“ಕೃಷ್ಣ ದ್ರೌಪದಿಗೆ ಸಹಾಯ ಮಾಡಿದ, ಮೋದಿ ನಮಗೆ ಸಹಾಯ ಮಾಡಲಿ” – ಕಂಗನಾ

“ಕೃಷ್ಣ ದ್ರೌಪದಿಗೆ ಸಹಾಯ ಮಾಡಿದ, ಮೋದಿ ನಮಗೆ ಸಹಾಯ ಮಾಡಲಿ” – ಕಂಗನಾ

ಮುಂಬೈ: ಇತ್ತೀಚೆಗಷ್ಟೇ 20 ವರ್ಷದ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಪ್ರಕರಣದಲ್ಲಿ ಈಗಾಗಲೇ ಅನೇಕ ಸತ್ಯಗಳು ಹೊರಬಿದ್ದಿವೆ. ಈ ಬೆನ್ನಲ್ಲೇ ನಟಿ ಕಂಗನಾ ರಣಾವತ್ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಯಾರ ಅಪ್ಪನ ಮನೆಯ ಸ್ವತ್ತು ಅಲ್ಲ’ – ಫಡ್ನವೀಸ್

ನಟಿ ಕಂಗನಾ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ವೊಂದನ್ನು ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ ಸಹಾಯ ಮಾಡಿದಂತೆ, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೀವಿ. ಮಹಿಳೆಯರ ಮೇಲೆ ಆ ಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ 20 ವರ್ಷದ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣ ಈಗ ಲವ್ ಜಿಹಾದ್ ಆಯಾಮ ಪಡೆದುಕೊಳ್ಳುತ್ತಿದೆ. ಈ ನಡುವೆ ಕಂಗನಾ ಪೋಸ್ಟ್ ವೈರಲ್ ಆಗಿದೆ.

suddiyaana