ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ರಾಷ್ಟ್ರಪಿತನ ಮರಿಮೊಮ್ಮಗ ತುಷಾರ್ ಗಾಂಧಿ
‘ಇದೊಂದು ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ ಕಾಂಗ್ರೆಸ್

ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ರಾಷ್ಟ್ರಪಿತನ ಮರಿಮೊಮ್ಮಗ ತುಷಾರ್ ಗಾಂಧಿ‘ಇದೊಂದು ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ ಕಾಂಗ್ರೆಸ್

ಮಹಾರಾಷ್ಟ್ರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯುವ ಭಾರತ್ ಜೋಡೋ ಯಾತ್ರೆಯಲ್ಲಿ ಶುಕ್ರವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಮರಿ ಮೊಮ್ಮಗ ತುಷಾರ್ ಗಾಂಧಿ ಹೆಜ್ಜೆ ಹಾಕಿದ್ದಾರೆ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಶೆಗಾನ್‌ನಲ್ಲಿ ಶುಕ್ರವಾರ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ರಾಷ್ಟ್ರಪಿತನ ಮರಿ ಮೊಮ್ಮಗ ಭಾಗಿಯಾಗಿದ್ದಕ್ಕೆ ಇದನ್ನು ಐತಿಹಾಸಿಕ ಎಂದು ಕಾಂಗ್ರೆಸ್ ಬಣ್ಣಿಸಿದೆ.

ಇದನ್ನೂ ಓದಿ:  ಭಯೋತ್ಪಾದನೆ ಬೆಂಬಲಿಸುವವರಿಗೆ ಯಾವ ದೇಶದಲ್ಲಿ ಜಾಗ ಕೊಡಬಾರದು- ಪ್ರಧಾನಿ ಮೋದಿ

ನವೆಂಬರ್ 7ರಂದು ಮಹಾರಾಷ್ಟ್ರಕ್ಕೆ ಕಾಲಿಟ್ಟಿರುವ ಕಾಂಗ್ರೆಸ್‌ನ ಐಕ್ಯತಾ ಯಾತ್ರೆಯು, ಶುಕ್ರವಾರ ಶೆಗಾನ್ ತಲುಪಿದೆ. ಅಲ್ಲಿ ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ತುಷಾರ್ ಗಾಂಧಿ ಅವರು ರಾಹುಲ್ ಗಾಂಧಿ ಜತೆಗೂಡಿ ಹೆಜ್ಜೆ ಹಾಕಿದರು. ತಮ್ಮ ಜನ್ಮಸ್ಥಳವಾದ ಶೆಗಾನ್‌ನಲ್ಲಿ ರಾಹುಲ್ ಗಾಂಧಿ ಅವರ ಜತೆಗೂಡಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ತುಷಾರ್ ಗಾಂಧಿ ಅವರು ಕೆಲವು ದಿನಗಳ ಹಿಂದೆಯೇ ಟ್ವಿಟ್ಟರ್ ಮೂಲಕ ತಿಳಿಸಿದ್ದರು.

ತುಷಾರ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದು, ಚಾರಿತ್ರಿಕ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿ ಅವರ ಮರಿ ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ತುಷಾರ್ ಗಾಂಧಿ ಅವರು ಇಬ್ಬರು ಮಹಾನ್ ನಾಯಕರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಬಣ್ಣಿಸಿದೆ. ತುಷಾರ್ ಗಾಂಧಿ ಅವರಲ್ಲದೆ, ಕಾಂಗ್ರೆಸ್ ಹಿರಿಯ ನಾಯಕರು ಕೂಡಾ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

suddiyaana