ಟ್ವಿಟರ್ ನಲ್ಲಿ ತಾಂತ್ರಿಕ ದೋಷ: ಬಳಕೆದಾರರಿಗೆ ತೊಂದರೆ
ಉದ್ಯೋಗ ಕಡಿತಕ್ಕೂ ಮುಂದಾದ ಟ್ವಿಟರ್!
ಬೆಂಗಳೂರು: ಎಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ಬಳಿಕ ಕಂಪನಿಯಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಶುಕ್ರವಾರ ಟ್ವಿಟರ್ ವೆಬ್ ಅಪ್ಲಿಕೇಷನ್ ಮತ್ತು ವೆಬ್ ಪೇಜ್ ನಲ್ಲಿ ತಾಂತ್ರಿಕ ದೋಷ ಉಂಟಾಗಿ ಬಳಕೆದಾರರು ತೊಂದರೆ ಎದುರಿಸಿದ್ದಾರೆ.
ಇದನ್ನೂ ಓದಿ: ಇಂದು ಆಪ್ ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿರುವ ಕೇಜ್ರಿವಾಲ್
ಇಂದು ಮುಂಜಾನೆಯಿಂದ ವೆಬ್ ಮತ್ತು ಡೆಸ್ಕ್ ಟಾಪ್ ಆವೃತ್ತಿ ಬಳಕೆದಾರರಿಗೆ ಲಭ್ಯವಾಗುತ್ತಿಲ್ಲ. ಆದರೆ ಸ್ಮಾರ್ಟ್ ಫೋನ್ ಆ್ಯಪ್ ನಲ್ಲಿ ಟ್ವಿಟರ್ ಕಾರ್ಯನಿರ್ವಹಿಸುತ್ತಿದೆ.
ಹೊಸ ಕಾರ್ಯತಂತ್ರದ ಭಾಗವಾಗಿ ಟ್ವಿಟರ್, ವೆರಿಫೈಡ್ ಖಾತೆಗಳಿಗೆ ಶುಲ್ಕ ವಿಧಿಸಲು ಮುಂದಾಗಿದೆ. ಅಲ್ಲದೇ ತಿಂಗಳ ಚಂದಾದಾರಿಕೆ ಶುಲ್ಕವನ್ನು ಬಳಕೆದಾದರಿಗೆ ವಿಧಿಸಲಿದೆ. ಜತೆಗೆ ಉದ್ಯೋಗ ಕಡಿತಕ್ಕೂ ಮುಂದಾಗಿದ್ದು, ಶುಕ್ರವಾರದಿಂದಲೇ ವಿವಿಧ ಹಂತಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಕಂಪನಿ ತಿಳಿಸಿದೆ.