ಸೀನ ಮಾಡಿರೋ ದ್ರೋಹಕ್ಕೆ ಗುಂಡಮ್ಮನ ಬಾಳಲ್ಲಿ ಬಿರುಗಾಳಿ – ಬೀದಿಗೆ ಬಿದ್ದ ರಾಣಿಗೆ ಯಾರು ಗತಿ?

ಸೀನ ಮಾಡಿರೋ ದ್ರೋಹಕ್ಕೆ ಗುಂಡಮ್ಮನ ಬಾಳಲ್ಲಿ ಬಿರುಗಾಳಿ – ಬೀದಿಗೆ ಬಿದ್ದ ರಾಣಿಗೆ ಯಾರು ಗತಿ?

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ಇಬ್ಬರು ತಂಗಿಯರ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಒಬ್ಬಳು ತಂಗಿ ಬೀದಿಗೆ ಬಿದ್ದಿದ್ದಾಳೆ. ಇನ್ನೊಬ್ಬ ತಂಗಿಗೆ ಗಂಡನೇ ದ್ರೋಹ ಬಗೆದಿದ್ದಾನೆ. ಗುಂಡಮ್ಮನ ಹೃದಯ ಒಡೆದು ಹೋಗಿದೆ.

ಇದನ್ನೂ ಓದಿ:ಕುಚಿಕು ಗೆಳೆಯರ ಕಣ್ಣೀರಿಗೆ ತಾರಮ್ಮ ಭಾವುಕ – ಶರಣ್ ತರುಣ್ ಸುಧೀರ್ ಗೆಳೆತನಕ್ಕೆ ಸೂರ್ಯ ಚಂದ್ರರೇ ಸಾಕ್ಷಿ..!

ಅಣ್ಣಯ್ಯ ಧಾರಾವಾಹಿಯಲ್ಲಿ ವೀಕ್ಷಕರು ಇಷ್ಟ ಪಡುತ್ತಿದ್ದ ಗುಂಡಮ್ಮ ಮತ್ತು ಸೀನ ಕಥೆಯೇ ರೀತಿಯೇ ಬದಲಾಗಿದೆ. ವಾಪಸ್ ಸೀನ ಪಿಂಕಿಯ ಪ್ರೀತಿಯಲ್ಲಿ ವಿಲೀನವಾಗಿದ್ದಾನೆ. ಗುಂಡಮ್ಮನ ಎದುರು ನಾಟಕವಾಡಿ ನಂಬಿಕೆಗೆ ದ್ರೋಹ ಮಾಡುತ್ತಿದ್ದಾನೆ. ಹೌದು.. ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ತಿರುವುಗಳ ಮೇಲೆ ತಿರುವುಗಳು ಬರುತ್ತಿವೆ. ಇಲ್ಲಿವರೆಗೆ ಬರೀ ಸಂತೋಷವೇ ತುಂಬಿದ್ದ ಶಿವಣ್ಣನ ಕುಟುಂಬದಲ್ಲಿ ಒಂದೊಂದಾಗಿ ಕೆಟ್ಟ ಘಳಿಗೆ ಶುರುವಾಗುತ್ತಿದೆ.

ಶಿವಣ್ಣ ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಂಗಿಯರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಇಬ್ಬರು ಮದುವೆಯಾಗಿ ಹಾಯಾಗಿದ್ದಾರೆ ಎಂದು ಶಿವು ಖುಷಿಯಾಗಿದ್ದಾನೆ. ಆದರೆ, ಇಬ್ಬರ ಬದುಕಲ್ಲಿ ಬಿರುಗಾಳಿಯೇ ಬೀಸಿದೆ. ತಂಗಿ ರಾಣಿಯನ್ನು ರಾಜಕುಮಾರನಿಗೆ ಮದುವೆ ಮಾಡಿಕೊಟ್ಟಿದ್ದು, ಆಕೆ ಮಹಾರಾಣಿಯಂತೆ ಉತ್ತಮ ಜೀವನ ನಡೆಸುತ್ತಿದ್ದಾಳೆ ಎಂದು ಅಂದುಕೊಂಡಿರುತ್ತಾನೆ ಶಿವಣ್ಣ, ಆದರೆ ಅಲ್ಲಿ ಆಗಿರೋದೆ ಬೇರೆ. ರಾಣಿಯ ಪರಿಸ್ಥಿತಿ ಹೇಗಾಗಿದೆ ಎಂದರೆ, ಆಸ್ತಿಯನ್ನೆಲ್ಲಾ ರಾಣಿ ಕೈಯಿಂದ ತಮ್ಮ ಹೆಸರಿಗೆ ಬರೆದುಕೊಂಡಿರುವ ವಿಲನ್ ಗಳು, ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಊಟವನ್ನು ಕೊಡದೆ ಸತಾಯಿಸುತ್ತಿದ್ದಾರೆ. ರಾಣಿ ಗಂಡ ಹಸಿವಿನಿಂದ ನರಳುತ್ತಿದ್ದರೆ, ರಾಣಿ ಸ್ವಲ್ಪನಾದ್ರೂ ತಿನ್ನೋದಕ್ಕೆ ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಇನ್ನೊಂದು ಕಡೆ ಗುಂಡಮ್ಮನ ಮುಂದೆ ಸೀನಾ ಮತ್ತು ಪಿಂಕಿಯ ಲವ್ ಸ್ಟೋರಿ ಅನಾವರಣ ಆಗಿದೆ. ಸೀನಾ ಹುಟ್ಟುಹಬ್ಬಕ್ಕೆ ರಶ್ಮಿ ಗಂಡನಿಗೆ ಇಷ್ಟವಾದ ಎಲ್ಲಾ ತಿಂಡಿಗಳನ್ನು ಮಾಡಿ ಗಂಡನಿಗೆ ಕೊಡಲು ಖುಷಿ ಖುಷಿಯಾಗಿ ಬಂದರೆ, ಅಲ್ಲಿ ನಡೆಯುತ್ತಿರುವ ಘಟನೆ ನೋಡಿ ರಶ್ಮಿ ಎದೆಯೇ ಒಡೆದುಹೋಗಿದೆ. ಪಿಂಕಿ ಸೀನಾಗೆ ಉಂಗುರುವನ್ನು ತೊಡಿಸುತ್ತಾ, ಮತ್ತೆ ಪ್ರೀತಿಸಿ ನನ್ನನ್ನು ಮದುವೆ ಮಾಡಿಕೊಳ್ತಿಯಾ ಎಂದು ಕೇಳಿದ್ದಾನೆ, ಅದಕ್ಕೆ ಸೀನಾ ಕೂಡ ಒಪ್ಪಿಗೆ ಕೊಟ್ಟು ಕೈ ಮುಂದೆ ಮಾಡಿದ್ದಾರೆ. ಜೊತೆಗೆ ಇನ್ನು ಮುಂದೆ ನಾನು ಯಾರಿಗೂ ಹೆದರೋದಿಲ್ಲ, ನಾನು ನನಗೋಸ್ಕರ ಜೀವಿಸುತ್ತೇನೆ ಎನ್ನುತ್ತಾ ಅಮ್ಮನಿಗೆ ಮತ್ತು ಪಿಂಕಿ ಮಾತುಕೊಟ್ಟಿದ್ದಾನೆ. ಸೀನ ತನ್ನನ್ನು ಪ್ರೀತಿ ಮಾಡುತ್ತಲೇ ಇಲ್ಲ, ತಾನು ಇಲ್ಲಿವರೆಗೆ ಕಟ್ಟಿಕೊಂಡು ಬಂದಿದ್ದ ನಂಬಿಕೆ ಸುಳ್ಳಾಯ್ತು ಎಂಬುದನ್ನು ಅರಿತ ರಶ್ಮಿಗೆ ತಾನು ನಿಂತ ನೆಲವೇ ಕುಸಿದಂತಾಗುತ್ತದೆ. ಅಣ್ಣನಿಗೆ ಹೇಳಲು ಆಗದೇ, ಮನಸ್ಸಿನಲ್ಲಿ ಇಟ್ಟುಕೊಳ್ಳಲೂ ಆಗದೇ ಕಣ್ಣೀರಿಡುತ್ತಾ ಒದ್ದಾಡುತ್ತಿದ್ದಾಳೆ ರಶ್ಮಿ.

ಇದರ ಮಧ್ಯೆ ಸೀನ ಕಣ್ಣೆದುರೇ ಸುಳ್ಳು ಹೇಳುತ್ತಿರುವುದು ನೋಡಿ ರಶ್ಮಿ ನಂಬಿಕೆ ಚೂರು ಚೂರಾಗಿ ಒಡೆದು ಹೋಗಿದೆ. ಇಬ್ಬರು ಹೆಣ್ಣು ಮಕ್ಕಳ ಬದುಕಲ್ಲಿ ಬಂದಿರೋ ಸಂಕಷ್ಟಕ್ಕೆ ಪರಿಹಾರ ಏನು ಅನ್ನೋ ಕುತೂಹಲ ವೀಕ್ಷಕರನ್ನು ಕಾಡುತ್ತಿದೆ.

Sulekha