ತಿಮ್ಮಪ್ಪನ ದರ್ಶನಕ್ಕೆ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದೀರಾ? – ನೀವು ವಂಚನೆಗೆ ಒಳಗಾಗುತ್ತಿರಾ ಹುಷಾರ್!

ಪ್ರಪಂಚದ ಯಾತ್ರಾರ್ಥಿಗಳನ್ನು ಸೆಳೆಯುವ ಪುಣ್ಯಕ್ಷೇತ್ರಗಳಲ್ಲೊಂದಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿನಿತ್ಯ ಲಕ್ಷಾತಂರ ಜನರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ದರ್ಶನಕ್ಕಾಗಿ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗುತ್ತಿದೆ. ಇಂತಹ ಹೊತ್ತಲ್ಲೇ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಎಚ್ಚರಿಕೆಯ ಸಂದೇಶವೊಂದನ್ನು ನೀಡಿದೆ.
ಇದನ್ನೂ ಓದಿ: ಭಾರತದ ಕೊನೆಯ ಹಳ್ಳಿಯಾಗಿದ್ದ ‘ಮಾಣಾ’ ಈಗ ಭಾರತದ ಪ್ರಥಮ ಗ್ರಾಮ!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಟಿಟಿಡಿ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಲು ದೇವಳ ಆಡಳಿತ ಮಂಡಳಿ ಅವಕಾಶ ನೀಡಿದೆ. ಆದರೆ ಇತ್ತೀಚೆಗೆ ಟಿಟಿಡಿಯ ವೆಬ್ ಸೈಟ್ ನಂತೆ ಹೋಲುವ ವಿನ್ಯಾಸ ಮಾಡಿಕೊಂಡು 40 ಕ್ಕೂ ಅಧಿಕ ವೆಬ್ ಸೈಟ್ ಗಳು ಭಕ್ತರನ್ನು ವಂಚಿಸುತ್ತಿವೆ. ಈ ವಂಚನೆಯ ವಿರುದ್ಧ ಟಿಟಿಡಿ ಮಂಡಳಿಯು ತಿರುಮಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ. ಸೈಬರ್ ಸೆಲ್ ವಿಭಾಗ ಇದರ ತನಿಖೆ ಆರಂಭಿಸಿದೆ.
ಟಿಟಿಡಿ ವೆಬ್ ಸೈಟ್ ಹೆಸರನ್ನು ದುರ್ಬಳಕೆ ಮಾಡಿಕೊಂಡು 40 ಕ್ಕೂ ಅಧಿಕ ವೆಬ್ ಸೈಟ್ ಗಳು ಸಾವಿರಾರು ಭಕ್ತರನ್ನು ವಂಚಿಸುತ್ತಿವೆ. ಆದ್ದರಿಂದ ಟಿಟಿಡಿ ವೆಬ್‌ಸೈಟ್ ಎಂದು ಖಾತ್ರಿಪಡಿಸಿಕೊಂಡ ಬಳಿಕವೇ ಟಿಕೆಟ್ ಹಾಗೂ ವಸತಿ ಕಾಯ್ದಿರಿಸುವ ಪ್ರಕ್ರಿಯೆ ಕೈಗೊಳ್ಳಿ ಎಂದು ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.
ಟಿಟಿಡಿ ತಮ್ಮ ಅಧಿಕೃತ ವೆಬ್ ಐಡಿ ಕುರಿತು ಮಾಹಿತಿ ನೀಡಿದೆ. https://tirupatibalaji-ap-gov.org/ಈ ಮಾದರಿಯಲ್ಲಿ ಇರುವ ವೆಬ್‌ಗಳು ನಕಲಿ. https://tirupatibalaji.ap.gov.in/ ಈ ವೆಬ್ ಅಸಲಿ ಎಂದು ಮಾಹಿತಿ ನೀಡಿದೆ.