12ನೇ ತರಗತಿ ಪಾಸ್ ಆದ ಇಬ್ಬರು ಮಾಜಿ ಶಾಸಕರು..! – ಕಾನೂನು ಪದವಿ ಪಡೆಯಲು ಸಿದ್ಧತೆ..!
ಕಲಿಕೆಗೆ ವಯಸಿನ ಮಿತಿಯಿಲ್ಲ ಅನ್ನೋದನ್ನು ಉತ್ತರ ಪ್ರದೇಶದ ಇಬ್ಬರು ಮಾಜಿ ಶಾಸಕರು ತೋರಿಸಿಕೊಟ್ಟಿದ್ದಾರೆ. ಇಬ್ಬರು ಮಾಜಿ ಶಾಸಕರು 50ರ ಹರೆಯದಲ್ಲೂ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅಲ್ಲದೇ ಪದವಿ ಕೋರ್ಸ್ ತೆಗೆದುಕೊಳ್ಳುವ ಗುರಿಯನ್ನೂ ಹೊಂದಿದ್ದಾರೆ.
ಇದನ್ನೂ ಓದಿ: ಬಸ್ಸಿನಲ್ಲಿ ನಿತ್ಯ ಕಾಲೇಜಿಗೆ 50 ಕಿ.ಮೀ ಪ್ರಯಾಣ – ರಾಜ್ಯಕ್ಕೇ 2ನೇ ರ್ಯಾಂಕ್ ಪಡೆದ ಕೂಲಿ ಕಾರ್ಮಿಕನ ಪುತ್ರಿ!
ಬರೇಲಿ ಜಿಲ್ಲೆಯ ಬಿತ್ರಿ-ಚೈನ್ಪುರ ಕ್ಷೇತ್ರದ ಮಾಜಿ ಶಾಸಕ ರಾಜೇಶ್ ಮಿಶ್ರಾ ತಮ್ಮ 55ನೇ ವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದು, 500ಕ್ಕೆ 263 ಅಂಕಗಳನ್ನು ಪಡೆದಿದ್ದಾರೆ. 2017 ರಿಂದ 2022 ರವರೆಗೆ ಅಸೆಂಬ್ಲಿಯಲ್ಲಿ ಬರೇಲಿ ಜಿಲ್ಲೆಯ ಬಿತ್ರಿ-ಚೈನ್ಪುರ್ ಸ್ಥಾನವನ್ನು ಪ್ರತಿನಿಧಿಸಿದ್ದ ಮಿಶ್ರಾ, ಪಿಯುಸಿ ಪಾಸ್ ಆಗಿರುವ ಸಂತಸದಲ್ಲಿದ್ದು, ಇನ್ನು ಮುಂದೆ, ಕಾನೂನಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ, ಮಿಶ್ರಾ, 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು.
ಹಸ್ತಿನಾಪುರದಿಂದ ಎರಡು ಬಾರಿ ಶಾಸಕರಾಗಿದ್ದ ಪ್ರಭುದಯಾಳ್ ವಾಲ್ಮೀಕಿ ಅವರು ಸಹ ಉತ್ತೀರ್ಣರಾಗಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆಗಿರುವುದಕ್ಕೆ ಪ್ರಭುದಯಾಳ್ ವಾಲ್ಮೀಕಿ ಸಂತಸ ವ್ಯಕ್ತಪಡಿಸಿದ್ದಾರೆ.