ಇಂದು ತುಳಸಿ ಹಬ್ಬದ ಸಂಭ್ರಮ – ಶುಭ ಮುಹೂರ್ತ ಮತ್ತು ಮಹತ್ವ, ವಿಧಿವಿಧಾನ

ಇಂದು ತುಳಸಿ ಹಬ್ಬದ ಸಂಭ್ರಮ –   ಶುಭ ಮುಹೂರ್ತ ಮತ್ತು ಮಹತ್ವ, ವಿಧಿವಿಧಾನ

ಇಂದು ತುಳಸಿ ಹಬ್ಬ.. ಈ ಹಬ್ಬ ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಮತ್ತು ಪವಿತ್ರ ಹಬ್ಬವಾಗಿದ್ದು, ದೀಪಾವಳಿಯ ನಂತರ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪೂಜೆ ನಡೆಸಲಾಗುತ್ತದೆ.  ಪ್ರತಿಯೊಂದು ಹಿಂದೂ ಮನೆಗಳಲ್ಲಿ ಅಂಗಳದಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಮುಂಜಾನೆ ಎದ್ದು ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ದಿನವನ್ನು ಆರಂಭಿಸುವ ವಾಡಿಕೆ. ಅದರಂತೆ ತುಳಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಹಿಂದೂ ಧರ್ಮದಲ್ಲಿ, ತುಳಸಿ ವಿವಾಹವು ವಿಶೇಷ ಪವಿತ್ರ ಮಹತ್ವವನ್ನು ಹೊಂದಿದೆ. ಈ ಶುಭ ದಿನದಂದು ಭಗವಾನ್ ಶಾಲಿಗ್ರಾಮ ಮತ್ತು ತುಳಸಿಯಾಗಿ ವೃಂದಾ ದೇವಿಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.

ತುಳಸಿಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿಯ ದೇವತೆ. ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಶಾಲಿಗ್ರಾಮ ಶಿಲೆಯನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ. ವಿಷ್ಣು ಎಲ್ಲಾ ದೇವರುಗಳ ಪರಮ ದೇವರು. ಹೀಗಾಗಿ ತುಳಸಿ ವಿವಾಹದ ದಿನದಂದು ಇಬ್ಬರನ್ನೂ ಪೂಜಿಸುವುದರಿಂದ ಶಾಶ್ವತ ಪುಣ್ಯ ಬರುತ್ತದೆ ಎಂಬ ನಂಬಿಕೆಯಿದೆ.

ಹಬ್ಬ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಕಾರ್ತಿಕ ಮಾಸದ ದ್ವಾದಶಿ ತಿಥಿಯು ನವೆಂಬರ್ 02ರ ಭಾನುವಾರ ಅಂದರೆ ಇಂದು ಈ ಹಬ್ಬವನ್ನು ಆಚರಿಸಲಾಗುತ್ತಿದೆ. ತುಳಸಿ ಹಬ್ಬದ ದಿನ ಬೆಳಗಿನ ಜಾವ 5 ಗಂಟೆಯಿಂದ 5.48ರ ನಡುವೆ ಪೂಜೆ ಸಲ್ಲಿಸಲು ಪ್ರಸಕ್ತ ಸಮಯವಾಗಿದೆ. ಇದಲ್ಲದೇ ಸಂಜೆ 6.40 ರಿಂದ 8.40ರ ನಡುವಿನ ವೃಷಭ ಲಗ್ನದಲ್ಲಿಯೂ ಪೂಜೆ ಸಲ್ಲಿಸಬಹುದು.

Kishor KV