ಸಂಸತ್ತಿನಲ್ಲಿ ಆಡಳಿತ – ವಿಪಕ್ಷಗಳ ನಡುವೆ ಮಾರಾಮಾರಿ – ರಕ್ತಸಿಕ್ತವಾದ ಬಿಳಿ ಟೈಲ್ಸ್​ಗಳು

ಸಂಸತ್ತಿನಲ್ಲಿ ಆಡಳಿತ – ವಿಪಕ್ಷಗಳ ನಡುವೆ ಮಾರಾಮಾರಿ – ರಕ್ತಸಿಕ್ತವಾದ ಬಿಳಿ ಟೈಲ್ಸ್​ಗಳು

ಸಂಸತ್ತಿನಲ್ಲಿ ಆಡಳಿತ-ವಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯೋದು ಕಾಮನ್..‌ ಕೆಲವೊಂದು ಭಾರಿ ಪ್ರತಿಭಟನೆ ಮಾಡೋದು, ಸಭಾತ್ಯಾಗ ಮಾಡೋದು ಇವೆಲ್ಲವೂ ನಡೆಯುತ್ತವೆ.. ಆದ್ರೆ ಟರ್ಕಿ ಪಾರ್ಲಿಮೆಂಟ್‌ನಲ್ಲಿ ಮಾರಾಮಾರಿಯೇ ನಡೆದಿದೆ. ಸಂಸತ್‌ ಪೂರ್ತಿ ರಕ್ತಮಯವಾಗಿದೆ.

ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಗಿಲ್ ಗಿಂತ ಜೈಸ್ವಾಲ್ ಬೆಸ್ಟ್ – ರೋಹಿತ್ ನಿಲುವೇನು?

ಟರ್ಕಿ ಪಾರ್ಲಿಮೆಂಟ್​ನಲ್ಲಿಆರಂಭದಲ್ಲಿ ಇಬ್ಬರಿಂದ ಶುರುವಾದ ಕೈ ಕೈ ಮಿಲಾಯಿಸುವಿಕೆ ಮುಂದೆ ಎಲ್ಲಾ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರು ಹೊಡೆದಾಡುವ ಮಟ್ಟಕ್ಕೆ ಹೋಗಿದೆ. ಈ ವಿಡಿಯೋ ಸದ್ಯ ಭಾರಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ ಆಡಳಿತ ಪಕ್ಷ ಎಕೆಪಿದ ಸಂಸದ ವಿರೋಧ ಪಕ್ಷದ ಅಹ್ಮೆಟ್ ಸಿಖ್ ಅನ್ನೋರು ಮಾತನಾಡುತ್ತಿರುವಾಗ ಏಕಾಏಕಿ ಬಂದು ಹಲ್ಲೆ ಮಾಡುತ್ತಾರೆ. ತನ್ನ ಸಹೋದ್ಯೋಗಿಯನ್ನು ಜೈಲಿಗೆ ಹೋಗಿ ಬಂದವರು ಎಂದು ಹೀಯಾಳಿಸಿದ್ದಕ್ಕೆ ಈ ಒಂದು ಮಾರಾಮಾರಿ ಶುರುವಾಗಿದೆ. ಆರಂಭದಲ್ಲಿ ಇಬ್ಬರು ಕೈ ಕೈ ಮಿಲಾಯಿಸಿದ್ರೆ ಆ ನಂತರ ಇಡೀ ಸಂಸತ್ತೇ ಕೋಲಾಹಲಕ್ಕೆ ಹೆಚ್ಚಾಗಿದೆ. ಸಂಸತ್ತಿನ ಬಿಳಿ ಟೈಲ್ಸ್​ನಲ್ಲೆಲ್ಲಾ ರಕ್ತ ಚೆಲ್ಲಿದೆ.

ಈ ಗಲಾಟೆಯನ್ನು ನಿಯಂತ್ರಿಸಲು ಡೆಪ್ಯೂಟಿ ಸ್ಪೀಕರ್ ಪ್ರಯತ್ನಪಟ್ಟರೂ ಕೂಡ ಅದು ಪ್ರಯೋಜನಕ್ಕೆ ಬರಲಿಲ್ಲ ಹೀಗಾಗಿ ಸದನವನ್ನು ಮೂರು ಗಂಟೆಗಳ ಕಾಲ ಮುಂದೂಡಿದರು. ಇದು ಟರ್ಕಿ ಸಂಸತ್ ಇತಿಹಾಸದಲ್ಲಿಯೇ ನಡೆದ ಮೊದಲ ಘಟನೆ. ಟರ್ಕಿ ಸಂಸತ್ತು ಈ ಹಿಂದೆ ಎಂದೂ ಕೂಡ ಇಂತಹ ಘಟನೆಗೆ ಸಾಕ್ಷಿಯಾಗಿರಲಿಲ್ಲ ಎಂದು ಆಡಳಿತ ಹಾಗೂ ವಿಪಕ್ಷಗಳಿಗೆ ಛೀಮಾರಿ ಹಾಕಿದರು. ಮೂರು ಗಂಟೆಯ ವಿರಾಮದ ಬಳಿಕ ಎಲ್ಲವೂ ಶಾಂತ ಸ್ಥಿತಿಗೆ ಬಂದ ಮೇಲೆ ಸ್ಪೀಕರ್ ಸದನವನ್ನು ಮುನ್ನಡೆಸಿದರು.

Shwetha M

Leave a Reply

Your email address will not be published. Required fields are marked *