TV ಶೋಗಿಂತ ದನ ಕಾಯೋದು ವಾಸಿ! – ತುಕಾಲಿ ಸಂತು ಹೆಂಡ್ತಿ ಮಾನಸಗೆ ಏನಾಯ್ತು? 
ಮಾತೇ ಮುಳುವು.. ಟ್ರೋಲ್..‌ ಮೀಮ್ಸ್‌ ಕಾಟ

TV ಶೋಗಿಂತ ದನ ಕಾಯೋದು ವಾಸಿ! – ತುಕಾಲಿ ಸಂತು ಹೆಂಡ್ತಿ ಮಾನಸಗೆ ಏನಾಯ್ತು? ಮಾತೇ ಮುಳುವು.. ಟ್ರೋಲ್..‌ ಮೀಮ್ಸ್‌ ಕಾಟ

ಬಿಗ್‌ ಬಾಸ್‌ ಕನ್ನಡ ಸೀಸನ್‌ 11.. ಈ ಬಾರಿಯ ಸೀಸನ್‌ ನಲ್ಲಿ ಹೆಚ್ಚು ಸದ್ದು ಮಾಡಿದ್ದು ಅಂದ್ರೆ ತುಕಾಲಿ ಸಂತು ಪತ್ನಿ ಮಾನಸ.. ಮಾತಿನಿಂದಲೇ ಮಾನಸ ಸಿಕ್ಕಾಪಟ್ಟೆ ಸುದ್ದಿಯಾಗಿದ್ರು.. ಆಕೆಗೆ ಮಾತೇ ಮುಳುವಾಗಿತ್ತು.. ಈ ಕಾರಣದಿಂದಲೇ ಮಾನಸ ಮನೆಯಿಂದ ಆಚೆ ಬಂದಿದ್ರು ಅಂದ್ರೆ ತಪ್ಪಾಗಲ್ಲ.. ಇದೀಗ ಮಾನಸ ನಾನು ರಿಯಾಲಿಟಿ ಶೋ ಬದಲು ದನ ಕರು ನೋಡ್ಕೊಂಡು ಆರಾಮಾಗಿ ಇರ್ತೀನಿ ಅಂತಾ ಹೇಳಿದ್ದಾರೆ. ಅಷ್ಟಕ್ಕೂ ಮಾನಸ ಈ ಮಾತು ಹೇಳಿದ್ಯಾಕೆ? ನಟನೆ, ರಿಯಾಲಿಟಿ ಶೋ ಬೇಡವಾಗಿದ್ದು ಯಾಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಬ್ರೇಕ್! -ಯೋಗಿ ಅಧಿಕಾರಿಗಳಿಗೆ ಬಿಗ್ ಶಾಕ್‌!

ಬಿಗ್‌ ಬಾಸ್‌ ಕನ್ನಡ ಸೀಸನ್ 11 ಸದ್ದು ಮಾಡ್ತಿರೋದು ಬರೀ ಜಗಳಗಳಿಂದಲೇ.. ಪ್ರತಿ ಟಾಸ್ಕ್‌ನಲ್ಲಿ ಕಿತ್ತಾಟ ಕಾಮನ್‌ ಆಗಿದೆ.. ಆದ್ರೆ ತುಕಾಲಿ ಸಂತು ಪತ್ನಿ ಮಾನಸ ಮಾತ್ರ ಬಿಗ್‌ ಬಾಸ್‌ ಮನೆಯಲ್ಲಿ ಬರೀ ಮಾತಿನಿಂದಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ರು.. ಸಿಕ್ಕಿದ್ದೇ ಚಾನ್ಸ್‌ ಅಂತಾ ಕಾಲ್‌ ಕೆರ್ಕೊಂಡು ಜಗಳಕ್ಕೆ ಹೋಗ್ತಿದ್ರು.. ಬುದ್ದಿ ಮಾತು ಹೇಳಲು ಬಂದವರಿಗೂ ಮಹಾ ಮಂಗಳಾರತಿ ಮಾಡಿ ಕಳಿಸಿದ್ರು.. ಇದೇ ಕಾರಣಕ್ಕೇ ಮಾನಸ ಗೆ ಫ್ಯಾನ್ಸ್‌ ಗಿಂತ ಜಾಸ್ತಿ ಹೇಟರ್ಸ್‌ ಹುಟ್ಕೊಂಡಿದ್ರು.. ಆಕೆಯನ್ನ ಯಾವ ವಿಭಾಗದಲ್ಲಿ ಆಯ್ಕೆ ಮಾಡಿದ್ದೀರಾ? ದಯವಿಟ್ಟು ಆಕೆಯನ್ನ ದೊಡ್ಮನೆಯಿಂದ ಆಚೆ ಹಾಕಿ ಎಂದು ವೀಕ್ಷಕರು ಹೇಳಿದ್ರು.. ಇದೀಗ ಮಾನಸ ಮನೆಯಿಂದ ಆಚೆ ಬಂದಿದ್ದಾರೆ.. ಸಾಕಷ್ಟು ಸಂದರ್ಶಗಳಲ್ಲಿ ಪಾಲ್ಗೊಂಡಿದ್ದಾರೆ.. ಟ್ರೋಲ್‌, ಮೀಮ್ಸ್‌ ಕಂಡು ಒಂದು ಕ್ಷಣ ಶಾಕ್‌ ಆದ್ರೂ.. ಅದನ್ನ ಸೀರಿಯಸ್‌ ಆಗೇನು ತೆಗೆದುಕೊಂಡಿಲ್ಲ.. ಇದೀಗ ತುಕಾಲಿ ಸಂತು ಪತ್ನಿ ಮಾನಸ ಶಾಕಿಂಗ್‌ ಮಾತೊಂದನ್ನ ಹೇಳಿದ್ದಾರೆ.. ತಾನು ದನ ಕರು ನೊಡ್ಕೊಂಡು ಇರ್ತೀನಿ ಅಂತ ಹೇಳಿದ್ದಾರೆ.

ಹೌದು, ತುಕಾಲಿ ಸಂತು ಪತ್ನಿ ಮಾನಸಾ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೆ ಬರ್ತಿದ್ದಂತೆ ಮನರಂಜನೆ ಫಿಕ್ಸ್‌ ಅಂತಾ ವೀಕ್ಷಕರು ಲೆಕ್ಕಾಚಾರ ಹಾಕಿದ್ರು.. ಆದ್ರೆ ಮಾನಸ ಐದೇ ವಾರದಲ್ಲಿ ವಾಪಸ್​ ಆಗಿದ್ದಾರೆ. ಜೊತೆಗೆ ಸಾಕಷ್ಟು ಟ್ರೋಲ್​ಗೂ ಒಳಗಾಗಿದ್ದಾರೆ.  ಮಾನಸಾ ಅವರು ಪತಿ ಸಂತೋಷ್​ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದ್ರೆ ದೊಡ್ಮನೆಯಲ್ಲಿ ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್​ ಇನ್ಯಾರೂ ಆಗಿಲ್ಲ ಎನ್ನಬಹುದೇನೋ. ಬಿಗ್‌ ಬಾಸ್‌ ನಿಂದ ಆಚೆ ಬರ್ತಿದ್ದಂತೆ ಮಾನಸ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ.. ಈ ವೇಳೆ ನೀವು ಮತ್ತೆ ಒಳ್ಳೆ ಅವಕಾಶಕ್ಕೆ ಕಾಯುತ್ತಿದ್ದೀರಾ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಮಾನಸಾ, ಅಯ್ಯೋ ಸಂತು ನನ್ನನ್ನ ಎಲ್ಲಿಯೂ ಕರ್ಕೊಂಡು ಹೋಗದಿದ್ರೆ.. ನಾನು ದನ-ಕರು ಮೇಯಿಸಿಕೊಂಡು ಆರಾಮಾಗಿ ಊರಲ್ಲಿ ಇರ್ತಿನಿ.. ಆ ಖುಷಿ ಯಾವ ಶೋಗೆ ಹೋಗುವುದರಲ್ಲಿಯೂ ಸಿಗುವುದಿಲ್ಲ. ಬಿಗ್​ಬಾಸ್​​ ಅಂತಲ್ಲ. ನನಗೆ ಇಂಥದ್ದೆಲ್ಲಾ ಇಷ್ಟವಿಲ್ಲ. ಹಳ್ಳಿ ಜೀವನವೇ ಖುಷಿ. ಮೊದಲಿನಿಂದಲೂ ನನಗೆ ಅದೇ ಇಷ್ಟ. ಈ ಹೊಸ ಜರ್ನಿ ಇಷ್ಟ ಅಂತಲ್ಲ, ಆದ್ರೆ ದನ- ಕರುಗಳನ್ನು ನೋಡಿಕೊಂಡು ಇರೋ ಸಂತೋಷ ಬೇರೆ ಕಡೆ ಸಿಗುವುದಿಲ್ಲ. ಅಲ್ಲಿಯ ಲೈಫ್ ತುಂಬಾ ಖುಷಿ ಕೊಡುತ್ತದೆ ಎಂದಿದ್ದಾರೆ. ಇದಕ್ಕೆ ಥರಹೇವಾರಿ ಕಮೆಂಟ್​ ಸುರಿಮಳೆಯಾಗಿದ್ದು, ನಿಜಕ್ಕೂ ಹಳ್ಳಿಯಲ್ಲಿರೋ ಸುಖ ಪೇಟೆಯಲ್ಲಿ ಸಿಗುವುದಿಲ್ಲ. ಎಷ್ಟೇ ಹೆಸರು, ಖ್ಯಾತಿ ಬಂದರೂ ನಮ್ಮ ಬೇರೇ ನಮ್ಮ ಹೆಮ್ಮೆ ಎನ್ನುತ್ತಿದ್ದಾರೆ.

Shwetha M