ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ತಿರುಪತಿಯಲ್ಲಿ ಈ ಸಮಸ್ಯೆ ಇರಲ್ಲ!

ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ತಿರುಪತಿಯಲ್ಲಿ ಈ ಸಮಸ್ಯೆ ಇರಲ್ಲ!

ತಿರುಮಲ ತಿರುಪತಿ ದೇವಸ್ಥಾನವು ವಿಶ್ವದ ಸುಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿದೆ. ಈ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ, ಕೋಟ್ಯಾಂತರ ಮಂದಿ ಭಕ್ತರು ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ತಿರುಪತಿಗೆ ಹೋಗುತ್ತಾರೆ. ಸ್ವಾಮಿಯನ್ನು ದರ್ಶನ ಮಾಡುವುದರಿಂದ ಕಷ್ಟಗಳು ದೂರವಾಗಿ ಸಮೃದ್ಧಿ, ಸುಖ, ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಇದೀಗ ತಿಮ್ಮಪ್ಪನ ಭಕ್ತರಿಗೆ ಟಿಟಿಡಿ ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ ಈ ಸಮಸ್ಯೆ ಇರಲ್ಲ.

ಇದನ್ನೂ ಓದಿ: ನಿಶ್ಚಿತಾರ್ಥದ ಬೆನ್ನಲ್ಲೇ ಯುವಕನ ಬಾಳಲ್ಲಿ ವಿಧಿಯಾಟ! – ಮದುವೆ ಸಂಭ್ರಮದಲ್ಲಿದ್ದ ಯುವಕ ದುರಂತ ಅಂತ್ಯ! 

ಭಕ್ತರಿಗಾಗಿ ಟಿಟಿಡಿ ಹೊಸ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಲೇ ಇದೆ. ಇದೀಗ ಮತ್ತೊಂದು ಸೌಲಭ್ಯವನ್ನು ಟಿಟಿಡಿ ಒದಗಿಸಿದೆ. TTD QR-ಆಧಾರಿತ ಸ್ಮಾರ್ಟ್ ಪಾದರಕ್ಷೆ ಟ್ರ್ಯಾಕಿಂಗ್ ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಿದೆ. ಈ ವ್ಯವಸ್ಥೆಯಡಿ ಭಕ್ತರು ತಮ್ಮ ಪಾದರಕ್ಷೆಗಳನ್ನು ಕೌಂಟರ್‌ನಲ್ಲಿ ನೀಡಿದಾಗ QR ಕೋಡ್ ರಸೀದಿ ಪಡೆಯುತ್ತಾರೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪಾದರಕ್ಷೆಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮರಳಿ ಪಡೆಯಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ, ಭಕ್ತರಿಗೆ ಹೆಚ್ಚಿನ ಸೌಲಭ್ಯವೂ ದೊರೆಯುತ್ತಿದೆ.

ಈ ವ್ಯವಸ್ಥೆಯನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪರಿಚಯಿಸಲಾಯಿತಾದರೂ, ಪ್ರಸ್ತುತ ಕೆಲವು ಸ್ಥಳಗಳಲ್ಲಿ ಮಾತ್ರ ಸೌಲಭ್ಯ ಲಭ್ಯವಿದೆ. ಆದರೆ ಭಕ್ತರ ಹೆಚ್ಚಿನ ಓಡಾಟ ಇರುವ ಪ್ರದೇಶಗಳಲ್ಲಿ ಶೀಘ್ರದಲ್ಲೇ ಇನ್ನಷ್ಟು ಕೌಂಟರ್‌ಗಳನ್ನು ಸ್ಥಾಪಿಸಲು TTD ಸಿದ್ಧತೆ ನಡೆಸುತ್ತಿದೆ. ಕಲ್ಯಾಣಕಟ್ಟೆ, ATC ವೃತ್ತ ಮತ್ತು ಬೇಡಿ ಆಂಜನೇಯಸ್ವಾಮಿ ದೇವಾಲಯದ ಬಳಿಯೂ ಈ ಸ್ಮಾರ್ಟ್ ಪಾದರಕ್ಷೆ ಕೌಂಟರ್‌ಗಳನ್ನು ಆರಂಭಿಸಲು ಯೋಜಿಸಲಾಗಿದೆ. ಈ ಯೋಜನೆ ಕೋರಮಾಂಡರ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

TTD ತಿಳಿಸಿದ ಮಾಹಿತಿಯ ಪ್ರಕಾರ, ಈಗಾಗಲೇ 8,45,816 ಭಕ್ತರು ಈ ವ್ಯವಸ್ಥೆಯ ಸೌಲಭ್ಯವನ್ನು ಬಳಸಿದ್ದಾರೆ. ಇದರ ಪರಿಣಾಮವಾಗಿ ತಿರುಮಲದಲ್ಲಿ ಸ್ವಚ್ಛತೆ ಹೆಚ್ಚಿರುವುದಲ್ಲದೆ, ಪಾದರಕ್ಷೆ ಕಾಣೆಯಾಗುವ ಪ್ರಕರಣಗಳೂ ಕಡಿಮೆಯಾಗಿವೆ. ಆದರೆ ಕೆಲವು ಭಕ್ತರು ತಂತ್ರಜ್ಞಾನದ ಅರಿವಿನ ಕೊರತೆಯಿಂದಾಗಿ ಈ ವ್ಯವಸ್ಥೆಯನ್ನು ಇನ್ನೂ ಬಳಸುತ್ತಿಲ್ಲ. ಆದ್ದರಿಂದ, TTD ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಪ್ರಚಾರ ಕಾರ್ಯಗಳನ್ನು ಕೈಗೊಂಡಿದೆ.

Shwetha M

Leave a Reply

Your email address will not be published. Required fields are marked *