ಕರೂರು ಕಾಲ್ತುಳಿತ ದುರಂತದಲ್ಲಿ ಸಾವಿನ ಸಂಖ್ಯೆ 41ಕ್ಕೆ ಏರಿಕೆ – ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ

ಕರೂರು ಕಾಲ್ತುಳಿತ ದುರಂತದಲ್ಲಿ ಸಾವಿನ ಸಂಖ್ಯೆ 41ಕ್ಕೆ ಏರಿಕೆ – ಮದ್ರಾಸ್‌ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ

ತಮಿಳುನಾಡಿನ ಕರೂರಿನಲ್ಲಿ ಶನಿವಾರ ಟಿವಿಕೆ ಪ್ರಚಾರದ ರ‍್ಯಾಲಿ ವೇಳೆ ಘೋರ ದುರಂತ ಸಂಭವಿಸಿದೆ. ರ‍್ಯಾಲಿ ವೇಳೆ ಕಾಲ್ತುಳಿತ ಉಂಟಾಗಿದ್ದು, ಸಾವಿನ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಕಾಲ್ತುಳಿತ ದುರಂತದ ಬಗ್ಗೆ ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್‌ ದಳಪತಿ ಸಲ್ಲಿಸಿದ್ದ ಅರ್ಜಿ ಇಂದು ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಏಷ್ಯಾ ಕಪ್ ಗೆದ್ದರೂ ಭಾರತಕ್ಕೆ ಟ್ರೋಫಿ ಇಲ್ಲ – ಟೀಂ ಇಂಡಿಯಾ ಆಟಗಾರರ ಜಾಲಿ ಜಾಲಿ

ಶನಿವಾರ ನಡೆದ ರ‍್ಯಾಲಿ ವೇಳೆ ಭೀರಕರ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ಈಗಾಗಲೇ ಕಾಲ್ತುಳಿತ ದುರಂತ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.  ಕಾಲ್ತುಳಿತದ ಸ್ಥಳದಲ್ಲಿರುವ ಎಲ್ಲಾ ಸಿಸಿಕ್ಯಾಮರಾ, ಡ್ರೋನ್ ವಿಡಿಯೋ ಹಾಗೂ ಮೊಬೈಲ್‌ಗಳಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋಗಳನ್ನ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಇನ್ನು ಕಾಲ್ತುಳಿತ ದುರಂತ ಸಂಬಂಧ ವಿಜಯ್ ಅವರ ಪರವಾಗಿ ತಮಿಳಗ ವೆಟ್ರಿ ಕಳಗಂ ಪಕ್ಷದ ಕಾನೂನು ತಂಡ ಸ್ವತಂತ್ರ ತನಿಖೆ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ. ಈ  ಅರ್ಜಿಯ ವಿಚಾರಣೆ ಮದ್ರಾಸ್‌ ಹೈಕೋರ್ಟ್‌ನಲ್ಲಿ ನಡೆಯಲಿದೆ. ಈ ನಡುವೆ ರ‍್ಯಾಲಿಗಳಿಗೆ ಇನ್ಮುಂದೆ ಪ್ರೋಟೋಕಾಲ್‌ ತಯಾರಿಸುವವರೆಗೆ ನಟ ವಿಜಯ್‌  ರ‍್ಯಾಲಿಗೂ ಅನುಮತಿ ನೀಡದಂತೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ.

ಈ ಕುರಿತು ಮಾತನಾಡಿರುವ ಟಿವಿಕೆ ಪಕ್ಷದ ವಕೀಲ ಅರಿವಳಗನ್‌, ಕರೂರಿನಲಿ ನಡೆದ ಘಟನೆ ಹಿಂದೆ ಕ್ರಿಮಿನಲ್‌ ಪಿತೂರಿ ಇದೆ. ಆದ್ದರಿಂದ ನಾವು ರಾಜಕೀಯ ಸಂಸ್ಥೆಯ ಮೂಲಕ ತನಿಖೆ ಮಾಡೋದು ಬೇಡ. ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯವೇ ವಿಶೇಷ ತನಿಖಾ ತಂಡವನ್ನ ರಚಿಸಬೇಕು. ಇಲ್ಲದಿದ್ದರೆ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಅಂತ ಆಗ್ರಹಿಸಿದ್ದಾರೆ.

Shwetha M