ಹಾರ್ಮುಜ್​ ಜಲಮಾರ್ಗದಲ್ಲಿ ಹಡಗು ತಡೆದ್ರೆ ಹುಷಾರ್ – ಇರಾನ್‌ಗೆ 20 ಪಟ್ಟು ಹೆಚ್ಚು ದಾಳಿ ಮಾಡುತ್ತೇವೆಂದು ಟ್ರಂಪ್ ವಾರ್ನಿಂಗ್

 ಹಾರ್ಮುಜ್​ ಜಲಮಾರ್ಗದಲ್ಲಿ ಹಡಗು ತಡೆದ್ರೆ ಹುಷಾರ್ – ಇರಾನ್‌ಗೆ 20 ಪಟ್ಟು ಹೆಚ್ಚು ದಾಳಿ ಮಾಡುತ್ತೇವೆಂದು ಟ್ರಂಪ್ ವಾರ್ನಿಂಗ್

 ಹಾರ್ಮುಜ್​ ಜಲಮಾರ್ಗದಲ್ಲಿ ತೈಲ ಸಾಗಣೆಯನ್ನು ತಡೆದರೆ ಇರಾನ್​ ಮೇಲೆ ಈಗ ಮಾಡಿರುವ ದಾಳಿಗಿಂತ 20 ಪಟ್ಟು ಹೆಚ್ಚು ದಾಳಿ ನಡೆಯಲಿದೆ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಜಲಸಂಧಿಯ ಮೂಲಕ ಹೊರಡುವ ಯಾವುದೇ ಹಡಗುಗಳನ್ನು ಇರಾನ್​ ತಡೆದಲ್ಲಿ ಅಥವಾ ಅವುಗಳಿಗೆ ಹಾನಿ ಮಾಡಿದಲ್ಲಿ ನಮ್ಮ ಪ್ರತಿಕ್ರಿಯೆಯು ಹಿಂದಿಗಿಂತಲೂ ಭೀಕರವಾಗಿರಲಿದೆ  ಎಂದು ತಮ್ಮ ಟ್ರುಥ್​ ಖಾತೆಯಲ್ಲಿ ಖಡಕ್​ ಸಂದೇಶ ಹಂಚಿಕೊಂಡಿದ್ದಾರೆ.

 ಇರಾನ್​ ಹದ್ದುಮೀರಿ ವರ್ತಿಸಿದರೆ ಸಂಭಾವ್ಯ ಕಾರ್ಯಾಚರಣೆಗಳು ಭೀಕರವಾಗಿರಲಿವೆ. ನಮ್ಮ ಪಡೆಗಳು ಸುಲಭವಾಗಿ ನಾಶಮಾಡಬಹುದಾದ ಸ್ಥಳಗಳನ್ನು ಗುರುತಿಸಲಿದೆ. ಅವುಗಳ ಮೇಲೆ ನಡೆಯುವ ದಾಳಿಗಳು ವಿನಾಶಕಾರಿಯಾಗಿರಲಿವೆ. ಅದು ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಿಲ್ಲದಂತೆ ಪೆಟ್ಟು ನೀಡಲಿದ್ದೇವೆ” ಎಂದು ಸೂಚಿಸಿದ್ದಾರೆ.ಸಾವು, ಬೆಂಕಿ ಮತ್ತು ಕೋಪ ಇರಾನ್​ ಅನ್ನು ಆಳಲಿದೆ. ಆದರೆ, ಅದು ಸಂಭವಿಸದಿರಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಯುದ್ಧಎಫೆಕ್ಟ್ – ಪೆಟ್ರೋಲಿಯಂ ಸಚಿವರು ಮತ್ತು ವಿದೇಶಾಂಗ ಸಚಿವರ ಜೊತೆ ಮೋದಿ ಸಭೆ

 ತೈಲ ಮತ್ತು ಇತರ ವಸ್ತುಗಳನ್ನು ಸಾಗಿಸಲು ಪ್ರಮುಖವಾಗಿರುವ ಕೊಲ್ಲಿ ರಾಷ್ಟ್ರಗಳಿಗೆ ಹೊಂದಿಕೊಂಡಿರುವ ಹಾರ್ಮುಜ್​ ಜಲಸಂಧಿಯನ್ನು ಇರಾನ್​ನ ಐಆರ್​ಜಿಸಿ ಬಂದ್​ ಮಾಡುವುದಾಗಿ ಘೋಷಿಸಿತ್ತು. ಈ ಜಲಮಾರ್ಗದ ಮೂಲಕ ಹೊರಡುವ ಯಾವುದೇ ಹಡಗುಗಳಿಗೆ ಬೆಂಕಿ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಇರಾನ್​​ ಅರೆಸೇನೆಯ ಈ ಖಡಕ್​ ಎಚ್ಚರಿಕೆಯಿಂದ ಸಮುದ್ರದಲ್ಲೇ ವಿವಿಧ ದೇಶಗಳ 700ಕ್ಕೂ ಅಧಿಕ ಹಡಗುಗಳು ಲಂಗರು ಹಾಕಿ, ಸಿಕ್ಕಿಬಿದ್ದಿವೆ. ಅದರಲ್ಲೂ ಪ್ರಮುಖವಾಗಿ ತೈಲ ಹೊತ್ತ ಹಡಗುಗಳು ಅಲ್ಲೇ ಸಿಲುಕಿದ್ದು, ಆಯಾ ದೇಶಗಳಲ್ಲಿ ಇಂಧನ ದರ ಗಗನಕ್ಕೇರುತ್ತಿವೆ.ನಿರ್ಬಂಧ ವಿಧಿಸಿದ್ದರ ಮಧ್ಯೆ ಚೀನಾದ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಐಆರ್​ಜಿಸಿ ಹೇಳಿತ್ತು. ಬಳಿಕ ಅಮೆರಿಕ ಮತ್ತು ಯುರೋಪ್​ ರಾಷ್ಟ್ರಗಳ ಹಡಗುಗಳಿಗೆ ಈ ನಿರ್ಬಂಧ ಅನ್ವಯಿಸಲಿದೆ ಎಂದಿತ್ತು. ಜಲಮಾರ್ಗವನ್ನು ಬಂದ್ ಮಾಡಿದ್ದಕ್ಕೆ ಈ ಹಿಂದೆ ಕಿಡಿಕಾರಿದ್ದ ಡೊನಾಲ್ಡ್ ಟ್ರಂಪ್​, ಈ ಮಾರ್ಗದಿಂದ ಹೊರಡುವ ಹಡಗುಗಳಿಗೆ ಅಮೆರಿಕ ಸೇನೆಯು ಬೆಂಗಾವಲಾಗಿ ರಕ್ಷಣೆ ನೀಡಲಿವೆ ಎಂದು ತಿಳಿಸಿದ್ದರು.

Kishor KV

Leave a Reply

Your email address will not be published. Required fields are marked *