ಟ್ವಿಟ್ಟಾರಾಧಿಪತಿ ಹೊಸ ರೂಲ್ಸ್ – ಬ್ಲೂಟಿಕ್ ಗೆ ಅಧಿಕ ಶುಲ್ಕ?

ಟ್ವಿಟ್ಟಾರಾಧಿಪತಿ ಹೊಸ ರೂಲ್ಸ್ – ಬ್ಲೂಟಿಕ್ ಗೆ ಅಧಿಕ ಶುಲ್ಕ?

ಟ್ವಿಟ್ಟಾರಾಧಿಪತಿ ಎಲಾನ್ ಮಸ್ಕ್ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಟ್ವಿಟ್ಟರ್ ನಲ್ಲಿ ಬ್ಲೂಟಿಕ್ ಫೀಚರ್ ಜೊತೆಗೆ ಹೊಸದಾಗಿ ಚಿನ್ನ ಮತ್ತು ಬೂದು ಬಣ್ಣದ  ಮಾರ್ಕ್ ಗಳು ಬರಲಿವೆ ಎಂದು ಘೋಷಿಸಿದ್ದರು. ಇದೀಗ ಮಸ್ಕ್ ಟ್ವಿಟ್ಟರ್ ನ್ಲಲ್ಲಿ ಹೊಸ ಬದಲಾವಣೆಯೊಂದನ್ನು ತಂದಿದ್ದಾರೆ. ಐಫೋನ್‌ನಲ್ಲಿ ಟ್ವಿಟ್ಟರ್ ಖಾತೆ ಹೊಂದಿದ್ದವರಿಗೆ ಅಧಿಕ ಶುಲ್ಕ ವಿಧಿಸಿಲಾಗುತ್ತದೆ ಎಂದು ಮಸ್ಕ್ ತಿಳಿಸಿದ್ದಾರೆ.

ಇದನ್ನೂ ಓದಿ: 2ನೇ ಸ್ವದೇಶಿ ವಿಮಾನವಾಹಕ ನೌಕೆಗೆ ಸಿದ್ದತೆ ಶುರು

ಟ್ವಿಟ್ಟರ್‌ ಬ್ಲ್ಯೂ ಟಿಕ್‌ಗಾಗಿ ಮಾಸಿಕ ಶುಲ್ಕ 7 ಡಾಲರ್ ಆಗಿದೆ. ಇನ್ನು ಮುಂದೆ  ಐಫೋನ್‌ನಲ್ಲಿ ಟ್ವಿಟ್ಟರ್ ಅಪ್ಲಿಕೇಷನ್ ಅನ್ನು ಹೊಂದಿದ್ದರೆ ಮಾಸಿಕವಾಗಿ 11 ಡಾಲರ್ ಪಾವತಿ ಮಾಡಬೇಕಾಗುತ್ತದೆ. ಆಪಲ್ ತನ್ನ ಪ್ಲಾಟ್‌ಫಾರ್ಮ್ ಮೂಲಕ ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ವಿಧಿಸುವ ಶೇಕಡ 30ರಷ್ಟು ಶುಲ್ಕವನ್ನು ಈ ಹೆಚ್ಚಿನ ಬೆಲೆಯಿಂದ ಸರಿದೂಗಿಸಲಾಗುತ್ತದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ.

ವೇರಿಫೈಡ್ ಖಾತೆ ಯಾವ ಯಾವ ಬಣ್ಣ  

ಯಾವ ಸಂಸ್ಥೆಯ ಖಾತೆಯನ್ನು ಅಧಿಕೃತ ಅಥವಾ ಟ್ವಿಟ್ಟರ್ ವೆರಿಫೈಡ್ ಖಾತೆಯನ್ನಾಗಿಸಲಾಗುತ್ತದೆಯೋ ಆ ಖಾತೆಯಲ್ಲಿ ಗೋಲ್ಡ್ ಟಿಕ್ ಇರುತ್ತದೆ. ಇನ್ನು ಯಾರು ತಮ್ಮ ಖಾತೆಯನ್ನು ವೆರಿಫೈ ಆಗಿರಿಸಲು ಬಯಸುತ್ತಾರೋ ಅವರ ಖಾತೆಯಲ್ಲಿ ಬ್ಲ್ಯೂ ಟಿಕ್ ಕಾಣಬಹುದು. ಸೆಲೆಬ್ರಿಟಿಗಳ ಖಾತೆಯು ಬ್ಲ್ಯೂ ಟಿಕ್‌ ಆಗಿರುತ್ತದೆ. ಇನ್ನುಳಿದಂತೆ ಗ್ರೇ ಟಿಕ್ ಇರಲಿದೆ. ಇದು ಸರ್ಕಾರದ ಖಾತೆಯನ್ನು ಪ್ರತಿನಿಧಿಸುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಟ್ವಿಟ್ಟರ್ ಖಾತೆಗಳಲ್ಲಿ ನಾವು ಇನ್ಮುಂದೆ ಗ್ರೇ ಟಿಕ್ ಕಾಣಬಹುದು. ಆದರೆ ಸಚಿವರುಗಳು ಕೂಡಾ ಸರ್ಕಾರದ ಭಾಗವಾಗಿರುವುದರಿಂದ ಅವರ ಟ್ವಿಟ್ಟರ್ ಖಾತೆಯಲ್ಲೂ ಗ್ರೇ ಟಿಕ್ ಇರುತ್ತದೆಯೇ ಎಂಬ ಬಗ್ಗೆ ಸ್ಪಷ್ಟಣೆ ದೊರೆತಿಲ್ಲ.

suddiyaana