ಸೌಜನ್ಯಗಾಗಿ ನೋಟಾ ಅಭಿಯಾನ! – ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆ!
ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ನೋಟಾ ಚಳವಳಿ ನಡೆಯುತ್ತಿದೆ. ಲಕ್ಷಾಂತರ ಮತಗಳು ನೋಟಾಗೆ ಬೀಳುವ ಆತಂಕವೂ ಇದೆ.
ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಸೈಲೆಂಟ್ – ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ನಟ ದರ್ಶನ್!
ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಸಾವಿನ ನ್ಯಾಯಕ್ಕಾಗಿ ಕಳೆದ 12 ವರ್ಷಗಳಿಂದ್ಲೂ ಹೋರಾಟ ನಡೆಯುತ್ತಲೇ ಇದೆ. ಸರ್ಕಾರಗಳೇ ಬದಲಾದ್ರೂ ನ್ಯಾಯ ಮಾತ್ರ ಸಿಗ್ತಿಲ್ಲ ಎಂದು ಹೋರಾಟಗಾರರು ರೊಚ್ಚಿಗೆದ್ದಿದ್ದಾರೆ. ಹೀಗಾಗೇ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸುಳ್ಯದಲ್ಲಿ ಏಪ್ರಿಲ್ 24ರಂದು ನೋಟಾ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಅಲ್ದೇ ಈ ಬಾರಿ ಸುಮಾರು ಒಂದೂವರೆಯಿಂದ ಎರಡು ಲಕ್ಷ ನೋಟಾ ಮತ ಬರುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ. ಅಲ್ದೇ ನ್ಯಾಯಾಕ್ಕಾಗಿ ನೋಟಾ ಅಭಿಯಾನ ಮಾಡುತ್ತಿದ್ದೇವೆ. ಅನ್ಯಾಯ ಮಾಡುವುದು ಅಪರಾಧ. ಆದರೆ ಅನ್ಯಾಯವನ್ನು ಸಹಿಸುವುದು ಮಹಾ ಅಪರಾಧ’ ಎಂಬ ಭಗವದ್ಗೀತೆಯ ಸಂದೇಶವನ್ನು ಕರಪತ್ರದಲ್ಲಿ ಹಾಕಿಕೊಂಡು ಅಭಿಯಾನ ನಡೆಸಲಾಗುತ್ತಿದೆ. ನೋಟಾ ಅಭಿಯಾನದಿಂದ ದೇಶ ನಮ್ಮನ್ನು ನೋಡುವಂತಾಗುತ್ತದೆ ಎಂಬ ಉದ್ದೇಶ ಹೋರಾಟಗಾರರದ್ದು.
ಸದ್ಯ ಸೌಜನ್ಯಳ ಕೊಲೆಗೆ ನ್ಯಾಯಕ್ಕಾಗಿ ಕಳೆದ 12 ವರ್ಷಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ಮುಂದಾಳತ್ವದಲ್ಲಿ ಅನೇಕ ಸಭೆ, ಹೋರಾಟ ನಡೆದರೂ ಪ್ರಮುಖ ರಾಜಕೀಯ ಪಕ್ಷಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಅನ್ನೋದು ಹೋರಾಟಗಾರರ ಅಭಿಪ್ರಾಯ. ಇದೇ ಕಾರಣಕ್ಕೆ ಈ ಬಾರಿ ನೋಟಾ ಅಭಿಯಾನ ಪ್ರಾರಂಭಿಸಲಾಗಿದೆ. ಇದೂ ಕೂಡ ಬಿಜೆಪಿಗೆ ಆತಂಕಕ್ಕೆ ಕಾರಣವಾಗಿದೆ. ಸೌಜನ್ಯ ಪರ ನೋಟಾಗೆ ವೋಟ್ ನೀಡಿದ್ರೆ ಮತಗಳು ವಿಭಜನೆಯಾಗಿ ಪರಿಣಾಮ ಬೀರುವ ಸಾಧ್ಯತೆಯಿಂದಲೇ ಮೋದಿಯವ್ರನ್ನ ಕರೆಸಿ ಮಂಗಳೂರಿನಲ್ಲಿ ಪ್ರಚಾರ ನಡೆಸಲಾಗಿದೆ ಎನ್ನಲಾಗ್ತಿದೆ.