ರಸ್ತೆಯೆಂದು ನದಿಯನ್ನು ತೋರಿಸಿದ ಜಿಪಿಎಸ್ ಮ್ಯಾಪ್ – ಕಾರು ಮುಳುಗಿ ಇಬ್ಬರು ವೈದ್ಯರ ದಾರುಣ ಅಂತ್ಯ

ರಸ್ತೆಯೆಂದು ನದಿಯನ್ನು ತೋರಿಸಿದ ಜಿಪಿಎಸ್ ಮ್ಯಾಪ್ – ಕಾರು ಮುಳುಗಿ ಇಬ್ಬರು ವೈದ್ಯರ ದಾರುಣ ಅಂತ್ಯ

ರಾತ್ರಿ 11.30ರ ಸಮಯ. ಜೋರಾಗಿ ಮಳೆ ಸುರಿಯುತ್ತಿತ್ತು. ರಸ್ತೆ ತುಂಬೆಲ್ಲಾ ನೀರು ತುಂಬಿತ್ತು. ರಸ್ತೆ ಯಾವುದು, ನದಿ ಯಾವುದು ಎಂಬುದು ಗೊತ್ತಾಗದ ಪರಿಸ್ಥಿತಿ. ಹೀಗಿರುವಾಗ ಮೂವರು ವೈದ್ಯರಿದ್ದ ಕಾರು ಅದೇ ದಾರಿಯಲ್ಲಿ ಸಂಚರಿಸುತ್ತಿತ್ತು. ಜೋರು ಮಳೆ ಬರುತ್ತಿರುವ ಕಾರಣ ರೋಡ್ ಗೊತ್ತಾಗದೇ ಅವರು ಜಿಪಿಎಸ್ ಆನ್ ಮಾಡಿಕೊಂಡಿದ್ದರು. ಆದರೆ, ಜಿಪಿಎಸ್ ನದಿಯನ್ನು ರಸ್ತೆಯೆಂದು ತೋರಿಸಿ ಎಡವಟ್ಟು ಮಾಡಿದೆ. ಇದೇ ವೈದ್ಯರಿಬ್ಬರ ಸಾವಿಗೂ ಕಾರಣವಾಗಿದೆ. ಇವರಲ್ಲಿ ಒಬ್ಬರು ಹುಟ್ಟು ಹಬ್ಬದ ದಿನವೇ ದಾರುಣ ಅಂತ್ಯ ಕಂಡಿದ್ದಾರೆ.

ಇದನ್ನೂ ಓದಿ: ಈದ್ ಮಿಲಾದ್ ಕಟೌಟ್ ವಿಚಾರಕ್ಕೆ ಶಿವಮೊಗ್ಗ ಉದ್ವಿಘ್ನ – ಇದೆಲ್ಲಾ ಏನ್ ಹೊಸದಾಗಿ ನಡೆಯುತ್ತಿದೆಯಾ ಎಂದು ಗೃಹಸಚಿವರ ಉಡಾಫೆ

ಭಾನುವಾರ ರಾತ್ರಿ ಸುಮಾರು 11:30ರ ವೇಳೆಗೆ ಕೇರಳದ ಎರ್ನಾಕುಲಂನಲ್ಲಿ ದುರಂತವೊಂದು ನಡೆದಿದೆ. ಡಾ.ಅದ್ವೈತ್ ಅವರು ಹುಟ್ಟುಹಬ್ಬದ ಸಲುವಾಗಿ ಗೆಳೆಯರ ಜೊತೆ ಶಾಪಿಂಗ್‍ಗೆ ಕೊಚ್ಚಿಗೆ ಹೋಗಿದ್ದರು. ಶಾಪಿಂಗ್ ಮುಗಿಸಿ ಕೊಚ್ಚಿಯಿಂದ ಕೊಡುಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಭಾರೀ ಮಳೆಯಾಗುತ್ತಿತ್ತು. ದಾರಿಯ ಪರಿಚಯ ಇರದ ಕಾರಣ ಜಿಪಿಎಸ್ ನೆರವು ಪಡೆದುಕೊಂಡಿದ್ದಾರೆ. ಈ ವೇಳೆ ನೀರು ತುಂಬಿದ ರಸ್ತೆಯಲ್ಲಿ ಕಾರು ಸಂಚರಿಸಿದೆ. ಈ ವೇಳೆ ದಾರಿಯನ್ನು ನೇರವಾಗಿಯೇ ಜಿಪಿಎಸ್ ಮ್ಯಾಪ್‍ನಲ್ಲಿ ತೋರಿಸಿದೆ. ಇದರಿಂದ ಅದೇ ಮಾರ್ಗದಲ್ಲಿ ಸಂಚರಿಸಿದ್ದಾರೆ. ವಿಪರ್ಯಾಸವೆಂದರೆ, ಜಿಪಿಎಸ್ ಮ್ಯಾಪ್ ರೋಡ್ ಎಂದು ತೋರಿಸಿದ್ದು ಪೆರಿಯಾರ್ ನದಿಯಾಗಿತ್ತು. ಹೀಗಾಗಿ ಕಾರು ನದಿಗೆ ಇಳಿದಿದ್ದು ಮುಳುಗಿದೆ. ಪರಿಣಾಮ 29 ವರ್ಷದ ಡಾ.ಅದ್ವೈತ್  ಹಾಗೂ 29 ವರ್ಷದ ಡಾ.ಅಜ್ಮಲ್ ಆಸಿಫ್ ಮೃತಪಟ್ಟಿದ್ದಾರೆ. ಇವರಿಬ್ಬರು ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದಾರೆ. ಬದುಕುಳಿದವರಲ್ಲಿ ಒಬ್ಬರಾದ ಡಾ.ಗಾಜಿಕ್ ತಬ್ಸೀರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಜಿಪಿಎಸ್ ಮ್ಯಾಪ್‌ನಿಂದ ಹೀಗೆ ಆಗಿದೆ ಎಂದು ಹೇಳಿದ್ದಾರೆ.  ಅಪ್ಲಿಕೇಶನ್ ತಾಂತ್ರಿಕ ದೋಷ ಕೂಡಾ ಇದಕ್ಕೆ ಕಾರಣ ಇರಬಹುದು ಎಂದು ಡಾ. ಗಾಜಿಕ್ ತಬ್ಸೀರ್ ತಿಳಿಸಿದ್ದಾರೆ. ಇವರಲ್ಲದೇ, ಇನ್ನೂ ಇಬ್ಬರು ಕೂಡಾ ಕಾರಿಂದ ಹೊರಗೆ ಬಂದು ಜೀವ ಉಳಿಸಿಕೊಂಡಿದ್ದಾರೆ.

ಅಪಘಾತವನ್ನು ಕಂಡ ಸ್ಥಳೀಯರು ತಕ್ಷಣ ಸ್ಥಳದಲ್ಲಿ ಜಮಾಯಿಸಿದರು. ಅಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಶನಿವಾರ ಡಾ.ಅದ್ವೈತ್ ಅವರ ಜನ್ಮದಿನವಾಗಿತ್ತು. ಕಾರಿನಲ್ಲಿ ಅದ್ವೈತ್ ಜೊತೆಗೆ ನಾಲ್ವರು ಇದ್ದರು. ಐವರೂ ಕೊಚ್ಚಿಯಿಂದ ಕೊಡಂಗಲ್ಲೂರಿಗೆ ಹಿಂತಿರುಗುತ್ತಿದ್ದರು. ಅದ್ವೈತ್ ಹುಟ್ಟುಹಬ್ಬದ ನಿಮಿತ್ತ ಈ ಮಂದಿ ಶಾಪಿಂಗ್‌ಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.

Sulekha