ಸೊಸೆಗೆ ಆರತಿ ಎತ್ತಿ ಸ್ವಾಗತಿಸಿದ ನಂದ – ಮಾವನ ಅಕ್ಕರೆ ಕಂಡು ಸಂಭ್ರಮಿಸಿದ ಮೀನಾ

ನಂದ ಗೋಕುಲ ಧಾರಾವಾಹಿಯಲ್ಲಿ ಈಗ ನಂದನ ಮನೆ ನಂದನ ವನವಾಗಿದೆ. ಜೇನಿನ ಗೂಡು ನಾವೆಲ್ಲಾ ಬೇರೆಯಾದರೆ ಜೇನಿಲ್ಲ ಎಂಬ ರೀತಿ ನಂದನ ಕುಟುಂಬದಲ್ಲಿ ನಗು ಮೂಡಿದೆ. ಇಷ್ಟು ದಿನ ಸೊಸೆ ಮೀನಾಳನ್ನು ಸರಿಯಾಗಿ ಮಾತನಾಡಿಸದೇ ಇರುವ ಮಾವ ನಂದ ತಾನೇ ಸ್ವತಃ ಸೊಸೆಗೆ ಆರತಿ ಬೆಳಗಿ ಮನೆ ತುಂಬಿಸಿಕೊಂಡಿದ್ದಾರೆ.
ಇದನ್ನೂ ಓದಿ:ರಕ್ಷಿತಾ ಮೇಲಿನ ಸಿಟ್ಟಿಗೆ ರಘು ಸೇಡು – ನಾಮಿನೇಟ್ ಮಾಡಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡ್ರಾ?
ನಂದ ಗೋಕುಲ ಧಾರಾವಾಹಿಯಲ್ಲಿ ಕೊನೆಗೂ ನಂದ ಮೀನಾಳನ್ನು ತನ್ನ ಸೊಸೆಯೆಂದು ಒಪ್ಪಿಕೊಂಡಿದ್ದಾನೆ . ನಂದನ ಮಗ ಕೇಶವನ ಜೊತೆ ಮೀನಾಳ ಮದುವೆ ನಡೆದಿತ್ತು. ಓಡಿ ಹೋಗಿ ಮದುವೆ ಆದ ಕಾರಣ ನಂದ ಸೊಸೆಯಾಗಿ ಮೀನಾಳನ್ನು ಒಪ್ಪಿಕೊಂಡಿರಲಿಲ್ಲ. ಇದು ಮನೆಯವರ ಬೇಸರಕ್ಕೆ ಕಾರಣ ಆಗಿತ್ತು. ಆದರೆ, ಈಗ ಸೊಸೆ ಮೀನಾಳನ್ನು ಮಾವ ನಂದ ಒಪ್ಪಿಕೊಂಡಿದ್ದಾನೆ. ಇದು ವೀಕ್ಷಕರ ಸಂತಸಕ್ಕೆ ಕಾರಣವಾಗಿದೆ.
ನಂದ ತಾನು ಓಡಿ ಬಂದು ಮದುವೆ ಆಗಿದ್ದಕ್ಕೆ ಕುಟುಂಬದಿಂದ ಅಂತರ ಕಾಯ್ದುಕೊಳ್ಳಬೇಕಾಯಿತು. ಹೀಗಾಗಿ ತನ್ನ ಮಕ್ಕಳಿಗೆ ಈ ರೀತಿ ಆಗಬಾರದು ಎಂಬುದು ನಂದನ ಉದ್ದೇಶ ಆಗಿತ್ತು. ಈ ಕಾರಣದಿಂದಲೇ ಯಾರೊಬ್ಬರೂ ಲವ್ ಮ್ಯಾರೇಜ್ ಆಗಬಾರದು ಎಂದು ಭಾಷೆ ತೆಗೆದುಕೊಂಡಿದ್ದ. ಆದರೆ, ಆಗಿದ್ದೇ ಬೇರೆ. ಮಗ ಕೇಶವ ಲವ್ ಮಾಡಿ ಮದುವೆಯಾಗಿದ್ದಾನೆ. ಇಷ್ಟು ದಿನ ಮೀನಾಳನ್ನು ನಂದ ದೂರ ಇಟ್ಟಿದ್ದ. ಆದರೆ, ಈಗ ಆಕೆಯನ್ನು ತಾನೇ ಆರತಿ ಎತ್ತಿ ಮನೆಗೆ ತುಂಬಿಸಿಕೊಂಡಿದ್ದಾನೆ. ಮೀನಾಳಿಗೆ ಹೊಸ್ತಿಲು ಶಾಸ್ತ್ರವನ್ನು ನೆರವೇರಿಸುತ್ತಾನೆ.
ಇನ್ನು ಮೀನಾ ಕೂಡಾ ಅಷ್ಟೇ. ಅತ್ತೆ ಮತ್ತು ಮಾವನ ಕಂಡರೆ ತುಂಬಾ ಗೌರವ, ಪ್ರೀತಿ. ತನ್ನ ಕುಟುಂಬ ಯಾವತ್ತೂ ಬೇರೆಯಾಗಬಾರದು ಎಂಬ ಆಸೆ ಮೀನಾಳಿಗೂ ಇದೆ. ಜೊತೆಗೆ ಅತ್ತೆ, ಮಾವನ ಗೌರವಕ್ಕೆ ಕುಂದು ಬಂದರೆ ಮೀನಾ ಕೂಡಾ ಸಹಿಸಲ್ಲ. ಒಂದು ಕುಟಂಬ ಅಂದರೆ ಹೀಗಿರಬೇಕು ಎಂದು ತೋರಿಸಿಕೊಡುವ ಸೀರಿಯಲ್ ನಂದಗೋಕುಲ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನೋಡಿರಿ

