ಹನುಮಂತನ ಅಶೀರ್ವಾದ ಬೇಕಾ?- ಮಂಗಳವಾರ ಸಂಜೆ ಈ ಸ್ಥಳಗಲ್ಲಿ ಹಚ್ಚಿ ದೀಪ

ಹನುಮಂತನ ಅಶೀರ್ವಾದ ಬೇಕಾ?-  ಮಂಗಳವಾರ ಸಂಜೆ ಈ ಸ್ಥಳಗಲ್ಲಿ ಹಚ್ಚಿ ದೀಪ

ಮಂಗಳವಾರದ ದಿನದಂದು ಸಂಜೆ ಕೆಲವೊಂದು ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ದುರಾದೃಷ್ಟವು ಅದೃಷ್ಟವಾಗಿ ಬದಲಾಗುತ್ತದೆ. ಅವರ ಜೀವನದ ಪ್ರಗತಿಯ ಮಾರ್ಗಗಳು ತೆರೆದುಕೊಳ್ಳುತ್ತದೆ. ಹಾಗಾದರೆ, ಮಂಗಳವಾರದ ದಿನದಂದು ಸಂಜೆ ಯಾವೆಲ್ಲಾ ಸ್ಥಳಗಳಲ್ಲಿ ದೀಪವನ್ನು ಹಚ್ಚಿಡಬೇಕು ಎಂಬುದನ್ನು ನಾವಿಲ್ಲಿ ನೋಡೋಣ.

ಇದನ್ನೂ ಓದಿ:ಆಷಾಢ ಮಾಸದಲ್ಲಿ ಚಿನ್ನ ಖರೀದಿ ಮಾಡಬಹುದಾ? -ಏನ್ ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ?

ಮಂಗಳವಾರದ ದಿನದಂದು ಸಂಜೆ ಸಮಯದಲ್ಲಿ ಮನೆಯ ಹತ್ತಿರ ಎಲ್ಲಿಯಾದರೂ ಆಂಜನೇಯ ಸ್ವಾಮಿ ದೇವಸ್ಥಾನವಿದ್ದರೆ ಅಲ್ಲಿ ದೀಪವನ್ನು ಹಚ್ಚಿಟ್ಟು ಬನ್ನಿ.ಮಂಗಳವಾರದ ದಿನವು ಹನುಮಂತನಿಗೆ  ಸಮರ್ಪಿತವಾದ ದಿನವಾದ್ದರಿಂದ ಈ ದಿನದಂದು ಹನುಮಂತನ ದೇವಸ್ಥಾನದಲ್ಲಿ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿಡಬೇಕು. ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿಡಲು ನಿಮಗೆ ಸಾಧ್ಯವಾಗದೇ ಇದ್ದರೆ ತುಪ್ಪ ಅಥವಾ ಎಣ್ಣೆಯ ದೀಪವನ್ನು ಹಚ್ಚಿಡಬೇಕು. ಇದರೊಂದಿಗೆ ದೇವಸ್ಥಾನದಲ್ಲಿ ಕುಳಿತು ಶಾಂತ ಮನಸ್ಸು ಮತ್ತು ಭಕ್ತಿಯಿಂದ ಹನುಮಾನ್‌ ಚಾಲೀಸಾವನ್ನು ಪಠಿಸಿ. ಇದರಿಂದ ನಿಮಗೆ ಮಾನಸಿಕ ಶಾಂತಿ, ಶಕ್ತಿ ದೊರೆಯುವುದು.

Kishor KV