ಟರ್ಕಿಯಲ್ಲಿ 21 ಸಾವಿರ ಮೀರಿತು ಸಾವಿನ ಸಂಖ್ಯೆ – ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಪಾಸ್‌ಪೋರ್ಟ್ ಪತ್ತೆ!
ಭೀಕರ ಭೂಕಂಪಕ್ಕೆ ತುತ್ತಾಗಿರೋ ಟರ್ಕಿಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಅವಶೇಷಗಳಡಿ ಸಿಲುಕಿದವರ ರಕ್ಷಣೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅದೃಷ್ಟವಶಾತ್ ಕೆಲವರು ಬದುಕಿ ಬಂದ್ರೆ ಇನ್ನೂ ಕೆಲವರು ಉಸಿರು ಚೆಲ್ಲಿದ್ದು ಮೃತದೇಹಗಳು ಪತ್ತೆಯಾಗುತ್ತಿವೆ.
ಇದನ್ನೂ ಓದಿ : ಬೆಂಗಳೂರಲ್ಲಿ ಶಂಕಿತ ಉಗ್ರನ ಬಂಧನ – ಐಸಿಸ್ ಜತೆ ನಂಟು ಹೊಂದಿದ್ದವನ ಗುಟ್ಟು ಎಂಥಾದ್ದು..!?
ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ವಿಜಯ್ ಕುಮಾರ್ ಪಾಸ್‌ಪೋರ್ಟ್ ಪತ್ತೆಯಾಗಿದೆ. ಪೂರ್ವ ಟರ್ಕಿಯ ಅನಾಟೋಲಿಯಾ ಪ್ರದೇಶದ ಮಲತ್ಯದಲ್ಲಿರುವ ಅವಸರ್ ಹೋಟೆಲ್‌ನ ಅವಶೇಷಗಳ ತೆರವು ಕಾರ್ಯಾಚರಣೆ ವೇಳೆ ಪಾಸ್‌ಪೋರ್ಟ್ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
24 ಅಂತಸ್ತಿನ ಅವಸರ್ ಹೋಟೆಲ್‌ನ ಎರಡನೇ ಮಹಡಿಯಲ್ಲಿ ವಿಜಯ್ ಕುಮಾರ್ ತಂಗಿದ್ದ ಎನ್ನಲಾಗಿದ್ದು, ಅವರ ಪಾಸ್‌ಪೋರ್ಟ್ ಜೊತೆಗೆ ಕೆಲವು ವಸ್ತುಗಳು ಲಭ್ಯವಾಗಿವೆ. ಕಟ್ಟಡ ತೆರವು ಕಾರ್ಯಚರಣೆ ವೇಳೆ ವಸ್ತುಗಳ ಹೊರತು ಯಾವುದೇ ಮೃತದೇಹಗಳು ಪತ್ತೆಯಾಗಿಲ್ಲ. ಹೀಗಾಗಿ ವಿಜಯ್ ಕುಮಾರ್ ಇನ್ನು ಜೀವಂತವಾಗಿರಬಹುದು ಎಂದು ಭರವಸೆ ವ್ಯಕ್ತಪಡಿಸಲಾಗುತ್ತಿದೆ.
ಸದ್ಯ ಭಾರತದ ರಕ್ಷಣಾ ತಂಡಗಳು ವಿಜಯ್ ಕುಮಾರ್ ಹುಡುಕಾಟ ನಡೆಸಿದ್ದು, ಇನ್ನು ಅವರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಅವರ ಹುಡುಕಾಟ ಮುಂದುವರಿದಿದೆ. ಉತ್ತರಾಖಂಡ್‌ನ ಪೌರಿ ಗರ್ವಾಲ್‌ನ ವಿಜಯ್ ಕುಮಾರ್ ಮತ್ತು ಬೆಂಗಳೂರು ಮೂಲದ ಕಂಪನಿಯೊಂದರ ಉದ್ಯೋಗಿಯಾಗಿದ್ದರು. ಸದ್ಯ ಡೆಹ್ರಾಡೋನ್‌ನಲ್ಲಿ ನೆಲೆಸಿರುವ ಅವರ ಕುಟುಂಬಸ್ಥರು ವಿಜಯ್ ಕುಮಾರ್ ಜೀವಂತವಾಗಿ ವಾಪಸ್ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.