ಟ್ರಂಪ್ Vs ಮಸ್ಕ್ ಗುದ್ದಾಟ – ಅಮೆರಿಕದಿಂದ ಎಲಾನ್ ಎತ್ತಂಗಡಿ?
ಮುಳುಗುತ್ತಾ ಟೆಸ್ಲಾ ಸಾಮ್ರಾಜ್ಯ?

ಟ್ರಂಪ್ Vs ಮಸ್ಕ್ ಗುದ್ದಾಟ –  ಅಮೆರಿಕದಿಂದ ಎಲಾನ್ ಎತ್ತಂಗಡಿ?ಮುಳುಗುತ್ತಾ ಟೆಸ್ಲಾ ಸಾಮ್ರಾಜ್ಯ?

ಕುಚಿಕುಗಳಂತಿದ್ದ ಟ್ರಂಪ್ ಮತ್ತು ಮಸ್ಕ್ ದೋಸ್ತಿ ಕಟ್ ಆಗಿದೆ. ಅಮೆರಿಕದ ಬೃಹತ್ ತೆರಿಗೆ ಮಸೂದೆ “ಒನ್ ಬಿಗ್ ಬ್ಯೂಟಿಫುಲ್ ಬಿಲ್ ಕುರಿತು ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಸೂದೆಯನ್ನು ‘ಸಾಲದ ಹೊರೆ’ ಎಂದು ಟೀಕಿಸಿರುವ ಮಸ್ಕ್, “ಅಮೆರಿಕನ್‌ ಪಾರ್ಟಿ” ಹೆಸರಿನ ಹೊಸ ಪಕ್ಷ ಸ್ಥಾಪಿಸುವ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಟ್ರಂಪ್, ಮಸ್ಕ್ ಕಂಪನಿಗಳ ಸಬ್ಸಿಡಿ ಕಡಿತಗೊಳಿಸುವುದಾಗಿ ಬೆದರಿಕೆ ಹಾಕಿದ್ದು, ಇಬ್ಬರ ಸ್ನೇಹ ಸಂಪೂರ್ಣವಾಗಿ ಮುರಿದು ಬಿದ್ದಿದೆ.

 ಜೋರಾಯ್ತು ಟ್ರಂಪ್ Vs ಮಸ್ಕ್ ಗುದ್ದಾಟ

ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಸಂಬಂಧವು ಹದಗೆಟ್ಟು ಹೋಗಿದೆ.  ಸ್ವಲ್ಪ ಸಮಯದ ಹಿಂದಿನವರೆಗೂ, ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಪ್ರಮುಖ ಸಲಹೆಗಾರ ಎಂದು ಪರಿಗಣಿಸಲಾಗಿತ್ತು ಮತ್ತು ಟ್ರಂಪ್ ಅವರ ಆಪ್ತ ಸಹಾಯಕರಾಗಿದ್ದರು. ಆದರೆ ಈಗ ಅವರು ಟ್ರಂಪ್ ಅವರ “ಬಿಗ್ ಬ್ಯೂಟಿಫುಲ್” ಮಸೂದೆಯನ್ನು ಎಲಾನ್ ಮಸ್ಕ್ ಬಹಿರಂಗವಾಗಿ ವಿರೋಧಿಸಿದ್ದಾರೆ. ಈ ಬಿಗ್ ಬ್ಯೂಟಿಫುಲ್ ಮಸೂದೆಯಿಂದಲೇ ಮಸ್ಕ್ ಮತ್ತು ಟ್ರಂಪ್ ದೊರ ಆಗುವುದ್ದಕ್ಕೆ ಕಾರಣ. ಟ್ರಂಪ್ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ಜಾರಿಗೆ ತಂದ ಮಾರನೇ ದಿನವೇ ನಾನು ಹೊಸ ಪಕ್ಷವನ್ನ ಕಟ್ಟುತ್ತೇನೆ ಅಂತ ಎಲಾನ್ ಮಸ್ಕ್ ಹೇಳಿದ್ರು.  ದೇಶದಲ್ಲಿ “ಅಮೆರಿಕನ್‌ ಪಾರ್ಟಿ” ಹೆಸರಿನ ಹೊಸ ರಾಜಕೀಯ ಪಕ್ಷ ಉದಯವಾಗಲಿದೆ ಎಂದು ಎಲಾನ್‌ ಮಸ್ಕ್‌ ಎಚ್ಚರಿಸಿದ್ರು. ಈ ಎಚ್ಚರದ ನಡುವೆ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ಒಂದೇ ಒಂದು ಮತದ ಮೂಲಕ ಅಂಗೀಕಾರ ಆಗಿದೆ.

  ಪಾಸ್ ಆಯ್ತು ಓನ್ ಬಿಗ್ ಬ್ಯೂಟಿಫುಲ್ ಮಸೂದೆ

ವಿರೋಧದ ನಡುವೆ ಕೂಡ ಅಮೆರಿಕದ ಸಂಸತ್ತಿನ ಸದನವಾದ ಸೆನೆಟ್‌ನಲ್ಲಿ ಡೊನಾಲ್ಡ್ ಟ್ರಂಪ್‌ ಮಹತ್ವಾಕಾಂಕ್ಷಿ ತೆರಿಗೆ ಹಾಗೂ ಖರ್ಚು ಕಡಿತ ಮಸೂದೆ ಪಾಸಾಗಿದೆ. ಇದು 50:50 ಮತದಿಂದ ಟೈ ಆಗಿತ್ತು. ಉಪಾಧ್ಯಕ್ಷ JD . ವ್ಯಾನ್ಸ್ ಮಸೂದೆ ಪರ ಮತ ಹಾಕುವ ಮೂಲಕ ಪಾಸಾಗಿದೆ. 940 ಪುಟಗಳ ಶಾಸನವನ್ನು 51-50 ಮತಗಳಲ್ಲಿ ಅಂಗೀಕರಿಸಲಾಯಿತು. ಉಪಾಧ್ಯಕ್ಷ JD ವ್ಯಾನ್ಸ್ ತೀವ್ರ ಚರ್ಚೆಯ ನಂತರ ಟೈ-ಬ್ರೇಕಿಂಗ್ ಮತ ಚಲಾಯಿಸಿದರು. ಅಮೆರಿಕಾ ಸೆನೆಟ್ ನಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆಯು ಭಾರತ ಸೇರಿದಂತೆ ಬಹುತೇಕ ದೇಶಗಳ ಮೇಲೆ ಬಹಳ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಮಸೂದೆಗೆ 50-50 ಮತಗಳ ನಂತರ ಅಮೆರಿಕ ಸೆನೆಟ್​ನಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಆದರೆ, ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಟ್ರಂಪ್ ಅವರ ಮಸೂದೆಯ ಪರವಾಗಿ ಮತ ಚಲಾಯಿಸುವ ಮೂಲಕ ಕೇವಲ 1 ಮತದ ಅಂತರದಲ್ಲಿ ಈ ಮಸೂದೆ ಅಂಗೀಕಾರವಾಗುವಂತೆ ಮಾಡಿದರು.

ಹೊಸ ಪಕ್ಷ ಜಾರಿಗೆ ತರ್ತಾರಾ ಮಸ್ಕ್?

ಒನ್‌ ಬಿಗ್‌ ಬ್ಯೂಟಿಫುಲ್‌ ಮಸೂದೆ  ಸರ್ಕಾರ ನೀಡುವ ಸಬ್ಸಿಡಿಗಳನ್ನು 4.5 ಟ್ರಿಲಿಯನ್‌ ಡಾಲರ್‌ನಷ್ಟು ಕಡಿತಗೊಳಿಸುವ ಮತ್ತು ಮಿಲಿಟರಿ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಉದ್ದೇಶ ಹೊಂದಿದೆ. ಆದರೆ ಸಬ್ಸಿಡಿ ಕಡಿತದಿಂದ ಅಮೆರಿಕ ಆರ್ಥಿಕತೆಗೆ ಹೊಡೆತ ಬೀಳಲಿದೆ. ಇದು ಕಂಪನಿಗಳಿಗೆ ಹೊಡೆತ ನೀಡಿ ಭಾರಿ ಉದ್ಯೋಗ ಹಾನಿಗೆ ಕಾರಣವಾಗಬಹುದು. ಇದನ್ನು ಜಾರಿಗೆ ತರಬಾರದು ಎಂಬುದು ಮಸ್ಕ್‌ ವಾದ ಮಾಡಿದ್ರು. ಇದೇ ಕಾರಣಕ್ಕೆ ಅವರು ಇತ್ತೀಚೆಗೆ ಅಮೆರಿಕದ ಆಡಳಿತ ಸುಧಾರಣಾ ವಿಭಾಗಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಟ್ರಂಪ್ ಎಲ್ಲಾದ್ರೂ ಒನ್ ಬಿಗ್ ಬ್ಯೂಟಿಫುಲ್ ಮಸೂದೆ ಜಾರಿಗೆ ತಂದ್ರೆ ಮಾರನೇ ದಿನವೇ ಅಮೆರಿಕಾದಲ್ಲಿ ಹೊಸ ಪಕ್ಷ ಜಾರಿಗೆ ತರುತ್ತೇನೆ ಅಂತ ಹೇಳಿದ್ರು. ಆದ್ರೆ ಈಗ ಮಸೂದೆ  ಅಂಗೀಕಾರವಾಗಿದ್ದು, ಟ್ರಂಪ್ ಗೆದ್ದಿದ್ದಾರೆ. ಹೀಗಾಗಿ ಎಲಾನ್ ಮಸ್ಕ್  ಹೇಳಿರುವಂತೆ ಅಮೆರಿಕನ್‌ ಪಾರ್ಟಿ ಪಕ್ಷ ಸ್ಥಾಪಿಸ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ.

ಮಸ್ಕ್‌ ಗೆ ಎಚ್ಚರಿಕೆ ಕೊಟ್ಟ ಟ್ರಂಪ್ 

ತೆರಿಗೆ ಮಸೂದೆಯನ್ನು ವಿರೋಧಿಸುತ್ತಿರೋ ಮಾಜಿ ಆಪ್ತ ಎಲಾನ್‌ ಮಸ್ಕ್‌ ಅವರಿಗೆ ಬೆದರಿಕೆ ಹಾಕಿರುವ  ಟ್ರಂಪ್, ‘ವಿರೋಧ ಮುಂದುವರಿಸಿದರೆ ನಿಮ್ಮ ಟೆಸ್ಲಾ ಇ.ವಿ. ಕಾರು ಕಂಪನಿಗೆ ನೀಡಿರುವ ತೆರಿಗೆ ವಿನಾಯ್ತಿ ರದ್ದು ಮಾಡುತ್ತೇವೆ. ಹೀಗಾದರೆ ನಿಮ್ಮ ಅಂಗಡಿಯನ್ನು ಮುಚ್ಚಿಕೊಂಡು ಮಾತೃದೇಶ ದಕ್ಷಿಣ ವಾಪಸ್ ಹೋಗಬೇಕಾಗುತ್ತೆ ಅಂತ ಎಚ್ಚರಿಕೆ ನೀಡಿದ್ದಾರೆ.  ತೆರಿಗೆ ವಿಚಾರವಾಗಿ  ಟ್ರಂಪ್ ಮತ್ತು ಎಲಾನ್ ಮಸ್ಕ್ ನಡುವೆ ಭಾರಿ ಮುಸುಕಿನ ಗದ್ದಾಟ ನಡೆಯುತ್ತಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲುತ್ತೆ ಕಾದು ನೋಡಬೇಕಿದೆ.

Kishor KV