ಚೆನ್ನೈನಲ್ಲಿ ಟಿಟಿಡಿಯ 2ನೇ ದೇಗುಲ ಲೋಕಾರ್ಪಣೆಗೆ ಸಿದ್ಧತೆ – ಪದ್ಮಾವತಿ ದೇವಸ್ಥಾನದ ವಿಶೇಷತೆಗಳೇನು..?

ಚೆನ್ನೈನಲ್ಲಿ ಟಿಟಿಡಿಯ 2ನೇ ದೇಗುಲ ಲೋಕಾರ್ಪಣೆಗೆ ಸಿದ್ಧತೆ – ಪದ್ಮಾವತಿ ದೇವಸ್ಥಾನದ ವಿಶೇಷತೆಗಳೇನು..?

ವಿಶ್ವದ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ಹಿಂದೂ ದೇಗುಲ ಅಂದ್ರೆ ಅದು ತಿರುಪತಿ ತಿರುಮಲ. ತಿಮ್ಮಪ್ಪನ ಭಕ್ತರಿಗೆ ಇನ್ಮುಂದೆ ಎರಡು ದೇಗುಲಗಳನ್ನ ನೋಡುವ ಅವಕಾಶ ಸಿಗಲಿದೆ. ಯಾಕಂದ್ರೆ ಮತ್ತೊಂದು ದೇವಾಲಯ ಉದ್ಘಾಟನೆಗೆ ಕೌಂಟ್​ಡೌನ್ ಶುರುವಾಗಿದ್ದು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವಿ ಪದ್ಮಾವತಿಯ ಎರಡನೇ ದೇಗುಲವನ್ನು ಚೆನ್ನೈನಲ್ಲಿ ಮಾರ್ಚ್‌ 17ರಂದು ಲೋಕಾರ್ಪಣೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಕಾಶಿ ವಿಶ್ವನಾಥ ದೇಗುಲದಲ್ಲಿ ಇನ್ಮುಂದೆ ಲಡ್ಡು ಪ್ರಸಾದ ಸಿಗಲ್ಲ – ಯಾಕೆ ಗೊತ್ತಾ?

ಚೆನ್ನೈನ ಟಿ.ನಗರದ ಜಿಎನ್‌ ಚೆಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಈ ದೇಗುಲವು ಟಿಟಿಡಿಯ ಎರಡನೇ ದೇಗುಲವಾಗಿದೆ. ದೇವಿ ಪದ್ಮಾವತಿ ದೇಗುಲವು ಟಿಟಿಡಿಯ ಮೊದಲ ದೇಗುಲದ ಸಮೀಪದಲ್ಲಿಯೇ ಇದೆ. ಜಿಟಿ ರಸ್ತೆಯಲ್ಲಿರುವ ನೂತನ ದೇಗುಲದಲ್ಲಿ ಭಾನುವಾರದಿಂದಲೇ ವಿವಿಧ ಪೂಜಾ ಕೈಂಕರ್ಯಗಳು, ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಗಿದೆ. ಟಿಟಿಡಿಯ ಚೆನ್ನೈ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಮತ್ತು ಟಿಟಿಡಿಯ ವಿಶೇಷ ಸದಸ್ಯರಾದ ಎ.ಜೆ ಸೇಖರ್‌ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.  ಹಾಗೂ ದೇಗುಲದಲ್ಲಿ ಮಾರ್ಚ್‌ 17ರಂದು ಮಹಾಕುಂಭಾಭಿಷೇಕ ಕೂಡ ನಡೆಯಲಿದೆ.

ಇನ್ನು ದೇಗುಲದ ರಾಜಗೋಪುರಂ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ವೆಚ್ಚವಾಗಿದೆ. ಈ ಮೊತ್ತವನ್ನು ಎ.ಜೆ ಸೇಖರ್‌ ರೆಡ್ಡಿಯವರು ನೀಡಿದ್ದಾರೆ. ಹಾಗೇ ದೇಗುಲ ನಿರ್ಮಾಣಕ್ಕೆ ಸುಮಾರು 7 ಕೋಟಿ ರೂಪಾಯಿ ವೆಚ್ಚವಾಗಿದೆ. ಮಾರ್ಚ್‌ 17ರಂದು ಜಿಎನ್‌ ಚೆಟ್ಟಿ ರಸ್ತೆಯಲ್ಲಿ ಶ್ರೀ ಪದ್ಮಾವತಿ ಅಮ್ಮನವರ ದೇಗುಲದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸುವಂತೆ ಎಲ್ಲಾ ಭಕ್ತರನ್ನು ಆಮಂತ್ರಿಸಲಾಗಿದೆ. ಟಿ ನಗರದ ಜಿಎನ್ ಚೆಟ್ಟಿ ರಸ್ತೆಯಲ್ಲಿ 14,880 ಚದರ ಅಡಿ ಜಾಗದಲ್ಲಿ ಹೊಸ ದೇವಸ್ಥಾನ ನಿರ್ಮಿಸಲಾಗಿದೆ. ದಕ್ಷಿಣ ಭಾರತದ ಖ್ಯಾತ ನಟಿ ಪಿ ಕಾಂಚನಾ ಅವರು ಟಿಟಿಡಿಗೆ ಭೂಮಿ ದಾನ ಮಾಡಿದ್ದರು.

suddiyaana