ಖಾಲಿ ಹೊಟ್ಟೆಯಲ್ಲಿ ಅರಶಿನ ನೀರು ಕುಡಿದ್ರೆ ಎಷ್ಟೊಂದು ಪ್ರಯೋಜನ!

ನಾವು ಪ್ರತಿನಿತ್ಯ ಸೇವಿಸುವ ಆಹಾರ ನಮ್ಮ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆನೇಕರು ಆರೋಗ್ಯವಾಗಿರಲು ಮನೆಮದ್ದುಗಳನ್ನ ಸೇವಿಸುತ್ತಾರೆ. ಇದ್ರಲ್ಲಿ ಅರಶಿನ ಕೂಡ ಒಂದು ಬಿಸಿ ನೀರಿಗೆ ಅರಶಿನ ಪುಡಿ ಹಾಕಿ ಕುಡಿದ್ರೆ ಸಾಕಷ್ಟು ಪ್ರಯೋಜನಗಳಿವೆ.
ಇದನ್ನೂ ಓದಿ: ಕೂದಲು ಬಿಳಿಯಾಗುವುದಕ್ಕೆ ಈ ಮನೆಮದ್ದು ಬೆಸ್ಟ್! – ಈ ಪೇಸ್ಟ್ ಹಚ್ಚಿದ್ರೆ ಕೂದಲಿನ ಅಂದ ಹೆಚ್ಚುತ್ತೆ!
ಬೆಳಗ್ಗೆ ಎದ್ದ ಬಳಿಕ ಒಂದೊಂದು ರೀತಿಯ ಅಭ್ಯಾಸಗಳನ್ನು ಒಬ್ಬೊಬ್ಬರು ಬೆಳೆಸಿಕೊಂಡಿರುವರು. ಇಂತಹ ಸಮಯದಲ್ಲಿ ಯಾವುದು ಉತ್ತಮ ಮತ್ತು ಯಾವುದು ಕೆಟ್ಟದು ಎನ್ನುವುದು ಹೇಳಲು ಕೆಲವೊಂದು ಅಧ್ಯಯನಗಳು ಕೂಡ ನಡೆಯುತ್ತಲಿದೆ. ಬೆಳಗ್ಗೆ ಎದ್ದ ಕೂಡಲೇ ಬಿಸಿ ನೀರು ಕುಡಿದರೆ ಅದರಿಂದ ದೇಹಕ್ಕೆ ಸಾಕಷ್ಟು ಲಾಭಗಳು ಸಿಗುವುದು ಎನ್ನಲಾಗುತ್ತದೆ. ಅದೇ ರೀತಿ ಅಧ್ಯಯನ ವರದಿಯೊಂದರ ಪ್ರಕಾರ ಬೆಳಗ್ಗೆ ಉಗುರು ಬೆಚ್ಚಗಿನ ಬಿಸಿ ನೀರಿಗೆ ಅರಿಶಿನ ಹಾಕಿಕೊಂಡು ಕುಡಿದರೆ ಅದರಿಂದ ಸಿಗುವಂತಹ ಲಾಭಗಳು ಮತ್ತಷ್ಟು ಹೆಚ್ಚಾಗುವುದು.
ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನ ಹೊಂದಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನ ಬಲಪಡಿಸಲು ಸಹಾಯ ಮಾಡುತ್ತದೆ. ಶೀತ ಮತ್ತು ಕೆಮ್ಮಿನಂತಹ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅರಿಶಿನವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನ ಉತ್ತೇಜಿಸುತ್ತದೆ, ಇದು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಆಮ್ಲೀಯತೆ ಮತ್ತು ವಾಯು ಸಮಸ್ಯೆಗಳಿಂದ ಪರಿಹಾರವನ್ನ ನೀಡುತ್ತದೆ. ನಿಯಮಿತವಾಗಿ ಅರಿಶಿನ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನ ಪಡೆಯಬಹುದು.
ಅರಿಶಿನವು ಉತ್ಕರ್ಷಣ ನಿರೋಧಕಗಳನ್ನ ಹೊಂದಿದ್ದು, ಅದು ಚರ್ಮವನ್ನ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಚರ್ಮವನ್ನ ಹೊಳೆಯುವ ಮತ್ತು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.
ಅರಿಶಿನವು ಚಯಾಪಚಯ ಕ್ರಿಯೆಯನ್ನ ಸಕ್ರಿಯಗೊಳಿಸಲು ಮತ್ತು ದೇಹದಿಂದ ವಿಷವನ್ನ ತೆಗೆದುಹಾಕಲು ಸಹಾಯ ಮಾಡುತ್ತವೆ. ತೂಕ ನಿರ್ವಹಣೆಗೆ ಸಹ ಅವು ಸಹಾಯಕವಾಗಬಹುದು. ಅರಿಶಿನದ ಉರಿಯೂತ ನಿವಾರಕ ಗುಣಗಳು ಕೀಲು ನೋವು, ಊತ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನ ಕಡಿಮೆ ಮಾಡಲು ಸಹಾಯಕವಾಗಿವೆ.

ನೋಡಿರಿ

