ಟ್ರಂಪ್ ಟಾರ್ಗೆಟ್ ಆದ ಯೂನಸ್ – ಬಾಂಗ್ಲಾ ಅಧಿಕಾರ ಬದಲಾಗುತ್ತಾ?
ಹಿಂದೂಗಳ ರಕ್ಷಣೆಗೆ ಮೆಗಾ ಪ್ಲ್ಯಾನ್

ವಿಶ್ವದ ವಿವಿಧ ರಾಷ್ಟ್ರಗಳಿಗೆ ಭಾರೀ ದೊಡ್ಡ ಮಟ್ಟದ ಆರ್ಥಿಕ ನೆರವನ್ನು ಅಮೆರಿಕ ಕೊಡುತ್ತಿದೆ. ಇದೀಗ ಅಮೆರಿಕದಿಂದ ಕೊಡಲಾಗುತ್ತಿರುವ ಎಲ್ಲಾ ಮಾದರಿಯ ವಿದೇಶಿ ನೆರವುಗಳನ್ನು ನಿಲ್ಲಿಸಲು ಸೂಚನೆ ನೀಡಲಾಗಿದೆ. ಹೊಸ ಆರ್ಥಿಕ ನೆರವನ್ನು ನೀಡದಂತೆ ಅಮೆರಿಕದ ರಾಜ್ಯಗಳಿಗೆ ಅಮೆರಿಕದ ವಿದೇಶಾಂಗ ಇಲಾಖೆ ನಿರ್ದೇಶನ ನೀಡಲಾಗಿದೆ. ಆದರೆ ಇದರಲ್ಲಿ ಇಸ್ರೇಲ್ ಹಾಗೂ ಈಜಿಪ್ಟ್ ದೇಶಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ. ಈ ಎರಡು ದೇಶಗಳಿಗೆ ತುರ್ತು ಆಹಾರ ಸರಬರಾಜು ಹಾಗೂ ಮಿಲಿಟರಿ ನೆರವಿಗೆ ವಿನಾಯಿತಿ ಕೊಡಲಾಗಿದೆ. ಉಳಿದಂತೆ ಅಮೆರಿಕವನ್ನೇ ನಂಬಿಕೊಂಡಿರುವ ಉಕ್ರೇನ್ ದೇಶಕ್ಕೂ ಶಾಕ್ ಕೊಡಲಾಗಿದೆ. ಅದ್ರಲ್ಲೂ ಬಾಂಗ್ಲಾಕ್ಕೆ ಮಟ್ಟಿನೋಡಿಕೊಳ್ಳುವಂತೆ ಟ್ರಂಪ್ ಗುನ್ನಾ ಕೊಟ್ಟಿದ್ದಾರೆ. ಟ್ರಂಪ್ ಬಾಂಗ್ಲಾಕ್ಕೆ ನೀಡುತ್ತಿದ್ದ ಎಲ್ಲಾ ರೀತಿಯ ನೆರವನ್ನ ನಿಲ್ಲಿಸಲು ನಿರ್ಧರಿಸಲಾಗಿದೆ. USAID ಬಾಂಗ್ಲಾದೇಶಲ್ಲಿ ಎಲ್ಲಾ ರೀತಿಯ ನೆರವು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಮತ್ತೆ ಬೀದಿಗೆ ಬರುತ್ತಾ ಬಾಂಗ್ಲಾದೇಶ?
ಬಾಂಗ್ಲಾದೇಶ ಈಗಾಗಲೇ ಹೆಚ್ಚುತ್ತಿರುವ ಬಜೆಟ್ ಕೊರತೆ, ಟಕಾ ಮೌಲ್ಯ ಕುಸಿತದಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಮೆರಿಕದ ನೆರವು ನಿಂತರೆ ಸಂಕಷ್ಟ ಹೆಚ್ಚಲಿದೆ. ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರ ಪತನಗೊಂಡ ನಂತರ ಮೊಹಮ್ಮದ್ ಯೂನುಸ್ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಯೂಸ್ ಅವರನ್ನು ಅಮೆರಿಕದ ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗ ಎಂದು ಪರಿಗಣಿಸಲಾಗಿದೆ. ಯೂನಸ್ ಸರ್ಕಾರವನ್ನ ಚೇಂಜ್ ಮಾಡೋದೆ ಟ್ರಂಪ್ ಗುರಿಯಾಗಿದೆ. ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಯೂನುಸ್ ಸರ್ಕಾರವನ್ನು ಟೀಕಿಸಿದ್ದರು. ಬಾಂಗ್ಲಾ ಮೇಲೆ ಸಾಕಷ್ಟು ದ್ವೇಷ ಟ್ರಂಪ್‌ಗಿದೆ. ಹೀಗಾಗಿ USAID ಬಾಂಗ್ಲಾದೇಶಕ್ಕೆ ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಆರ್ಥಿಕ ಸುಧಾರಣೆಯಂತಹ ಕ್ಷೇತ್ರಗಳಲ್ಲಿ ವ್ಯಾಪಕ ಸಹಾಯವನ್ನು ನೀಡುತ್ತಿದೆ. ಆದ್ರೆ ಅಮೆರಿಕದ ನಿರ್ಧಾರದಿಂದ ಅಲ್ಲಿ ನಡೆಯುತ್ತಿರುವ ಅನೇಕ ಪ್ರಮುಖ ಯೋಜನೆಗಳ ಮೇಲೆ ಎಫೆಕ್ಟ್ ಆಗಲಿದೆ.
ಅಮೆರಿಕದ USAID ಏಜೆನ್ಸಿ ವಿಶ್ವಾದ್ಯಂತ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ ಮಾಡುತ್ತದೆ. ಇದರ ಉದ್ದೇಶ ಪ್ರಜಾಪ್ರಭುತ್ವವನ್ನು ಉತ್ತೇಜಿಸುವುದರ ಜೊತೆಗೆ ಬಡತನವನ್ನು ಕಡಿಮೆ ಮಾಡುವುದು. ಅಮೆರಿಕ ವಿಶ್ವಕ್ಕೆ ದೊಡ್ಡಣ್ಣನಂತೆ ಇದೆ. ದೊಡ್ಡಣ್ಣನ ಸ್ಥಾನದ ಗರಿಮೆಗೆ ತಕ್ಕಂತೆ ವಿಶ್ವದಲ್ಲಿ ಹಿಂದುಳಿದಿರುವ ಹಾಗೂ ಅಭಿವೃದ್ಧಿ ಹಂತದಲ್ಲಿ ಇರುವ ದೇಶಗಳಿಗೆ ಅಮೆರಿಕ ಆರ್ಥಿಕ ನೆರವು ಹಾಗೂ ಸಾಲವನ್ನು ಸಹ ಕೊಡುತ್ತಿದೆ. ಅಲ್ಲದೆ ಆರೋಗ್ಯ, ಶಿಕ್ಷಣ, ಉದ್ಯೋಗ ತರಬೇತಿ, ಭ್ರಷ್ಟಾಚಾರ ತಡೆ ಭದ್ರತಾ ನೆರವು ಹಾಗೂ ಅಭಿವೃದ್ಧಿ ವಿಚಾರಗಳಿಗೆ ಅಮೆರಿಕ ದೇಶವನ್ನೇ ಹಲವು ರಾಷ್ಟ್ರಗಳು ನಂಬಿಕೊಂಡಿವೆ. ಭಾರತ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಒಂದಿಲ್ಲೊಂದು ಕಾರಣಕ್ಕೆ ಅಮೆರಿಕದ ಮೇಲೆ ಅವಲಂಬಿತವಾಗಿವೆ. ಇದೀಗ ಈ ಮಾದರಿಯ ಶತಕೋಟಿ ಡಾಲರ್ ಅನುದಾನವನ್ನು ತಡೆಹಿಡಿಯಲು ಮುಂದಾಗಿದೆ. ವಿಶ್ವದ ರಾಷ್ಟ್ರಗಳಿಗೆ ಕೊಡುವ ಹೊಸ ಅನುದಾನಗಳನ್ನು ಸೀಜ್ ಮಾಡಲಾಗಿದೆ. ವಿಶ್ವದ ಯಾವುದೇ ದೇಶಕ್ಕಿಂತಲೂ ಅಮೆರಿಕ ಉಳಿದ ದೇಶಗಳಿಗೆ ಆರ್ಥಿಕ ನೆರವು ಕೊಡುತ್ತದೆ. 2023ನೇ ಸಾಲಿನಲ್ಲಿ 60 ಶತಕೋಟಿ ಡಾಲರ್ ನೆರವನ್ನು ಅಮೆರಿಕ ಕೊಟ್ಟಿತ್ತು. ಇದು ಅಮೆರಿಕದ ಬಜೆಟ್‌ನ ಶೇ 1ರಷ್ಟು ಮೊತ್ತವಾಗಿದೆ. ಇದೀಗ ಅತಿ ತುರ್ತು ಪರಿಹಾರ ಬಿಟ್ಟು ಎಲ್ಲಾ ದೇಶಗಳಿಗೆ ಅರ್ಥಿಕ ನೆರವು ಕೊಡುವುದನ್ನು ನಿಲ್ಲಿಸಲು ಅಮೆರಿಕ ಆದೇಶ ಮಾಡಿದೆ. ಬಾಂಗ್ಲಾ ವಿಚಾರದಲ್ಲಿ ಒಂದು ಹೆಜ್ಜೆಯನ್ನ ಅಮೆರಿಕ ಮುಂದಿಟ್ಟಿದೆ. USAID ಪತ್ರವನ್ನು ಬಿಡುಗಡೆ ಮಾಡಿದ್ದು, USAID ಮತ್ತು ಬಾಂಗ್ಲಾದೇಶ ಒಪ್ಪಂದದಡಿಯಲ್ಲಿ ನೀಡಲಾಗುತ್ತಿದ್ದ ಸಹಾಯಧನ, ಸಹಕಾರ ಒಪ್ಪಂದ ಅಥವಾ ಇತರ ನೆರವು ಕಾರ್ಯಗಳನ್ನು ನಿಲ್ಲಿಸುವಂತೆ ತಿಳಿಸಿದೆ.
ವರ್ಕೌಟ್ ಆಯ್ತಾ ಜೈ ಶಂಕರ್ ಪ್ಲ್ಯಾನ್?
ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಜನವರಿ 22 ರಂದು ಹೊಸದಾಗಿ ನೇಮಕಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಜೊತೆ ಮಾತು ಕತೆ ನಡೆಸಿದ್ದಾರೆ. ಈ ವೇಳೆ ಬಾಂಗ್ಲಾದೇಶದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿದ ನಂತರ ಈ ನಿರ್ಧಾರವು ಬಂದಿರುವುದು ಸಾಕಷ್ಟು ಗಮನ ಸೆಳೆದಿದೆ. ಅಮೆರಿಕದ ರಾಜ್ಯ ಕಾರ್ಯದರ್ಶಿಯೊಂದಿಗಿನ ಸಭೆಯಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಹೌದು, ನಾವು ಬಾಂಗ್ಲಾದೇಶದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದೇವೆ ಎಂದಿದ್ರು. ಹೀಗಾಗಿ ಜೈ ಶಂಕರ್ ಅವರ ಬಾಂಗ್ಲಾ ವಿರುದ್ಧದ ಆಪರೇಷನ್ ಸಕ್ಸಸ್ ಆಗಿದೆ. ಈಗಾಗಲೇ ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದಿವಾಳಿಯಾಗಿರುವ ಬಾಂಗ್ಲಾದೇಶ USAID ನಿರ್ಧಾರದಿಂದ ಸಾಕಷ್ಟು ಸಮಸ್ಯೆ ಆಗೋದು ಪಕ್ಕಾ..