ನಾಲ್ಕನೇ ಪಂದ್ಯಕ್ಕೂ ಮುನ್ನ ನಾಲ್ವರು ಆಟಗಾರರಿಗೆ ಇಂಜುರಿ – ಭಾರತದ ಮುಂದೀಗ ಬಿಗ್ ಚಾಲೆಂಜಸ್!

ನಾಲ್ಕನೇ ಪಂದ್ಯಕ್ಕೂ ಮುನ್ನ ನಾಲ್ವರು ಆಟಗಾರರಿಗೆ ಇಂಜುರಿ – ಭಾರತದ ಮುಂದೀಗ ಬಿಗ್ ಚಾಲೆಂಜಸ್!

ಜುಲೈ 23ರಿಂದ ಮ್ಯಾಂಚೆಸ್ಟರ್​ನಲ್ಲಿ ನಡೆಯಲಿರೋ ಭಾರತ ವರ್ಸಸ್ ಇಂಗ್ಲೆಂಡ್ ನಡುವಿನ ನಾಲ್ಕನೇ ಪಂದ್ಯ ಭಾರತದ ಪಾಲಿಗೆ ಮಸ್ಟ್ ವಿನ್ ಗೇಮ್. ಈಗಾಗ್ಲೇ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿರೋ ಇಂಗ್ಲೆಂಡ್ ಈ ಮ್ಯಾಚ್ ಗೆದ್ದು ಸರಣಿ ಕೈವಶಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಬಟ್ ಇದಕ್ಕೆ ತಿರುಮಂತ್ರ ಹಾಕೋಕೆ ರೆಡಿಯಾಗಿರೋ ಗಿಲ್​ ಬಳಗದಲ್ಲಿ ಇಂಜುರಿಯೇ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ : ಟ್ರಂಪ್ ಮಾತೇ ಮೋದಿಗೆ ಮುಳ್ಳು? – ‘ಕೈ’ ಜಾಲದಲ್ಲಿ ಸಿಕ್ಕಿಬೀಳ್ತಾರಾ ಪ್ರಧಾನಿ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವೇ ಅದ್ಭುತ ಪ್ರದರ್ಶನ ನೀಡಿದೆ. ಬ್ಯಾಟಿಂಗ್ & ಬೌಲಿಂಗ್​ನಲ್ಲಿ ದಾಖಲೆಗಳನ್ನ ಸರಮಾಲೆಯನ್ನೇ ಮಾಡಿದೆ. ಬಟ್ ಒಂದು ಮತ್ತು ಮೂರನೇ ಮ್ಯಾಚ್​ನ ತನ್ನ ಮಿಸ್ಟೇಕ್​ಗಳಿಂದಲೇ ಸೋಲಬೇಕಾಯ್ತು. ಸಿಕ್ಕ ಅವಕಾಶವನ್ನ ಬಳಸಿಕೊಳ್ಳುವಲ್ಲಿ ಫೇಲ್ಯೂರ್ ಆದ್ರು. ಈಗ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಗಾಯವೇ ದೊಡ್ಡ ಹೊಡೆತ ನೀಡ್ತಿದೆ. ಇದೀಗ ನಾಲ್ವರು ಪ್ಲೇಯರ್ಸ್ ಇಂಜುರಿಗೊಳಗಾಗಿದ್ದಾರೆ.

ಬೆರಳಿಗೆ ಗಾಯಗೊಂಡು ರಿಷಭ್ ಪಂತ್ ಒದ್ದಾಟ!

ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಉಪನಾಯಕ ರಿಷಭ್ ಪಂತ್ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನ  ಬೆರಳಿಗೆ ಗಾಯ ಮಾಡಿಕೊಂಡಿದ್ರು. ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್​ನಲ್ಲಿ ಬಾಲ್ ತಡೆಯಲು ಯತ್ನಿಸುವಾಗ   ಬೆರಳಿಗೆ ಬಡಿದಿತ್ತು. ಹೀಗಿದ್ರೂ ಲಾರ್ಡ್ಸ್‌ನಲ್ಲಿ ನಡೆದ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್​ಗೆ ಇಳಿದಿದ್ರು. ಫಸ್ಟ್ ಇನ್ನಿಂಗ್ಸ್​ನಲ್ಲಿ ಕೆಎಲ್ ರಾಹುಲ್ ಜೊತೆಗೂಡಿ ಉತ್ತಮ ಪಾರ್ಟ್ನರ್​ಶಿಪ್ ಮಾಡಿದ್ರು. ಬಟ್ ಸೆಷನ್ ಕಂಪ್ಲೀಟ್ ವೇಳೆ ರಾಹುಲ್ ಸೆಂಚುರಿಗಾಗಿ ಸ್ಟ್ರೈಕ್ ಬಿಟ್ಟುಕೊಡಲು ಸಿಂಗಲ್ ರನ್​ಗಾಗಿ ಓಡಿ ರನ್ ಔಟ್ ಆಗಿದ್ರು.  ಗಾಯದ ಹೊರತಾಗಿಯೂ, ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾದರು. ಬಟ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬಿಗ್ ಇನ್ನಿಂಗ್ಸ್ ಬರಲಿಲ್ಲ. ಸೋ ಈಗ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ 4 ನೇ ಟೆಸ್ಟ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದನ್ನು ಭಾರತೀಯ ಆಡಳಿತ ಮಂಡಳಿ ಗೌಪ್ಯವಾಗಿಟ್ಟಿದೆ.

ಮೊಣಕಾಲಿನ ಗಾಯಕ್ಕೆ ತುತ್ತಾಗಿರುವ ನಿತೀಶ್ ಕುಮಾರ್!

ಗಾಯದ ಸಮಸ್ಯೆಯಿಂದ ನಿತೀಶ್ ಕುಮಾರ್ ರೆಡ್ಡಿ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಭಾನುವಾರ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ. ಮೊಣಕಾಲಿಗೆ ಗಾಯವಾಗಿರುವುದರಿಂದ ಅವರು ಸರಣಿಯಿಂದ ಹೊರಗುಳಿಯುವಂತಾಗಿದೆ.  ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡುವುದು ಕಷ್ಟ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇವರು ಮುಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಹಿಂದೆ ಸರಿದರೆ ಯಾರಿಗೆ ಅವಕಾಶ ಲಭಿಸುತ್ತದೆ ಎಂಬ ಪ್ರಶ್ನೆಗಳು ಸಹ ಎದ್ದಿವೆ.

ಅರ್ಷದೀಪ್ ಮತ್ತು ಆಕಾಶ್ ದೀಪ್ ಗೂ ಇಂಜುರಿ!

ಇಂಜುರಿ ಕಾರಣಕ್ಕೆ ಟೀಂ ಇಂಡಿಯಾದ ಬೌಲಿಂಗ್ ಮತ್ತಷ್ಟು ವೀಕ್ ಆಗಲಿದೆ. ವೇಗಿ ಅರ್ಶದೀಪ್ ಸಿಂಗ್ ಅವರ ಎಡಗೈಗೆ ಆಳವಾದ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಅರ್ಶದೀಪ್ ಸಿಂಗ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ ಸಾಯಿ ಸುದರ್ಶನ್ ಹೊಡೆದ ಚೆಂಡನ್ನು ತಡೆಯಲು ಹೋಗಿ ಅವರ ಕೈಗೆ ಗಾಯವಾಯಿತು. ಒಂದು ವೇಳೆ 4ನೇ ಟೆಸ್ಟ್ ನಲ್ಲಿ ಪ್ರಮುಖ ವೇಗಿಗೆ ವಿಶ್ರಾಂತಿ ನೀಡಿದರೆ ಅವರನ್ನು ಆಡಿಸಬೇಕು ಎಂಬುದು ತಂಡದ ಯೋಜನೆಯಾಗಿತ್ತು. ಅವರು ಸಂಪೂರ್ಣವಾಗಿ ಫಿಟ್ ಆಗಲು ಕನಿಷ್ಠ ಹತ್ತು ದಿನಗಳನ್ನು ತೆಗೆದುಕೊಳ್ಳುತ್ತಾರೆ. ಆಕಾಶ್ ದೀಪ್ ಕೂಡ ತೊಡೆಸಂದು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ನೆಕ್ಸ್​​ಟ್ ಮ್ಯಾಚ್​ಗೆ ಆಡೋದು ಡೌಟ್ ಇದೆ.

Shantha Kumari