ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳು ಸಾವು- ಕಾಪಾಡಲು ಹೋದ ತಂದೆ ನಾಪತ್ತೆ

ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳು ಸಾವು- ಕಾಪಾಡಲು ಹೋದ ತಂದೆ ನಾಪತ್ತೆ

ಕಾಲು ಜಾರಿ ತೆರೆದ ಬಾವಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.   ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದ ಮನೆ ಬಳಿ ಈ ಭೀಕರ ಘಟನೆ ನಡೆದಿದೆ.  ಇದೇ ವೇಳೆ ಮಕ್ಕಳನ್ನು ರಕ್ಷಿಸಲು ಹೋದ ತಂದೆಯೂ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ತೋಟದ ಮನೆಯ ಬಳಿ ಇದ್ದ ತೆರೆದ ಬಾವಿಗೆ ಬಿದ್ದು ಸಾಕ್ಷಿ (15), ರಕ್ಷಿತಾ (10) ಮೃತ ಪಟ್ಟಿದ್ದಾರೆ. ಮಕ್ಕಳನ್ನು ರಕ್ಷಿಸಲು ಬಾವಿಗೆ ಜಿಗಿದ ತಂದೆ ಸಾಬಣ್ಣ (40) ಅವರೂ ನಾಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿಯೇ ಇಬ್ಬರು ಹೆಣ್ಣು ಮಕ್ಕಳ ಮೃತದೇಹ ಪತ್ತೆಯಾಗಿದ್ದವು. ಸಾಬಣ್ಣ ಅವರ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಅಮಾನವೀಯ ಘಟನೆ – ಖಾಸಗಿ ಕ್ಷಣದ ವಿಡಿಯೋ ಇಟ್ಟುಕೊಂಡು ಅಪ್ರಾಪ್ತೆ ಮೇಲೆ 7 ಜನರಿಂದ ಅತ್ಯಾ*ಚಾರ

ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.  ತೋಟದಲ್ಲಿ ತೆರೆ ಬಾವಿ ನಿರ್ಮಿಸಲಾಗಿದ್ದು, ಇದ್ದಕ್ಕೆ ಯಾವುದೇ ತಡೆಗೋಡೆ ಇಲ್ಲ. ಮೊದಸು 10 ವರ್ಷದ ರಕ್ಷಿತಾ ಬಾವಿಗೆ ಬಿದಿದ್ದು, ಆ ನಂತರ 15 ವರ್ಷದ ಸಾಕ್ಷಿ ಬಾವಿಗೆ ಬಿದಿದ್ದಾಳೆ. ಇಬ್ಬರನ್ನ ರಕ್ಷಣೆ ಮಾಡೋಕೆ ಹೋದ ತಂದೆ ಕೂಡ  ನಾಪತ್ತೆಯಾಗಿದ್ದಾರೆ.

Kishor KV

Leave a Reply

Your email address will not be published. Required fields are marked *