ಜೆರಾಕ್ಸ್ ಅಂಗಡಿಯಲ್ಲಿ ಲವ್.. ವಿರೋಧದ ನಡುವೆಯೂ ಮದ್ವೆ! – ಗರ್ಭಿಣಿ ಪತ್ನಿ ಬಿಟ್ಟು 2ನೇ ಮದ್ವೆಗೆ ರೆಡಿಯಾದ ಪತಿರಾಯ!

ಈಗಿನ ಕಾಲದಲ್ಲಿ ಪ್ರೀತಿ ಎಂಬ ಹೆಸರಲ್ಲಿ ಮೋಸ ಮಾಡುತ್ತಿರುವ ಪ್ರಕರಣ ಹೆಚ್ಚಾಗುತ್ತಲೇ ಇದೆ. ಇದೀಗ ಇಲ್ಲೊಬ್ಬ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಲವ್ ಮಾಡಿ, ಮದುವೆಯಾಗಿದ್ದಾನೆ. ಈಗ ಆಕೆ ಗರ್ಭಿಣಿಯಾಗುತ್ತಿದ್ದಂತೆ ಇನ್ನೊಬ್ಬರ ಜೊತೆ ಮದುವೆಯಾಗಲು ಹೊರಟಿದ್ದಾನೆ. ಇದೀಗ ಗರ್ಭಿಣಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ಇದನ್ನೂ ಓದಿ: ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ! – ಚಿನ್ನಸ್ವಾಮಿ ಕೈ ತಪ್ಪಿದ IPL ಫೈನಲ್
ಈ ಆಘಾತಕಾರಿ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ಪಾವಗಡ ತಾಲ್ಲೂಕಿನ ವೈ.ಎನ್. ಹೊಸಕೋಟೆಯ ಯುವತಿ ಕಾಲೇಜು ಓದುತ್ತಿದ್ದ ಸಂದರ್ಭದಲ್ಲಿ ಜೆರಾಕ್ಸ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಗೆ ಜೆರಾಕ್ಸ್ ಬಂದಿದ್ದ ಬೊಮ್ಮಾ ನಾಯಕ್ ಈಕೆಯನ್ನು ನೋಡಿದ್ದ. ಕೊನೆಗೆ ಇಬ್ಬರಲ್ಲಿಯೂ ಪ್ರೀತಿ ಅರಳಿತ್ತು. ಪರಸ್ಪರ ಪ್ರೀತಿಯ ವಿಷಯ ಮಾತನಾಡಿದ್ದರು. ಏಳು ವರ್ಷಗಳವರೆಗೆ ಪ್ರೀತಿ ನಡೆದಿತ್ತು. ಬಳಿಕ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಆದ್ರೀಗ ಯುವತಿ ಗರ್ಭಿಣಿಯಾಗಿದ್ದಾರೆ. ಗರ್ಭಿಣಿಯಾಗುತ್ತಲೇ ಈ ಮದುವೆಗೆ ತನ್ನ ಮನೆಯವರ ವಿರೋಧ ಇರುವ ಕಾರಣ, ಬೇರೊಂದು ಮದುವೆಯಾಗಲು ಹೊರಟಿದ್ದಾರೆ ತನ್ನ ಪತಿ ಎಂದು ಯುವತಿ ಪೊಲೀಸರಲ್ಲಿ ದೂರಿದ್ದಾರೆ.
ನಾವಿಬ್ಬರೂ ಏಳು ವರ್ಷಗಳ ಕಾಲ ಜೊತೆಗಿದ್ದೆವು. ತಮ್ಮದು ಬೇರೆ ಜಾತಿ. ಆದ್ದರಿಂದ ಅವರ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ. ಇದರ ಹೊರತಾಗಿಯೂ ನಾವಿಬ್ಬರೂ ಮದುವೆಯಾದೆವು. ಆದರೆ ಇದೀಗ ನಾನು ಪ್ರೆಗ್ನೆಂಟ್ ಆದ ಬಳಿಕ ಕಿರುಕುಳ ಕೊಡುತ್ತಿದ್ದಾರೆ. ಅವರ ಮನೆಯವರು ಬೇರೊಂದು ಮದುವೆಗೆ ರೆಡಿ ಮಾಡಿದ್ದರೂ, ಪತಿ ಏನೂ ಹೇಳುತ್ತಿಲ್ಲ ಎನ್ನುತ್ತಿದ್ದಾರೆ ಯುವತಿ. ಪೊಲೀಸರಲ್ಲಿ ದೂರಿರುವ ಯುವತಿ, ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊ*ಲೆ ಬೆದರಿಕೆ ದೂರು ದಾಖಲಿಸಿದ್ದಾರೆ. ಸದ್ಯ ಯುವತಿ ಆರು ತಿಂಗಳ ಗರ್ಭಿಣಿ. ನನಗೆ ಪತಿ ಬೇಕು. ನ್ಯಾಯ ಬೇಕು. ಹುಟ್ಟುವ ಮಗುವಿಗೆ ಅಪ್ಪ ಬೇಕು. ನ್ಯಾಯ ಕೊಡಿಸಿ ಎಂದು ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪತಿ, ಆತನ ತಾಯಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ನೋಡಿರಿ

