ಅಪ್ಪ ಗೌತಮ್ ಜೊತೆ ಮಗ ಇದ್ದಿದ್ದೇ ತಪ್ಪಾಯ್ತಾ? – ಗಂಡನಿಂದ ಮತ್ತಷ್ಟು ದೂರ ಹೋಗ್ತಾಳಾ ಭೂಮಿಕಾ?

ಅಪ್ಪ ಗೌತಮ್ ಜೊತೆ ಮಗ ಇದ್ದಿದ್ದೇ ತಪ್ಪಾಯ್ತಾ? – ಗಂಡನಿಂದ ಮತ್ತಷ್ಟು ದೂರ ಹೋಗ್ತಾಳಾ ಭೂಮಿಕಾ?

ಅಮೃತಧಾರೆ ಧಾರಾವಾಹಿಯಲ್ಲಿ ಎಲ್ಲಾ ಸರಿಯಾಯ್ತು ಅನ್ನುವಾಗಲೇ ಮತ್ತೊಂದು ತಿರುವು ಸಿಕ್ಕಿದೆ. 5 ವರ್ಷಗಳ ನಂತರ ಗೌತಮ್ ಹಾಗೂ ಭೂಮಿಕಾ ಪರಸ್ಪರ ಭೇಟಿಯಾಗಿದ್ದಾರೆ. ಆದರೆ, ಗೌತಮ್ ಪ್ರೀತಿಯನ್ನು ಭೂಮಿಕಾ ನಿರಾಕರಿಸಿದ್ದಾಳೆ. ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಎಂದು ತಿರಸ್ಕರಿಸಿದ್ದಾಳೆ. ಇದರ ನಡುವೆ ಮಗ ಆಕಾಶ ಅಪ್ಪ ಅಮ್ಮನ ಬೆಸೆಯುವ ಸೇತುವೆಯಾಗುತ್ತಾನೆ ಎಂದು ನಿರೀಕ್ಷೆ ಮಾಡಲಾಗಿತ್ತು. ಈಗ ಈ ಸೇತುವೆಯೇ ಇಬ್ಬರ ಸಂಬಂಧ ಮುರಿದುಬೀಳುವ ಹಾಗೆ ಮಾಡುವ ಸಾಧ್ಯತೆಯೇ ಹೆಚ್ಚಾಗಿದೆ.

ಇದನ್ನೂ ಓದಿ:ಗೌತಮ್ ಪ್ರೀತಿ ಧಿಕ್ಕರಿಸಿದ ಭೂಮಿಕಾ – ಮಗನ ನೋಡಲು ಬಂದ ಗೌತಮ್ ಮತ್ತು ಆನಂದ್ ಮಾಸ್ಟರ್ ಪ್ಲಾನ್ ವರ್ಕ್ ಆಗುತ್ತಾ?

ಐದು ವರ್ಷಗಳ ಬಳಿಕ ಗೌತಮ್ ಭೇಟಿಯಾದ ಭೂಮಿಕಾ ಕೆಲವು ಎಚ್ಚರಿಕೆಗಳನ್ನು ನೀಡಿದ್ದಳು. ‘ನಿಮ್ಮಿಂದ ನಾನು ತುಂಬಾನೇ ದೂರ ಬಂದಿದ್ದೇನೆ. ನನ್ನನ್ನು ಮತ್ತೆ ಹುಡುಕುವ ಪ್ರಯತ್ನ ಮಾಡಬೇಡಿ. ಹಾಗಾದಲ್ಲಿ ನಾನು ನಿಮ್ಮಿಂದ ಮತ್ತಷ್ಟು ದೂರ ಹೋಗಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಳು. ಈಗ ಹಾಗೆ ಆಗುವ ಸೂಚನೆ ಸಿಕ್ಕಿದೆ. ಹೌದು. ಗೌತಮ್ ಹೆಂಡತಿ ಕೊಟ್ಟ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಗೌತಮ್ ತನ್ನ ಮಗ ಆಕಾಶ್​ನ ಪದೇ ಪದೇ ಭೇಟಿ ಮಾಡುತ್ತಿದ್ದ. ಈ ಭೇಟಿ ಗುಟ್ಟಾಗಿ ನಡೆಯುತ್ತಿತ್ತು. ಈ ಬಗ್ಗೆ ಭೂಮಿಕಾಗೆ ಯಾವುದೇ ಅನುಮಾನ ಇರಲಿಲ್ಲ. ಆದರೆ, ಈಗ ಗೌತಮ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ಭೂಮಿಕಾ ಮತ್ತಷ್ಟು ದೂರ ಆಗುವ ಸೂಚನೆ ಸಿಕ್ಕಿದೆ.

ಗೌತಮ್ ಹಾಗೂ ಆಕಾಶ್ ಮಾತನಾಡುತ್ತಿದ್ದರು. ಆಕಾಶ್​ಗೆ ತೋರಿದ ಪ್ರೀತಿಯಿಂದ ಆತ ಖುಷಿಯಾಗಿದ್ದಾನೆ. ಈ ವೇಳೆ ಭೂಮಿಕಾ ನೋಡಿ ಬಿಟ್ಟಿದ್ದಾಳೆ. ಗೌತಮ್ ಮುಖದಲ್ಲಿ ಆತಂಕದ ಛಾಯೆ ಮೂಡಿದೆ. ಈಗ ಇಬ್ಬರೂ ಮತ್ತಷ್ಟು ದೂರ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಭೂಮಿಕಾ ಹಾಗೂ ಗೌತಮ್ ಬೇರೆ ಆಗಿರುವಾಗ ತೆಗೆದುಕೊಂಡ ಕಥಾ ಹಂದರ ಸಾಕಷ್ಟು ಟೀಕೆಗೂ ಕಾರಣ ಆಗಿದೆ. ವಿವಿಧ ಸಿನಿಮಾಗಳ ಕಥೆಯನ್ನು ಇಟ್ಟುಕೊಂಡು ಈ ರೀತಿ ಕಥೆ ಮಾಡಲಾಗುತ್ತಿದೆ ಎಂದು ಅನೇಕರು ಟೀಕೆ ಮಾಡಿದ್ದೂ ಇದೆ. ಅದೇನೇ ಆದರೂ, ಈ ಧಾರಾವಾಹಿ ದಿನೇ ದಿನೇ ವೀಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

Sulekha