ತಿರುಪತಿಗೆ ನಂದಿನಿ ಬಿಟ್ರೆ ಬೇರೆ ಯಾವ ತುಪ್ಪವೂ ಬೇಡ! – ಟಿಟಿಡಿಯಿಂದ ಬರೋಬ್ಬರಿ 10 ಲಕ್ಷ ಕೆಜಿ ತುಪ್ಪಕ್ಕೆ ಡಿಮ್ಯಾಂಡ್

ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾತಾಣಗಳಲ್ಲಿ ತಿರುಮಲ ತಿರುಪತಿ ದೇವಸ್ಥಾನ ಕೂಡ ಒಂದು. ನಿತ್ಯ ಸಾವಿರಾರು ಭಕ್ತರು ದೇಗುಲಕ್ಕೆ ಆಗಮಿಸಿ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ತಿರುಪತಿಯ ಲಡ್ಡು ವಿವಾದ ಬಳಿಕ ಕರ್ನಾಟಕದ ನಂದಿನಿ ತುಪ್ಪಕ್ಕೆ ಬೇಡಿಕೆ ಹೆಚ್ಚಾಗಿದೆ. ಇದೀಗ ಮತ್ತೆ ಟಿಟಿಡಿ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಆಪತ್ಬಾಂಧವ KL – ರಾಹುಲ್ ತಾಳ್ಮೆಗೆ ಆಂಗ್ಲರು ಥಂಡಾ
ಲಡ್ಡು ತಯಾರಿಕೆಗೆ ಹೆಚ್ಚುವರಿ ತುಪ್ಪ ಪೂರೈಕೆ ಮಾಡುವಂತೆ KMF ಬಳಿ TTD ಮನವಿ ಮಾಡಿಕೊಂಡಿದೆ. ಅಷ್ಟೇ ಅಲ್ಲ, ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ಟಿಟಿಡಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕ ಹಾಲು ಮಹಾಮಂಡಳ ತಿರುಪತಿಗೆ ಅಗತ್ಯ ತುಪ್ಪವನ್ನು ಕಳುಹಿಸಿಕೊಟ್ಟಿದೆ. ಸೋಮವಾರ ಒಂದೇ ದಿನ ತಿರುಪತಿಗೆ 2.50 ಲಕ್ಷ ಕೆಜಿ ತುಪ್ಪವನ್ನು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ಬಿಗಿ ಭದ್ರತೆಯೊಂದಿಗೆ ಕಳುಹಿಸಿಕೊಟ್ಟಿದೆ.
ಮೊದಲ ಭಾಗವಾಗಿ ಮಂಡ್ಯದ ಹಾಲು ಒಕ್ಕೂಟದಿಂದ ತುಪ್ಪ ಪೊರೈಕೆ ಮಾಡಿದ್ದು ಇನ್ನುಳಿದ ತುಪ್ಪವನ್ನು ಇತರೇ ಮಹಾ ಮಂಡಳಿಯಿಂದ ಕೆಎಂಎಫ್ ಕಳುಹಿಸಿ ಕೊಡಲಿದೆ. ತಿರುಪತಿ ಅಗತ್ಯಕ್ಕೆ ತಕ್ಕಂತೆ ನಂದಿನಿ ತುಪ್ಪ ಪೂರೈಕೆ ಮಾಡುವುದಾಗಿ ಕೆಎಂಎಫ್ ತಿಳಿಸಿದೆ.
ತಿರುಪತಿಯ ಲಡ್ಡುಗೆ ಮೊದಲು ಕೆಎಂಎಫ್‌ನಿಂದಲೇ ತುಪ್ಪ ಸರಬರಾಜು ಆಗುತ್ತಿತ್ತು. ಆದರೆ ಕೆಎಂಎಫ್ ತುಪ್ಪದ ಬೆಲೆ ಜಾಸ್ತಿ ಆಗಿದೆ ಎಂಬ ಕಾರಣ ನೀಡಿ ಜಗನ್ ಸರ್ಕಾರ ಖಾಸಗಿ ಡೈರಿಯಿಂದ ತುಪ್ಪ ಖರೀದಿ ಮಾಡಿತ್ತು.
ಆಂಧ್ರದಲ್ಲಿ ಟಿಟಿಡಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಿರುಪತಿ ಲಡ್ಡಿನಲ್ಲಿ ಬಳಸುವ ತುಪ್ಪ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ತುಪ್ಪ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ. ಕಳಪೆ ಗುಣಮಟ್ಟದ ಹಾಗೂ ಕಲಬೆರಕೆಯಾದ ತುಪ್ಪವನ್ನು ಪೂರೈಕೆ ಮಾಡಲಾಗಿದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದರು. ಆರೋಪದ ಬಳಿಕ ಟಿಟಿಡಿ ಖಾಸಗಿ ಡೈರಿಯಿಂದ ತುಪ್ಪ ಖರೀದಿ ಮಾಡುವುದನ್ನು ನಿಲ್ಲಿಸಿ ಕೇವಲ ಕೆಎಂಎಫ್‌ನಿಂದಲೇ ತುಪ್ಪ ಖರೀದಿಗೆ ಮುಂದಾಗಿದೆ.

ನೋಡಿರಿ

