ರಶ್ಮಿಕಾ ಮಂದಣ್ಣ ‘ಕೈ’ ಸನ್ನೆಗೆ ರಿಷಬ್ ಶೆಟ್ಟಿ ‘ಕೈ’ ಸನ್ನೆಯಿಂದಲೇ ಟಾಂಗ್..!
ನ್ಯಾಷನಲ್ ಕ್ರಷ್ಗೆ ‘ಕಾಂತಾರ’ ನಾಯಕನ ‘ಸನ್ನೆ’ ತಿರುಗೇಟು

ರಶ್ಮಿಕಾ ಮಂದಣ್ಣ ‘ಕೈ’ ಸನ್ನೆಗೆ ರಿಷಬ್ ಶೆಟ್ಟಿ ‘ಕೈ’ ಸನ್ನೆಯಿಂದಲೇ ಟಾಂಗ್..!ನ್ಯಾಷನಲ್ ಕ್ರಷ್ಗೆ ‘ಕಾಂತಾರ’ ನಾಯಕನ ‘ಸನ್ನೆ’ ತಿರುಗೇಟು

ನಟ ರಿಷಬ್ ಶೆಟ್ಟಿ ಕಾಂತಾರ ಗೆಲುವಿನ ಖುಷಿಯಲ್ಲಿದ್ದಾರೆ. ಇದೇ ಹೊತ್ತಲ್ಲಿ ಕಾಂತಾರ ಸಿನಿಮಾ ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾ ನೋಡ್ತಾರಾ, ಇಲ್ವಾ ಅನ್ನೋ ಬಗ್ಗೆಯೂ ಚರ್ಚೆ ನಡೀತಾ ಇತ್ತು. ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕವೇ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದು. ಇದಾದ ಮೇಲೆ ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಕೂಡಾ ಸಾಕಷ್ಟು ಸುದ್ದಿಯಾಗಿತ್ತು. ಇದರ ನಡುವೆ ಟ್ರೋಲಿಗರು ಕೂಡಾ ಒಂದಲ್ಲ ಒಂದು ವಿಚಾರಕ್ಕೆ ನಟಿ ರಶ್ಮಿಕಾ ಮಂದಣ್ಣ ವಿಚಾರವಾಗಿ ಟ್ರೋಲ್ ಮಾಡ್ತಾನೇ ಬಂದಿದ್ದಾರೆ. ಆದರೆ ಈಗ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಏನೋ ಮಾಡಲು ಹೋಗಿ ಮತ್ತೆ ತಾನಾಗೇ ವಿವಾದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:   ‘ಕಥೆ ಕದಿಯುವುದೇ ನನ್ನ ಯಶಸ್ಸಿನ ಗುಟ್ಟು’- ಖ್ಯಾತ ಕಥೆಗಾರ ವಿಜಯೇಂದ್ರ ಪ್ರಸಾದ್

ಇತ್ತೀಚೆಗೆ ರಶ್ಮಿಕಾ ಯೂಟ್ಯೂಬ್‌ ಚಾನಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದರು. ಈ ವೇಳೆ ಕಾಲೇಜು ದಿನಗಳಲ್ಲಿ ಫ್ರೆಶ್ ಫೇಸ್ ಕಾಂಟೆಸ್ಟ್ ನಲ್ಲಿ ಗೆದ್ದಿದ್ದ ತನ್ನ ಫೋಟೋ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದರಲ್ಲಿ ನಾನು ಚೆನ್ನಾಗಿ ಕಾಣುತ್ತಿರಲಿಲ್ಲ. ಅದೇ ಸಮಯಕ್ಕೆ ‘ಕಿರಿಕ್ ಪಾರ್ಟಿ’ ತಂಡ ಹೀರೋಯಿನ್ ಹುಡುಕಾಟದಲ್ಲಿತ್ತು. ನನ್ನ ಫೋಟೊ ನೋಡಿ ಅವ್ರೇ ನನ್ನ ನಟಿಸುವಂತೆ ಕೇಳಿಕೊಂಡಿದ್ದರು ಎಂದು ಹೇಳಿದ್ದರು. ನಂತರ ಮಾತು ಮುಂದುವರೆಸಿ, ತನಗೆ ಕನ್ನಡದಲ್ಲಿ ಮತ್ತೆ ನಟಿಸಲು ಆಫರ್ ಬಂದಿತ್ತು ಅನ್ನೋದನ್ನ ವ್ಯಂಗ್ಯವಾಗಿಯೇ ಹೇಳಿದ್ರು. ಅದು ಕೂಡಾ  ನಿರ್ದೇಶಕ ರಿಷಬ್ ಶೆಟ್ಟಿ, ನಟ ರಕ್ಷಿತ್ ಶೆಟ್ಟಿ, ‘ಪರಂವಹ್ ಸ್ಟುಡಿಯೋಸ್’ ಹೆಸರು ಹೇಳದೇ ವ್ಯಂಗ್ಯವಾಗಿ ಕೈ ಸನ್ನೆ ಮಾಡಿ ಆ ಸಂಸ್ಥೆಯಿಂದ ಕರೆ ಬಂದಿತ್ತು ಎಂದು ಸಂದರ್ಶನದಲ್ಲಿ ರಶ್ಮಿಕಾ ಹೇಳಿದ್ದರು.

ಇದೀಗ ರಿಷಬ್ ಶೆಟ್ಟಿ ಯೂಟ್ಯೂಬ್ ಸಂದರ್ಶನದಲ್ಲಿ ಪರೋಕ್ಷವಾಗಿ ರಶ್ಮಿಕಾಗೆ ತಿರುಗೇಟು ನೀಡಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿ, ರಶ್ಮಿಕಾ ಕೈ ಸನ್ನೆ ಮಾಡಿ ತೋರಿಸಿದಂತೆ ಮಾಡಿ ಈ ತರಹದ ನಟಿಯರ ಜೊತೆ ನಟಿಸಲು ಇಷ್ಟ ಇಲ್ಲ ಎಂದಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ರಿಷಬ್ ಶೆಟ್ಟಿಗೆ ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಇವರಲ್ಲಿ ಯಾರ ಜೊತೆ ನೀವು ನಟಿಸ್ತೀರಾ ಅಂತಾ ಕೇಳಿದಾಗ ರಿಷಬ್ ಶೆಟ್ಟಿಯವರು, ಹೊಸ ಕಲಾವಿದರ ಜೊತೆ ನಟಿಸಲು ಇಷ್ಟಪಡ್ತೀನಿ. ನೀವು ಹೇಳಿದ ಹೆಸರುಗಳಲ್ಲಿ ಈ ತರಹದ (ರಶ್ಮಿಕಾ ಸನ್ನೆ ಮಾಡಿ ತೋರಿಸಿದಂತೆ) ನಟಿಯರು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ರಶ್ಮಿಕಾಗೆ ರಿಷಬ್ ಶೆಟ್ಟಿ ಸರಿಯಾಗಿ ಟಾಂಗ್ ಕೊಟ್ಟಿದ್ದಾರೆ ಎಂದು ಪ್ರತಿಕ್ರಿಯೆ  ನೀಡಿದ್ದಾರೆ.

suddiyaana