್ ಸೋತಾಗ್ಲೂ ಪಾಂಡ್ಯ ವಿರುದ್ಧ ಫ್ಯಾನ್ಸ್ ರೊಚ್ಚಿಗೆದ್ದಿದ್ರು. 5 ಸಲ ಟ್ರೋಫಿ ಗೆದ್ದ ತಂಡವಾದ್ರೂ ಈ ಟೂರ್ನಿಯಲ್ ಫಸ್ಟ್ ಐಪಿಎಲ್​ನಿಂದ ಹೊರ ನಡೆದಿತ್ತು. ಇದು ತಂಡದ ಕಥೆಯಾದ್ರೆ ರೋಹಿತ್ ಶರ್ಮಾರನ್ನ ನೀತಾ ಅಂಬಾನಿ ಒಡೆತನದ ಮುಂಬೈ ಫ್ರಾಂಚೈಸಿ ನಡೆಸಿಕೊಂಡ ರೀತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದೇ ಕಾರಣಕ್ಕೆ 2025ರ ಟೂರ್ನಿಗೆ ರೋಹಿತ್ ಶರ್ಮಾ ಮುಂಬೈ ತೊರೆಯೋದು ಕನ್ಫರ್ಮ್ ಆಗಿದೆ. 10 ವರ್ಷಗಳ ಕಾಲ ಮುಂಬೈ ತಂಡವನ್ನ ಲೀಡ್ ಮಾಡಿದ್ದ ಹಿಟ್​ಮ್ಯಾನ್ ರೋಹಿತ್ ಶರ್ಮಾರನ್ನ ಏಕಾಏಕಿ ಕ್ಯಾಪ್ಟನ್ಸಿಯಿಂದ ಇಳಿಸಿದ್ದೇ ಸಿಟ್ಟಿಗೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಅಷ್ಟೆಲ್ಲಾ ಸಾಧನೆ ಮಾಡಿದ್ರೂ ಕ್ಯಾಪ್ಟನ್ಸಿ ಕಿತ್ತುಕೊಂಡಿದ್ದು ರೋಹಿತ್​ಗೆ ತೀವ್ರ ಬೇಸರ ಉಂಟು ಮಾಡಿದೆ. ದಶಕಕ್ಕೂ ಹೆಚ್ಚು ಕಾಲ ಮುಂಬೈ ಪರವೇ ಆಡಿದ್ದ ರೋಹಿತ್ ಇದೀಗ ದೃಢ ನಿರ್ಧಾರಕ್ಕೆ ಬಂದಿದ್ದಾರೆ. ಐಪಿಎಲ್‌ 2025ರ ಟೂರ್ನಿಯಲ್ಲಿ ಬೇರೆ ತಂಡದ ಪರ ಆಡುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ ಹೊಂದಿರುವ ರೋಹಿತ್‌ ಶರ್ಮಾ ತಂಡವನ್ನು ತೊರೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ನ್ಯಾಯಯುತ ರೀತಿಯಲ್ಲಿ ರೋಹಿತ್‌ ಶರ್ಮಾ ಕ್ಯಾಪ್ಟನ್ಸಿಗೆ ತೆರೆ ಎಳೆದಿದ್ದರೆ ಗೊಂದಲ ಉಂಟಾಗುತ್ತಿರಲಿಲ್ಲ. ಹಾರ್ದಿಕ್‌ ಪಾಂಡ್ಯ ಅವರನ್ನು ಹಠಾತ್‌ ಕ್ಯಾಪ್ಟನ್‌ ಎಂದು ಘೋಷಣೆ ಮಾಡಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಭಿಮಾನಿಗಳು ಕೂಡ ಮುಂಬೈ ಫ್ರಾಂಚೈಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೊದ್ಲೇ ಪಾಂಡ್ಯ ಕ್ಯಾಪ್ಟನ್ ಆಗಿದ್ದು ಮುಂಬೈ ಟೀಮ್​ನಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಪಾಂಡ್ಯ ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಅದೇ ಟೀಮ್​ನ ಕೆಲ ಆಟಗಾರರಲ್ಲಿ ಅಸಮಾಧಾನವಿದೆ. ಡ್ರೆಸಿಂಗ್‌ ರೂಮ್‌ನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹೇಳಿ ಕೇಳಿ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್​ ಟೂರ್ನಿಯ ಮೋಸ್ಟ್ ಫೇವರೆಟ್ ಟೀಮ್​ಗಳಲ್ಲಿ ಒಂದು. ಅದ್ರಲ್ಲೂ ರೋಹಿತ್ ಕ್ಯಾಪ್ಟನ್ಸಿಗೆ ಫ್ಯಾಂಚೈಸಿಗಳನ್ನ ಮೀರಿ ಫ್ಯಾನ್ಸ್ ಇದ್ದಾರೆ. ಹೀಗಾಗಿ ಫ್ಯಾನ್ಸ್ ಕೂಡ ರೋಹಿತ್​ಗೆ ಮುಂಬೈ ತಂಡ ಬಿಟ್ಟು ಬೇರೆ ಫ್ರಾಂಚೈಸಿ ಸೇರುವಂತೆ ಒತ್ತಾಯ ಮಾಡ್ತಿದ್ದಾರೆ. ಇತ್ತೀಚೆಗೆ ರೋಹಿತ್ ಕೂಡ ಕೆಕೆಆರ್ ತಂಡ ಸಹ ಕೋಚ್ ಬಳಿ ತಾವು ಮುಂಬೈ ತೊರೆಯೋ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿತ್ತು. ರೋಹಿತ್ ಮುಂಬೈ ಬಿಟ್ರೂ ಬೇರೊಂದು ಟೀಮ್​ಗೆ ಕ್ಯಾಪ್ಟನ್ ಆಗೋದಂತೂ ಪಕ್ಕಾ. ಇದಿಷ್ಟು ರೋಹಿತ್ ಕಥೆಯಾದ್ರೆ ಕನ್ನಡಿಗ ಕೆಎಲ್ ರಾಹುಲ್ ಕಥೆಯೂ ಹೀಗೇ ಆಗಿದೆ.

ಟೀಂ ಇಂಡಿಯಾ ಕಂಡ ದಿಗ್ಗಜ ಆಟಗಾರರ ಪೈಕಿ ರಾಹುಲ್ ಕೂಡ ಒಬ್ರು. ಅದೆಷ್ಟೋ ಸಂದರ್ಭಗಳಲ್ಲಿ ಏಕಾಂಗಿಯಾಗಿ ನಿಂತು ಟೀಂ ಇಂಡಿಯಾ ಪರ ರನ್ ಮಳೆ ಹರಿಸಿ ತಂಡವನ್ನ ಗೆಲ್ಲಿಸಿದ್ದಾರೆ. ಸದ್ಯ ಐಪಿಎಲ್ ಟೂರ್ನಿಯಲ್ಲಿ ಎಲ್​ಎಸ್​​ಜಿ ತಂಡವನ್ನ ಮುನ್ನಡೆಸುತ್ತಿದ್ದಾರೆ. 2022ನೇ ಆವೃತ್ತಿಯಲ್ಲಿ ಐಪಿಎಲ್ ಸೇರಿದ್ದ ಈ ತಂಡವನ್ನ ಎರಡು ಬಾರಿ ಪ್ಲೇಆಫ್​ಗೆ ಕೊಂಡೊಯ್ದಿದ್ದಾರೆ. ಆದ್ರೂ ಮೇ 8ರಂದು ಹೈದ್ರಾಬಾದ್ ವಿರುದ್ಧ ಲಕ್ನೋದ ಸೋಲನ್ನ ಅರಗಿಸಿಕೊಳ್ಳಲಾಗದ ಮಾಲೀಕ ಸಂಜೀವ್ ಗೋಯೆಂಕಾ ನಾಲಗೆ ಹರಿಬಿಟ್ಟಿದ್ದರು. ಗ್ರೌಂಡ್​ನಲ್ಲೇ ಕೂಗಾಡಿದ್ದರು. ಗೋಯೆಂಕಾ ವರ್ತನೆಗೆ ದೊಡ್ಡ ಮಟ್ಟದಲ್ಲೇ ವಿರೋಧ ವ್ಯಕ್ತವಾಗುತ್ತಿದೆ.  ಎಲ್​ಎಸ್​ಜಿ ಫ್ರಾಂಚೈಸಿ ಮಾಲೀಕನ ಮೊಂಡಾಟಕ್ಕೆ ತಲೆ ತಗ್ಗಿಸಿ ನಿಂತಿದ್ದ ನಾಯಕ ಕೆ.ಎಲ್ ರಾಹುಲ್ ಪರ ಇಡೀ ಕರುನಾಡೇ ನಿಂತಿದೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ಮೇರು ನಟರು, ಕ್ರಿಕೆಟ್ ಲೋಕದ ದಿಗ್ಗಜರು ಸಪೋರ್ಟ್ ಮಾಡ್ತಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಐಪಿಎಲ್​ನಲ್ಲಿ ಹಲವು ಫ್ರಾಂಚೈಸಿಗಳ ಪರ ಆಡಿದ್ದಾರೆ. 2022ರ ಹರಾಜಿಗೂ ಮುನ್ನ ರಾಹುಲ್ ರನ್ನು 17 ಕೋಟಿ ನೀಡಿ ಲಖನೌ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತು. ಸದ್ಯ ಐಪಿಎಲ್ ಸೀಸನ್​ನಲ್ಲಿ ಭಾರತೀಯ ಕ್ರೀಡಾಪಟುಗಳಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಆಟಗಾರ ಅಂದ್ರೆ ಅದು ಕೆ.ಎಲ್ ರಾಹುಲ್. ಆದ್ರೆ ಎಲ್ಲೂ ಕೂಡ ಫ್ರಾಂಚೈಸಿಗಳ ಮಾಲೀಕರು ಈ ರೀತಿ ನಡೆದುಕೊಂಡಿರಲಿಲ್ಲ. ಹೀಗಿದ್ರೂ ಒಂದೇ ಒಂದು ಸೋಲಿಗೆ ಕೆ.ಎಲ್ ರಾಹುಲ್ ತಲೆ ತಗ್ಗಿಸಬೇಕಾಗಿದೆ. ಇನ್ನು ತಮ್ಮ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾದ ಬಳಿಕ ಸಂಜೀವ್ ಗೋಯೆಂಕಾ ಕ್ಷಮೆಯನ್ನೂ ಕೇಳಿದ್ದಾರೆ. ಆದ್ರೆ ಕನ್ನಡಿಗ ರಾಹುಲ್​ಗೆ ಆದ ಅವಮಾನಕ್ಕೆ ಸಿಟ್ಟಾಗಿರೋ ಕರ್ನಾಟಕದ ಜನ ಆರ್​ಸಿಬಿಗೆ ಬರುವಂತೆ ಮನವಿ ಮಾಡ್ತಿದ್ದಾರೆ. ಹಾಗೇ ಸೋಶಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಎಲ್​ಎಸ್​ಜಿ ಟ್ರೆಂಡ್ ಶುರು ಮಾಡಿದ್ರು. ಹೀಗಾಗಿ ಕೆಎಲ್ ರಾಹುಲ್ ಮತ್ತೆ ಅದೇ ಟೀಮ್​ನಲ್ಲೇ ಉಳಿದುಕೊಳ್ತಾರಾ ಅಥವಾ ಟೀಂ ಬಿಡ್ತಾರಾ ಅನ್ನೋದೇ ಈಗಿರುವ ಪ್ರಶ್ನೆ.

Shantha Kumari