ಯುದ್ಧ ನಿಂತರೂ ಮುಗಿಯಲ್ಲ ಅನಿಲ ಸಮಸ್ಯೆ – ಇರಾನ್ ಹುಚ್ಚಾಟಕ್ಕೆ ಭಾರತ ಸೇರಿ ಇಡೀ ಜಗತ್ತಿಗೇ 2 ವರ್ಷ ಸಂಕಷ್ಟ!  

ಯುದ್ಧ ನಿಂತರೂ ಮುಗಿಯಲ್ಲ ಅನಿಲ ಸಮಸ್ಯೆ – ಇರಾನ್ ಹುಚ್ಚಾಟಕ್ಕೆ ಭಾರತ ಸೇರಿ ಇಡೀ ಜಗತ್ತಿಗೇ 2 ವರ್ಷ ಸಂಕಷ್ಟ!  

ಯುದ್ಧ ನಡೆಯುತ್ತಾ ಇರೋದು ಇಸ್ರೇಲ್, ಅಮೇರಿಕಾ ಹಾಗೇ ಇರಾನ್ ನಡುವೆಯೇ ಆದ್ರೂ ಇಡೀ ಜಗತ್ತಿಗೇ ಅದರ ಎಫೆಕ್ಟ್ ತಟ್ಟಿದೆ. ಅದ್ರಲ್ಲೂ ತೈಲೋತ್ಪನ್ನಗಳು ಮತ್ತು ಎಲ್ ಪಿಜಿ ವಿಚಾರದಲ್ಲಿ ಭಾರತದಲ್ಲೂ ಅತಿದೊಡ್ಡ ಸಂಕಷ್ಟವೇ ಎದುರಾಗಿದೆ. ಹೋಟೆಲ್ ಉದ್ಯಮವಂತೂ ನಷ್ಟದಲ್ಲಿದೆ. ಹಾಗಂತ ಸದ್ಯಕ್ಕೆ ಯುದ್ಧ ನಿಂತರೂ ಅದರ ಪರಿಣಾಮ ಮತ್ತಷ್ಟು ತಿಂಗಳುಗಳ ಮುಂದುವರಿಯಲಿದೆ. ಅದಕ್ಕೆ ಕಾರಣ ನೈಸರ್ಗಿಕ ಅನಿಲ ಘಟಕಗಳ ಮೇಲೆ ಪದೇಪದೆ ದಾಳಿ ನಡೆಯುತ್ತಿರೋದು. ಈಗಾಗಲೇ ಇರಾನ್ ಕೂಡ ಕತಾರ್‌ನ ನೈಸರ್ಗಿಕ ಅನಿಲ ಘಟಕದ ಮೇಲೆ ನಡೆಸಿರುವ ದಾಳಿ ಇಡೀ ವಿಶ್ವಕ್ಕೆ ಅದರಲ್ಲೂ ವಿಶೇಷವಾಗಿ ಭಾರತಕ್ಕೆ ಅನಿಲ ಪೂರೈಕೆ ಸಮಸ್ಯೆಗಳನ್ನು ತಂದಿದೆ. ಕತಾರ್ ಭಾರತದ ಶೇ.20ರಷ್ಟು ಎಲ್‌ಎನ್‌ಜಿ ಆಮದನ್ನು ಪೂರೈಸುತ್ತದೆ. ಈ ದಾಳಿಯಿಂದ ಮುಂದಿನ 3-5 ವರ್ಷಗಳ ಕಾಲ ಭಾರತಕ್ಕೆ ಅನಿಲ ಕೊರತೆ ಕಾಡಬಹುದು. ಜಾಗತಿಕ ಮಟ್ಟದಲ್ಲಿಯೂ ಇಂಧನ ಭದ್ರತೆಗೆ ದೊಡ್ಡ ಸವಾಲು ಸೃಷ್ಟಿಸಿದೆ.

ಇದನ್ನೂ ಓದಿ : ಕಮರ್ಷಿಯಲ್​​ ಸಿಲಿಂಡರ್​​ಗಳ ಅಭಾವ – ಬೆಂಗಳೂರು ಹೋಟೆಲ್ ಅಸೋಸಿಯೇಷನ್‌ನಿಂದ ಮೋದಿಗೆ ಪತ್ರ

ಕತಾರ್​​ನ ನೈಸರ್ಗಿಕ ಅನಿಲ ಘಟಕದ ಮೇಲೆ ನಡೆದಿರೋ ದಾಳಿ ಅಂತಿಂಥಾ ದಾಳಿಯಲ್ಲ. ವಿಶ್ವದ ಶೇ.17ರಷ್ಟು ನೈಸಗರ್ಗಕ ಅನಿಲ ಪೂರೈಕೆಯು ಕತಾರ್​​ನ ಇದೊಂದೇ ಘಟಕದಿಂದ ಆಗುತ್ತದೆ. ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದಾಗಿದೆ, ಇರಾನ್ ದಾಳಿಯಿಂದ ಕತಾರ್​ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್​​ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್​ಎನ್​ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ. ಕತಾರ್​ನ ಇಂಧನ ಇಲಾಖೆಯೇ ಇದನ್ನ ಖಾತ್ರಿಪಡಿಸಿದೆ. ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳು ಸಮಸ್ಯೆ ಎದುರಿಸಬಹುದು. ಇರಾನ್​ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕತಾರ್​ನ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಿದೆ ಎಂದು ಅಂದಾಜು ಕೂಡ ಮಾಡಿರಲಿಲ್ಲ.

ಯುದ್ಧದ ಪರಿಣಾಮ ನೈಸರ್ಗಿಕ ಅನಿಲಗಳ ಮೇಲೆ ತಟ್ಟಿದ್ದು ಇದು ಮತ್ತೆ ಯಥಾಸ್ಥಿತಿಗೆ ಬರಲು ಕೆಲವು ವರ್ಷಗಳೇ ಬೇಕಾಗುತ್ತದೆ. ಎಸ್​6 ಟ್ರೇನ್​ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿತ್ತು. ಒಂದೆಡೆ ಈ ದಾಳಿಯಿಂದ ವಿಶ್ವದ ಇತರೆ ರಾಷ್ಟ್ರಗಳಗೆ ಸಮಸ್ಯೆಯಾಗುವುದರ ಜತೆಗೆ ಕತಾರ್​ನ್ನು 10ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕತಾರ್​​ನ ಇಂಧನ ಸಚಿವ ಅಲ್ ಕಾಬಿ ಹೇಳಿದ್ದಾರೆ. ಇರಾನ್ ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್​ನಿರ್ಮಾಣಕ್ಕೆ 26 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಕತಾರ್ ಹೇಳಿದೆ. ಹಾಗೇ ಕತಾರ್​ನ ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಕುಸಿತವಾಗಿದೆ. ಘಟಕದ ಮೇಲಿನ ಹಾನಿಯಿಂದ ದೀರ್ಘಾವಧಿಯಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗದಿದ್ದರೂ ಅಲ್ಪಾವಧಿಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಭಾರತದ ಒಟ್ಟಾರೆ ಎಲ್​ಎನ್​ಜಿ ಆಮದಿನಲ್ಲಿ ಕತಾರ್​ನ ಭಾಗವು ಶೇ.20ರಷ್ಟಿದೆ.

ಇನ್ನು ಇಷ್ಟೆಲ್ಲಾ ಸಮಸ್ಯೆಗಳ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮನವಿ ಬಳಿಕ ಇರಾನ್​​ನ ನೈಸರ್ಗಿಕ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿ ನಿಲ್ಲಿಸಲು ಇಸ್ರೇಲ್ ನಿರ್ಧರಿಸಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ನಡುವಿನ ಇಪ್ಪತ್ತು ದಿನಗಳ ಜಂಟಿ ಕಾರ್ಯಾಚರಣೆಗಳ ನಂತರ, ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸುವ ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸುವ ಇರಾನ್‌ನ ಸಾಮರ್ಥ್ಯವು ದುರ್ಬಲಗೊಂಡಿದೆ ಎಂದು ನೆತನ್ಯಾಹು ಹೇಳಿಕೊಂಡಿದ್ದಾರೆ.

Shantha Kumari

Leave a Reply

Your email address will not be published. Required fields are marked *