ರಾತ್ರಿ ಲೈಟ್‌ ಆನ್‌ ಮಾಡಿ ಮಲಗೋ ಮುನ್ನ ಎಚ್ಚರ! – ಸಣ್ಣ ತಪ್ಪಿನಿಂದ ಆರೋಗ್ಯಕ್ಕೆ ಕುತ್ತು!

ರಾತ್ರಿ ಲೈಟ್‌ ಆನ್‌ ಮಾಡಿ ಮಲಗೋ ಮುನ್ನ ಎಚ್ಚರ! – ಸಣ್ಣ ತಪ್ಪಿನಿಂದ ಆರೋಗ್ಯಕ್ಕೆ ಕುತ್ತು!

ನಾವು ಆರೋಗ್ಯದಿಂದ ಇರಬೇಕಾದರೆ ನಿದ್ರೆ ಅತ್ಯವಶ್ಯಕ. ಆದ್ರೆ ಕೆಲವರಿಗೆ ಅಷ್ಟೊಂದು ಸುಲಭವಾಗಿ ನಿದ್ರೆ ಬರುವುದಿಲ್ಲ. ಹೀಗಾಗಿ ತಮಗೆ ಕಂಫರ್ಟ್‌ ಅನ್ನಿಸುವಂತಹ ವಿಧಾನಗಳನ್ನು ಅನುಸರಿಸಿ ನಿದ್ರೆಗೆ ಜಾರುತ್ತಾರೆ. ಕೆಲವರು ನಿದ್ರೆ ಮಾಡಲು ಅನುಸರಿಸುವ ಮಾರ್ಗಗಳೇ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ಹೆಚ್ಚಿನವರು ನಿದ್ದೆ ಮಾಡುವಾಗ ಈ ಒಂದು ತಪ್ಪನ್ನು ಮಾಡುತ್ತಾರೆ. ಅದೇನೆಂದರೆ ರಾತ್ರಿ ಲೈಟ್ ಆನ್ ಮಾಡಿ ಮಲಗುವುದು. ಈ ಒಂದು ಸಣ್ಣ ತಪ್ಪಿನಿಂದಾಗಿ ನಿಮ್ಮ ಆರೋಗ್ಯ ಹಾಳಾಗುತ್ತದೆ.

ಕೆಲವರಿಗೆ ಕತ್ತಲ ಭಯವೋ ಏನೋ ಲೈಟ್ ಆನ್ ಮಾಡಿ ಮಲಗುತ್ತಾರೆ. ಬೆಡ್ ಲೈಟ್ ಇಲ್ಲವೆಂದ್ರೆ ನಿದ್ರೆ ಹತ್ತಿರವೂ ಸುಳಿಯಲ್ಲ ಎನ್ನುವವರಿದ್ದಾರೆ. ನೀವು ಲೈಟ್ ಆನ್ ಮಾಡಿ ನಿದ್ರೆ ಮಾಡೋರಾಗಿದ್ರೆ ಇಂದೇ ಆ ಅಭ್ಯಾಸವನ್ನ ಬಿಟ್ಟು ಬಿಡಿ. ಇದ್ರಿಂದಾಗಿ ನಿಮ್ಮ ಆರೋಗ್ಯ ಹಾಳಾಗೋದು ಗ್ಯಾರಂಟಿ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನೆಯ ಪ್ರಕಾರ, ರಾತ್ರಿ ಲೈಟ್ ಹಾಕಿ ಮಲಗೋದ್ರಿಂದ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಯು ಉಂಟಾಗುತ್ತೆ. ಮಾರಕ ರೋಗವಾದ ಕ್ಯಾನ್ಸರ್ ನಂತಹ ಕಾಯಿಲೆ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ ಅಂತಾ ಸಂಶೋಧನೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: ನೀವು ಹೆಚ್ಚು ಹೊತ್ತು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ? – ಸದಾ ಮೊಬೈಲ್ ಬಳಸ್ತಾನೇ ಇದ್ದರೆ ಈ ಕಾಯಿಲೆ ಒಕ್ಕರಿಸೋದು ಗ್ಯಾರಂಟಿ!

ಇನ್ನು ರಾತ್ರಿ ಲೈಟ್ ಆನ್ ಮಾಡಿ ಮಲಗೋದ್ರಿಂದ ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತದೆ. ರಾತ್ರಿಯಲ್ಲಿ ಹೆಚ್ಚಿನ ಪ್ರಮಾಣದ ಬೆಳಕಿಗೆ ಒಡ್ಡಿಕೊಂಡ ಜನರು ಕತ್ತಲೆಯಲ್ಲಿ ಮಲಗುವ ಜನರಿಗಿಂತ ಗಮನಾರ್ಹವಾಗಿ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆ. ನಿದ್ರಾ ಹೀನತೆ, ಮೈಗ್ರೇನ್, ಖಿನ್ನತೆಯಂತಹ ಸಮಸ್ತೆಗಳು ನಮ್ಮನ್ನ ಕಾಡುತ್ತೆ.  ಸೂರ್ಯ ಹಾಗೂ ಚಂದ್ರನ ನೈಸರ್ಗಿಕ ಬೆಳಕು ದೇಹ ಹಾಗೂ ಮನಸ್ಸಿಗೆ ಉತ್ತಮ. ಆದರೆ, ಕೃತಕ ಬೆಳಕು ಜೀವಕ್ಕೆ ಹಾನಿಯುಂಟು ಮಾಡುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

Shwetha M