ಟರ್ಕಿ, ಸಿರಿಯಾದ ತುಂಬೆಲ್ಲಾ ಸತ್ತವರ ವಾಸನೆ – ಭೂಕಂಪವಾಗಿ 10 ದಿನಗಳ ಬಳಿಕವೂ ಸಹಾಯಕ್ಕಾಗಿ ಮೊರೆ!

ಟರ್ಕಿ, ಸಿರಿಯಾದ ತುಂಬೆಲ್ಲಾ ಸತ್ತವರ ವಾಸನೆ – ಭೂಕಂಪವಾಗಿ 10 ದಿನಗಳ ಬಳಿಕವೂ ಸಹಾಯಕ್ಕಾಗಿ ಮೊರೆ!

ಶತಮಾನದ ಭೀಕರ ಭೂಕಂಪಕ್ಕೆ ಸಿಲುಕಿರೋ ಟರ್ಕಿ ಮತ್ತು ಸಿರಿಯಾ ದೇಶಗಳು ಅಕ್ಷರಶಃ ಸ್ಮಶಾನದಂತಾಗಿದೆ. ಅವಶೇಷಗಳಡಿ ಸಿಲುಕಿ ಪ್ರಾಣ ಬಿಟ್ಟವರ ಶವಗಳ ವಾಸನೆ ಹರಡಿದೆ. ರಾಶಿ ರಾಶಿ ಮೃತದೇಹಗಳ ನಡುವೆಯೂ ಪವಾಡವೆಂಬಂತೆ ಕೆಲವೊಬ್ಬರು ಬದುಕಿ ಬರುತ್ತಿದ್ದಾರೆ.

ಇದನ್ನೂ ಓದಿ : ಕೆನಡಾದಲ್ಲಿ ಹಿಂದೂ ದೇಗುಲಗಳೇ ಟಾರ್ಗೆಟ್ – ಮೋದಿ ವಿರುದ್ಧವೂ ಆಕ್ಷೇಪಾರ್ಹ ಬರಹ..!

ಫೆಬ್ರವರಿ 6 ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಭಾರಿ 7.8 ಭೂಕಂಪ ಸಂಭವಿಸಿತ್ತು. ಟರ್ಕಿ ಹಾಗೂ ಸಿರಿಯಾದಲ್ಲಿ ಭೂಕಂಪದಿಂದಾಗಿ ಸಾವನ್ನಪ್ಪಿದ್ದವರ ಸಂಖ್ಯೆ 41 ಸಾವಿರದ ಗಡಿ ದಾಟಿದೆ. ಭೂಕಂಪ ಸಂಭವಿಸಿ ವಾರದ ನಂತರವೂ ಅವಶೇಷಗಳಡಿಯಿಂದ ಧ್ವನಿಗಳು ಕೇಳುತ್ತಿವೆ ಎಂದು ರಕ್ಷಣಾ ತಂಡಗಳು ತಿಳಿಸಿವೆ. ನಿನ್ನೆ ಕೂಡ ಅವಶೇಷಗಳಡಿ ಬದುಕುಳಿದಿದ್ದ 9 ಜನರನ್ನ ರಕ್ಷಣೆ ಮಾಡಲಾಗಿದೆ. ವಿಪರ್ಯಾಸ ಅಂದ್ರೆ ಬದುಕುಳಿದವರಿಗೆ ರಕ್ತ ಹೆಪ್ಪುಗಟ್ಟಿಸುವಂಥ ಚಳಿಯಲ್ಲಿ ಆಶ್ರಯ ಇಲ್ಲದಂತಾಗಿದೆ. ಹಾಗೇ ಆಹಾರವಿಲ್ಲದೆ ಹೆಣಗಾಡುತ್ತಿದ್ದಾರೆ.

ಟರ್ಕಿಯಲ್ಲಿ ಕಳೆದೊಂದು ವಾರದಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಲಾಮ್ ಅಲ್ಡೀನ್ ಅನ್ನೋರು ಭೂಕಂಪದ ಭೀಭತ್ಸ್ಯ ದೃಶ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಅಮೆರಿಕದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಲಾಮ್ ‘ನನ್ನ ಇಡೀ ಜೀವನದಲ್ಲಿ ನಾನು ಇಷ್ಟು ಸಾವು ಮತ್ತು ಇಷ್ಟು ಮೃತ ದೇಹಗಳನ್ನು ನೋಡಿಲ್ಲ’ ಎಂದು ಕಣ್ಣೀರಿಟ್ಟಿದ್ದಾರೆ. ‘ಅರ್ಮಗೆಡ್ಡೋನ್ ಚಲನಚಿತ್ರದಲ್ಲಿರುವಂತೆ ಇಲ್ಲಿನ ಪರಿಸ್ಥಿತಿ ಇದೆ. ಇದು ನಂಬಲಸಾಧ್ಯವಾಗಿದೆ. ಇಡೀ ನಗರವು ಸತ್ತ ಜನರ ವಾಸನೆಯಿಂದ ಕೂಡಿದೆ ಎಂದಿದ್ದಾರೆ.

suddiyaana