ಮಗುವಿನ ನಿರೀಕ್ಷೆಯಲ್ಲಿರುವ ನಟ ರಾಮ್ ಚರಣ್-ಉಪಾಸನಾಗೆ ಸಿಕ್ತು ಸ್ಫೆಷಲ್‌  ಗಿಫ್ಟ್! – ತೊಟ್ಟಿಲು ಕೊಟ್ಟಿದ್ದು ಯಾರು?

ಮಗುವಿನ ನಿರೀಕ್ಷೆಯಲ್ಲಿರುವ ನಟ ರಾಮ್ ಚರಣ್-ಉಪಾಸನಾಗೆ ಸಿಕ್ತು ಸ್ಫೆಷಲ್‌  ಗಿಫ್ಟ್! – ತೊಟ್ಟಿಲು ಕೊಟ್ಟಿದ್ದು ಯಾರು?

‘ಮೆಗಾಸ್ಟಾರ್’ ಚಿರಂಜೀವಿ ಅವರ ಏಕೈಕ ಪುತ್ರ ನಟ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸ್ಟಾರ್‌ ಜೋಡಿ ಆಗಿರುವ ಈ ದಂಪತಿ ಮದುವೆಯಾಗಿ 10 ವರ್ಷಗಳ ಬಳಿಕ ಮೊದಲ ಮಗುವಿನ ಬರುವಿಕೆಗೆ ಕಾತರದಿಂದ ಕಾಯುತ್ತಲಿದ್ದಾರೆ. ತಮ್ಮ ಕುಟುಂಬಕ್ಕೆ ಮಗುವನ್ನು ಬರಮಾಡಿಕೊಳ್ಳಲು ಸರ್ವ ರೀತಿಯಲ್ಲೂ ಸಿದ್ಧತೆ ನಡೆಸಿದ್ದಾರೆ. ತಮ್ಮ ಕುಟುಂಬದ ಕುಡಿಗಾಗಿ ಈಗಿನಿಂದಲೇ ಶಾಪಿಂಗ್ ಕೂಡ ಶುರು ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಉಪಾಸನಾ ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದ್ದು, ಪ್ರಜ್ವಲ್ ಫೌಂಡೇಶನ್ ತಮ್ಮ ಮಗುವಿಗಾಗಿ ಸ್ಪೆಷಲ್ ತೊಟ್ಟಿಲನ್ನು ಗಿಫ್ಟ್ ನೀಡಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ತನ್ನದೇ ಮ್ಯಾನೇಜರ್ ನಿಂದ ಮೋಸ ಹೋದ ರಶ್ಮಿಕಾ ಮಂದಣ್ಣ – ವ್ಯವಹಾರ ನೋಡಿಕೊಳ್ಳುತ್ತಿದ್ದವನಿಂದ ₹80 ಲಕ್ಷ ದೋಖಾ

ಈ ಸ್ಪೆಷಲ್‌ ತೊಟ್ಟಿಲನ್ನು ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುವ ಮಹಿಳೆಯರೇ ತಯಾರಿಸಿದ್ದಾರೆ. ಈ ತೊಟ್ಟಿಲನ್ನು ಸಂಪೂರ್ಣವಾಗಿ ಮರದಿಂದಲೇ ತಯಾರಿಸಲಾಗಿದೆ. ಅದೊಂದು ತೂಗು ತೊಟ್ಟಿಲಾಗಿದ್ದು ಕುಸುರಿ ಕೆಲಸವನ್ನೂ ಹೊಂದಿದೆ. ರಾಮ್‌ ಚರಣ್‌ ಹಾಗೂ ಉಪಾಸನಾ ದಂಪತಿ ಮಗುವಿಗಾಗಿಯೇ ಅದನ್ನು ಸಿದ್ಧ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ರಾಮ್ ಚರಣ್‌ ಮತ್ತು ಉಪಾಸನಾ ತಾವು ಪಡೆದಿರುವ ವಿಶೇಷ ಉಡುಗೊರೆ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾ ಹಂಚಿಕೊಂಡಿದ್ದಾರೆ.  ಪ್ರಜ್ವಲ್ ಫೌಂಡೇಶನ್ ನಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಂದ ಈ ಉಡುಗೊರೆ ಸ್ವೀಕರಿಸುತ್ತಿದ್ದೇವೆ. ಆ ಉಡುಗೊರೆಯನ್ನು ತಯಾರಿಸಿದ ಮತ್ತು ನಮಗೆ ಸಂತೋಷದಿಂದ ನೀಡಿದ ಆ ಸಂಸ್ಥೆಯ ಮಹಿಳೆಯರಿಗೆ ನಾವು ಯಾವಾಗಲೂ ಕೃತಜ್ಞರಾಗಿದ್ದೇವೆ. ಅವರ ಪ್ರೀತಿಗೆ ನಮ್ಮ ಕಡೆಯಿಂದ ಹೃತ್ಪೂವಕ ಧನ್ಯವಾದ. ನಮಗೆ ನೀಡಿದ ಕರಕುಶಲ ತೊಟ್ಟಿಲು ಸಾಕಷ್ಟು ಮಹತ್ವವನ್ನು ಪಡೆದಿದೆ. ಈ ತೊಟ್ಟಿಲು ಶಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಭರವಸೆಯನ್ನು ಸಂಕೇತಿಸುತ್ತದೆ. ಇದು ಪರಿವರ್ತನೆಯ ಪ್ರಯಾಣವನ್ನು ಪ್ರತಿನಿಧಿಸುತ್ತದೆ. ನನ್ನ ಮಗು ಹುಟ್ಟಿನಿಂದಲೇ ಸ್ವಾಭಿಮಾನದ ಬದುಕಿನ ಜೊತೆ ಬದುಕಬೇಕೆಂಬ ನನ್ನ ಆಸೆಗೆ ಈ ತೊಟ್ಟಿಲು ಮೊದಲ ಗಿಫ್ಟ್‌ ಆಗಿದೆ ಎಂದು ಬರೆದಿದ್ದಾರೆ.

ಇನ್ನು ಉಪಾಸನಾ ಹೆರಿಗೆ ವಿಚಾರ ಹಲವು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಊಹಾಪೋಹಗಳಿಗೂ ಉಪಾಸನಾ ಉತ್ತರಿಸಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ಹೇಳಿದ್ದಾರೆ. ರಾಮ್ ಚರಣ್ ಕುಟುಂಬಕ್ಕೆ ಯಾವ ಮಗು ಬರಲಿದೆ ಎನ್ನುವ ಪ್ರಶ್ನೆಯನ್ನು ಕೂಡ ಅಭಿಮಾನಿಗಳು ಕೇಳಿದ್ದರು. ಇದೀಗ ಆ ಕುರಿತು ಸ್ವತಃ ಉಪಾಸನಾ ಅವರೇ ಉತ್ತರಿಸಿದ್ದಾರೆ. ಜುಲೈನಲ್ಲಿ ಹೆರಿಗೆ  ಆಗಲಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

suddiyaana