ಭೂಮಿಕಾ ಮತ್ತು ಗೌತಮ್ ಒಂದಾಗೋ ಕಾಲ – ವಠಾರದಲ್ಲಿ ಡುಮ್ಮ ಸಾರ್ ಮತ್ತು ಟೀಚರ್ ಲವ್ ಸ್ಟೋರಿ ರೀ ಸ್ಟಾರ್ಟ್..!

ಭೂಮಿಕಾ ಮತ್ತು ಗೌತಮ್ ಒಂದಾಗೋ ಕಾಲ – ವಠಾರದಲ್ಲಿ ಡುಮ್ಮ ಸಾರ್ ಮತ್ತು ಟೀಚರ್  ಲವ್ ಸ್ಟೋರಿ ರೀ ಸ್ಟಾರ್ಟ್..!

ಅಮೃತಧಾರೆ ಸೀರಿಯಲ್‌ನಲ್ಲಿ ವೀಕ್ಷಕರು ಅಂದುಕೊಂಡಂತೆ ಆಗಿದೆ. ವಠಾರಕ್ಕೆ ಭೂಮಿಕಾ ಯಾವಾಗ ಬರುತ್ತಾಳೆ ಅಂತಾ ಕಾಯುತ್ತಿದ್ದಾಗಲೇ ಆ ಗಳಿಗೆಯೂ ಬಂದೇ ಬಿಟ್ಟಿದೆ. ಇನ್ನು ಧಾರಾವಾಹಿ ಕಥೆ ವಠಾರದ ಸುತ್ತ ಸುತ್ತಲಿದೆ. ಇಲ್ಲಿಯೇ ಗೌತಮ್, ಭೂಮಿಕಾ ಮತ್ತು ಇಬ್ಬರು ಮಕ್ಕಳು ಜೊತೆಯಲ್ಲಿದ್ದಾರೆ. ಸದ್ಯ ದೂರವಾಗಿರುವ ಮನಸುಗಳು ಯಾವಾಗ ಹತ್ತಿರವಾಗಲಿದೆ ಅನ್ನೋ ಕುತೂಹಲ ಶುರುವಾಗಿದೆ.

ಇದನ್ನೂ ಓದಿ:  ಗೌತಮ್ ಮಗಳು ಸಿಕ್ಕೇಬಿಟ್ಟಳು – ಭೂಮಿಕಾ ಇನ್ನಾದರೂ ಗೌತಮ್ ಹತ್ತಿರ ಬರುತ್ತಾಳಾ?

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಈಗ ಮತ್ತೊಮ್ಮೆ ರೋಚಕ ತಿರುವು ಪಡೆದುಕೊಂಡಿದೆ. ದೂರದ ಹಳ್ಳಿಯಲ್ಲಿದ್ದ ಭೂಮಿಕಾ, ಮಲ್ಲಿ ಮತ್ತು ಅಪ್ಪು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಇತ್ತ ಗೌತಮ್ ಮನೆಗೆ ಮಗಳು ಬಂದಿದ್ದಾಳೆ. ಗೌತಮ್ ಪಾಲಿಗೆ ಮುದ್ದು ಮಗಳು ಅದೃಷ್ಟ ದೇವತೆಯಾಗಿದ್ದಾಳೆ. ಇದೀಗ ಧಾರವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಮನೆಯಲ್ಲಿ ನೀರು ಬರುತ್ತಿಲ್ಲ ಎಂದು ಓನರ್ ಜೊತೆ ಮಲ್ಲಿ ಕೋಳಿ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಓನರ್ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ. ಇದೀಗ ಭೂಮಿಕಾಗೆ ಗೆಳತಿಯ ಸಹಾಯದಿಂದ ವಠಾರದಲ್ಲಿ ಬಾಡಿಗೆ ಮನೆ ಸಿಕ್ಕಿದೆ. ಆದ್ರೆ ಇದೇ ವಠಾರದಲ್ಲಿ ಗೌತಮ್ ವಾಸವಾಗಿರುವ ವಿಷಯ ಭೂಮಿಕಾಗೆ ತಿಳಿದಿಲ್ಲ. ಗೌತಮ್‌ನಿಂದ ದೂರವಿರಬೇಕು ಎಂದು ಭೂಮಿಕಾ ಎಷ್ಟೇ ಹರಸಾಹಸ ಪಟ್ಟರೂ ಮತ್ತೊಮ್ಮೆ ಗೌತಮ್ ಎದುರಿಗೆ ಬರುವಂತಾಗಿದೆ. ಗೌತಮ್ ವಾಸವಾಗಿರುವ ವಠಾರಕ್ಕೆ ಭೂಮಿಕಾ ಕಾಲಿಟ್ಟಾಗಿದೆ. ತಮ್ಮ ವಠಾರಕ್ಕೆ ಹೊಸದಾಗಿ ಬಂದಿರುವ ಅತಿಥಿಗಳಿಗೆ ಟೀ ಮಾಡಿಕೊಂಡು ಕೊಡಲು ಗೌತಮ್ ಹೋಗಿದ್ದು, ಮತ್ತೆ ಭೂಮಿಕಾ ಅವರನ್ನು ನೋಡುವಂತಾಗಿದೆ.

ಇತ್ತ ಭೂಮಿಕಾ ಮತ್ತು ಗೌತಮ್‌ಗಾಗಿ ಜೈದೇವ್ ಹುಡುಕಾಟ ನಡೆಸಿದ್ದಾನೆ. ಆಸ್ತಿಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದಾರೆ. 600 ಕೋಟಿ ರೂಪಾಯಿ ಸಾಲದಿಂದ ಪಾರಾಗಲು ಸಂಚು ರೂಪಿಸುತ್ತಿದ್ದಾರೆ. ಆದರೆ, ಪಾರ್ಥನ ಪತ್ನಿ ಜೈದೇವ್‌ಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಅಕ್ಕ ಬಾವ ಅವರ ಪಾಲಿಗೆ ನೆಮ್ಮದಿಯಾಗಿರಲಿ. ಅವರನ್ನು ಹುಡುಕೋ ಪ್ರಯತ್ನ ಮಾಡಬೇಡಿ ಅಂತಾ ಹೇಳುತ್ತಾಳೆ. ಆದರೆ, ದುಷ್ಟ ಜೈದೇವ್ ಯಾರ ಮಾತು ಕೇಳುವ ಸ್ಥಿತಿಯಲ್ಲಿ ಇಲ್ಲ. ಒಟ್ನಲ್ಲಿ ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿ ಗೌತಮ್ ಮತ್ತು ಮಕ್ಕಳು ಒಂದಾಗುವ ಸಮಯ ಹತ್ತಿರಬಂದಿದೆ. ಮತ್ತೊಂದೆಡೆ ಮನಸು ಹತ್ತಿರವಾದ ಮೇಲೆ ಮನೆ ಸೇರುವ ಗಳಿಗೆಯೂ ಹತ್ತಿರ ಬರಲಿದೆ ಅನ್ನೋ ವೀಕ್ಷಕರ ಲೆಕ್ಕಾಚಾರವೂ ಜೋರಾಗಿದೆ.

Sulekha