ಆಂಜನೇಯ ಸ್ವಾಮಿ ಕೃಪೆ ನಿಮ್ಮ ಮೇಲೆ ಇರಬೇಕಾ? – ಮಂಗಳವಾರ ಈ ಸಿಹಿಯನ್ನ ಹಂಚಿ

ಆಂಜನೇಯ ಸ್ವಾಮಿ ಕೃಪೆ ನಿಮ್ಮ ಮೇಲೆ ಇರಬೇಕಾ? – ಮಂಗಳವಾರ ಈ ಸಿಹಿಯನ್ನ ಹಂಚಿ

ಮಂಗಳವಾರ ಆಂಜನೇಯ ಸ್ವಾಮಿ ದಿನ. ಈ ದಿನ  ಬೆಲ್ಲ ಮತ್ತು ಹುರಿಗಡಲೆಯನ್ನು ನೈವೇದ್ಯವಾಗಿ ಅರ್ಪಿಸುವುದು ಮಂಗಳಕರ. ಇದನ್ನು ನೈವೇದ್ಯ ಮಾಡಿ ಬಡವರಿಗೆ ಅಥವಾ ಕೋತಿಗಳಿಗೆ ಹಂಚುವುದರಿಂದ ಜಾತಕದಲ್ಲಿರುವ ಮಂಗಳ ದೋಷ ನಿವಾರಣೆಯಾಗುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ಹಾಗೂ ಶಕ್ತಿ ಲಭಿಸುತ್ತದೆ.

ಇದನ್ನೂ ಓದಿ: ಪುಣ್ಯಫಲಕ್ಕಾಗಿ ನಾಗರ ಪಂಚಮಿ ಸಮಯದಲ್ಲಿ ನಾಗನ ಈ ದೇವಸ್ಥಾನಗಳಿಗೆ ಭೇಟಿ ನೀಡಿ

ಬೂಂದಿ ಅಥವಾ ಬೂಂದಿ ಲಾಡು

ಹನುಮಂತನಿಗೆ ಸಿಹಿ ಎಂದರೆ ಬಹಳ ಅಚ್ಚುಮೆಚ್ಚು, ಅದರಲ್ಲೂ ಕಡಲೆ ಹಿಟ್ಟಿನಿಂದ ಮಾಡಿದ ಬೂಂದಿ ಮತ್ತು ಬೂಂದಿ ಲಾಡು ಎಂದರೆ ಅತ್ಯಂತ ಪ್ರಿಯ. ಮಂಗಳವಾರದಂದು ಈ ಸಿಹಿಯನ್ನು ಅರ್ಪಿಸುವುದರಿಂದ ನವಗ್ರಹ ದೋಷಗಳು ಶಮನವಾಗುತ್ತವೆ. ವಿಶೇಷವಾಗಿ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಸಿಗಲಿದ್ದು, ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.

ವೀಳ್ಯದೆಲೆ

ಆಂಜನೇಯನಿಗೆ ಪೂಜೆ ಸಲ್ಲಿಸುವಾಗ ಸಿಹಿ ವೀಳ್ಯದೆಲೆ (ಪಾನ್) ಅರ್ಪಿಸುವುದರಿಂದ ಭಕ್ತರ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ. ಬಹುದಿನಗಳಿಂದ ನೆರವೇರದೇ ಉಳಿದಿರುವ ಕನಸುಗಳು, ಆಸೆಗಳನ್ನು ಪೂರೈಸಿಕೊಳ್ಳಲು ಇದು ಅತ್ಯುತ್ತಮ ಪರಿಹಾರವಾಗಿದೆ.

ತುಳಸಿ ದಳದ ಬಳಕೆ

ಹನುಮಂತನಿಗೆ ತುಳಸಿ ಎಂದರೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿ. ನೀವು ಆಂಜನೇಯನಿಗೆ ಯಾವುದೇ ನೈವೇದ್ಯವನ್ನು ಅರ್ಪಿಸುವಾಗ, ಅದರಲ್ಲಿ ಕಡ್ಡಾಯವಾಗಿ ಒಂದೆರಡು ತುಳಸಿ ದಳಗಳನ್ನು ಇಡಬೇಕು. ತುಳಸಿ ಇಲ್ಲದ ನೈವೇದ್ಯವನ್ನು ಆತ ಸ್ವೀಕರಿಸುವುದಿಲ್ಲ. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ವೃದ್ಧಿಸುತ್ತದೆ.

ಸಿಂಧೂರ ಮತ್ತು ಮಲ್ಲಿಗೆ ಎಣ್ಣೆ

ನೈವೇದ್ಯದ ಜೊತೆಗೆ ಆಂಜನೇಯನಿಗೆ ಸಿಂಧೂರ ಹಾಗೂ ಮಲ್ಲಿಗೆ ಎಣ್ಣೆಯನ್ನು ಲೇಪಿಸುವುದು ಅತ್ಯಂತ ಶ್ರೇಷ್ಠ. ಇದರಿಂದ ಶನಿ ದೋಷದ ಅಶುಭ ಪ್ರಭಾವಗಳು ಕಡಿಮೆಯಾಗುತ್ತವೆ. ಜೊತೆಗೆ ಜೀವನದಲ್ಲಿ ಎದುರಾಗುವ ಭಯ, ಆತಂಕ ಮತ್ತು ದೈಹಿಕ ಕಾಯಿಲೆಗಳು ದೂರವಾಗುತ್ತವೆ.

Kishor KV

Leave a Reply

Your email address will not be published. Required fields are marked *