ರೈಲು ಹಳಿಯ ಬಳಿ 2.5 ಮಿಲಿಯನ್ ಡಾಲರ್ ಪತ್ತೆ ಕೇಸ್‌ಗೆ ಟ್ವಿಸ್ಟ್! – ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದೇಕೆ?
ರೈಲು ಹಳಿಯ ಬಳಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ ಕಳೆದ ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ಮುದ್ರೆ ಹೊಂದಿರುವ ಪತ್ರದ ಜತೆಗೆ 30 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಕರೆನ್ಸಿಯ ಕಟ್ಟು ಇದ್ದ ಪ್ಲಾಸ್ಟಿಕ್ ಚೀಲವೊಂದು ಸಿಕ್ಕಿತ್ತು. ಬಳಿಕ ಆ ವ್ಯಕ್ತಿ ಡಾಲರ್‌ಗಳನ್ನು ಹೆಬ್ಬಾಳ ಪೊಲೀಸರಿಗೆ ಕರೆನ್ಸಿಯನ್ನು ಒಪ್ಪಿಸಿದ್ದರು. ಇದೀಗ ಈ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ ಎನ್ನಲಾಗಿದೆ.
ಹೌದು, ನಾಗವಾರ ರೈಲು ಹಳಿ ಪಕ್ಕದ ಪೊದೆಯಲ್ಲಿ ಚಿಂದಿ ಆಯುವ ವ್ಯಕ್ತಿಯೊಬ್ಬರಿಗೆ 2.5 ಮಿಲಿಯನ್ ಡಾಲರ್ ಕರೆನ್ಸಿಯ ಕಟ್ಟು ಸಿಕ್ಕಿತ್ತು. ಇದೀಗ ಈ ಪ್ರಕರಣ ತಿರುವು ಪಡೆಯುತ್ತಿದ್ದು, ಖುದ್ದು ಕಮಿಷನರ್ ಮಾಹಿತಿ ನೀಡಿದ ಬೆನ್ನಲ್ಲೆ ಪ್ರಶ್ನೆಗೆ ಉತ್ತರ ಹುಡುಕುತ ಹೆಬ್ಬಾಳ ಪೊಲೀಸರು ದೆಹಲಿಗೆ ತೆರಳಿದ್ದಾರೆ. ಆರ್ಬಿಐಗೆ ಪತ್ರ ಬರೆಯುವ ಮೂಲಕ ಸತ್ಯ ಹುಡುಕಲು ಹೊರಟಿದ್ದಾರೆ. ಆದರೆ ಈಗ ಆರ್ಬಿಐ ಕೊಟ್ಟ ಮಾಹಿತಿ ಮೇರೆಗೆ ದೆಹಲಿಯ ಮತ್ತೊಂದು ಕಚೇರಿಗೆ ಪೊಲೀಸರು ಎಂಟ್ರಿ ನೀಡಿದ್ದಾರೆ. ರೈಲು ಹಳಿಯ ಬಳಿ ಸಿಕ್ಕ ಅಮೇರಿಕನ್ ಡಾಲರ್ಗಳು ನಕಲಿನಾ ಎಂಬ ಶಂಕೆ ಮೂಡಿಸಿದೆ.
ಇದನ್ನೂ ಓದಿ: ಒತ್ತೆಯಾಳುಗಳನ್ನು ಬಿಡುಗಡೆ ಮಾಡದೇ ಇದ್ರೆ ಕದನ ವಿರಾಮ ಇಲ್ಲ – ಬೆಂಜಮಿನ್ ನೆತನ್ಯಾಹು
ವಶಕ್ಕೆ ಪಡೆದ ಡಾಲರ್ಸ್ಗಳ ಜೊತೆ ವಿಶ್ವ ಸಂಸ್ಥೆಯ ಲೆಟರ್ ಹೆಡ್ನಲ್ಲಿರು ಪತ್ರ ಕೂಡ ಪತ್ತೆ ಆಗಿದೆ. ಯುಎನ್ನಿಂದ ಅಭಿವೃದ್ಧಿಗಾಗಿ ಹಣ ಕಳುಹಿಸಲಾಗಿದೆ. ಈ ಮಿಲಿಯನ್ಸ್ ಆಫ್ ಡಾಲರ್ಸ್ ಬಗ್ಗೆ ಗೌಪ್ಯತೆ ಕಾಪಾಡಿ ಎಂದು ಲೆಟರ್ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಡಾಲರ್ಸ್ಗಳ ನೋಟಿನ ಸಿರಿಯಲ್ಗಳನ್ನು ಸಹ ಉಲ್ಲೇಖ ಮಾಡಿದ್ದು, ಮೇಲ್ನೋಟಕ್ಕೆ ನಕಲಿ ಡಾಲರ್ಸ್ ಎಂಬ ಶಂಕೆ ವ್ಯಕ್ತವಾಗಿದೆ.
ಮತ್ತೊಂದೆಡೆ ಈ ಯುಎಸ್ ಕರೆನ್ಸಿ ಅಸಲಿಯತ್ತು ಎಂದು ಆರ್ಬಿಐ ಧೃಡಿಕರಿಸಿಲ್ಲ. ದೆಹಲಿಯ ಕಚೇರಿಯೊಂದರ ಬಗ್ಗೆ ಮಾಹಿತಿ ನೀಡಿದ್ದು, ಹಾಗಾಗಿ ಸದ್ಯ ಹೆಬ್ಬಾಳ ಪೊಲೀಸರಿಗೆ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ದೆಹಲಿಗೆ ತೆರಳಿದ್ದಾರೆ.
ಕರೆನ್ಸಿ ಜೊತೆ ಸಿಕ್ಕ ಪತ್ರದಲ್ಲಿ ಏನಿದೆ?
‘ಆರ್ಥಿಕ ಮತ್ತು ಹಣಕಾಸು ಸಮಿತಿಯು ದಕ್ಷಿಣ ಸುಡಾನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಸಹಾಯ ಮಾಡಲು ಭದ್ರತಾ ಮಂಡಳಿಯ ಸದಸ್ಯರು ಮತ ಚಲಾಯಿಸಿದ ವಿಶೇಷ ನಿಧಿಯನ್ನು ಇರಿಸುತ್ತದೆ. ಈ ಪ್ರದೇಶಗಳಲ್ಲಿನ ಭಯೋತ್ಪಾದಕರು ಮತ್ತು ಸರ್ವಾಧಿಕಾರಿಗಳಂತಹ ಅನಧಿಕೃತ ವ್ಯಕ್ತಿಗಳು ಬ್ಯಾಂಕಿಂಗ್ ಕಾರ್ಯಾಚರಣೆಗಳು ಮತ್ತು ಅಂತಹ ಕರೆನ್ಸಿಯನ್ನು ಹೈಜಾಕ್ ಮಾಡುವುದರಿಂದ, ವಿಶ್ವಸಂಸ್ಥೆಯು ನೋಟುಗಳನ್ನು ಸುರಕ್ಷಿತವಾಗಿರಿಸಲು, ಸುರಕ್ಷಿತವಾಗಿ ಗಮ್ಯಸ್ಥಾನವನ್ನು ತಲುಪಲು ನೋಟುಗಳ ಮೇಲೆ ಲೇಸರ್ ಸ್ಟ್ಯಾಂಪ್ ಲಗತ್ತಿಸಲು ಹಣಕಾಸು ಸಮಿತಿಗೆ ಅಧಿಕಾರ ನೀಡಿತು’ ಎಂದು ಕರೆನ್ಸಿಯೊಂದಿಗೆ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾದ ವಿಶ್ವಸಂಸ್ಥೆ ಮುದ್ರೆಯನ್ನು ಹೊಂದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ’.