ನಾನೋ ನೀನೋ ನೋಡೇ ಬಿಡೋಣ ಬಾರೋ – ಮದಗಜಗಳ ಕದನಕ್ಕೆ ಮರವೂ ನೆಲಸಮ..!
ಆನೆಗಳನ್ನು ವಿಶ್ವದ ಅತಿದೊಡ್ಡ ಮತ್ತು ಶಕ್ತಿಯುತ ಜೀವಿ ಎಂದೇ ಗುರುತಿಸಲಾಗಿದೆ. ಶಕ್ತಿಯಲ್ಲಿ ಮಾತ್ರವಲ್ಲದೆ ಬುದ್ಧಿವಂತಿಕೆಯಲ್ಲಿಯೂ ಇತರ ಜೀವಿಗಳಿಗೆ ಹೋಲಿಸಿದರೆ ಆನೆ ತುಂಬಾನೇ ಮುಂದಿದೆ. ಸಾಮಾನ್ಯವಾಗಿ, ಹೆಣ್ಣು ಆನೆಗಳು ಗುಂಪುಗಳಲ್ಲಿ ವಾಸಿಸುತ್ತವೆ ಆದರೆ ಗಂಡು ಆನೆಗಳು ಒಂಟಿ ಜೀವನಕ್ಕೆ ಆದ್ಯತೆ ನೀಡುತ್ತವೆ. ಆನೆಯ ಸ್ವಭಾವವು ತುಂಬಾ ಶಾಂತವಾಗಿರುತ್ತದೆ, ಆದರೆ ಆನೆಯು ತೊಂದರೆಗೊಳಗಾದಾಗ, ಅದು ಕೋಪಗೊಂಡು ಅಪಾಯಕಾರಿಯಾಗುತ್ತದೆ. ಸದ್ಯ ಇಂಥಾದ್ದೇ ಒಂದು ವಿಡಿಯೋ ಬಾರೀ ಸಂಚಲನ ಮೂಡಿಸಿದೆ.
ಇದನ್ನೂ ಓದಿ : ದೇಶದಲ್ಲಿ 3 ವರ್ಷಗಳಲ್ಲಿ ಆನೆ ದಾಳಿಗೆ 1,581 ಮಂದಿ ಬಲಿ – ಕರ್ನಾಟಕದಲ್ಲಿ ಎಷ್ಟು ಸಾವು?
ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ದೈತ್ಯ ಆನೆಗಳು ಪರಸ್ಪರ ತಳ್ಳಿಕೊಂಡು ತಮ್ಮ ದೊಡ್ಡ ದಂತಗಳಿಂದ ಕಾದಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವಿಡಿಯೋದಲ್ಲಿ ಆನೆಗಳ ಕಾದಾಟದ ಸಮಯದಲ್ಲಿ ಮರವೇ ಚಿಕ್ಕ ಗಿಡದಂತೆ ಮುರಿದು ಬೀಳುವುದನ್ನು ಕಾಣಬಹುದು.
What is the problem between these two giants?pic.twitter.com/XYEzEI5B8c
— The Figen (@TheFigen_) April 3, 2023
ರಾಷ್ಟ್ರೀಯ ಉದ್ಯಾನವನದಲ್ಲಿನ ಈ ಕಾದಾಟದ ವಿಡಿಯೋವನ್ನು @TheFigen ಎಂಬ ಬಳಕೆದಾರರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇವರಿಬ್ಬರ ಸಮಸ್ಯೆ ಏನು? ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ದೈತ್ಯ ಆನೆಗಳು ಪರಸ್ಪರ ತಳ್ಳಿಕೊಂಡು ತಮ್ಮ ದೊಡ್ಡ ದಂತಗಳಿಂದ ಕಾದಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಟ್ವಿಟರ್ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಕೆಲವೊಂದಿಷ್ಟು ಬಳಕೆದಾರರು ಇದು ಎದೆ ನಡುಕ ಹುಟ್ಟಿಸುವಂತಿದೆ ಎಂದು ಪ್ರತಿಕ್ರಿಯಿಸಿದರೆ, ಇನ್ನೂ ಕೆಲವು ಬಳಕೆದಾರರು ಅವರಿಬ್ಬರ ನಡುವಿನ ಜಗಳಕ್ಕೆ ಕಾರಣವೇನಾಗಿರಬಹುದು ಎಂದು ಹಾಸ್ಯಾಸ್ಪದವಾಗಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ.