ರೋHIT ಪಡೆಗೆ ಟ್ರೋಫಿ ಟಾರ್ಗೆಟ್ – ವಿಂಡೀಸ್ ನೆಲದಲ್ಲಿ ಬಿಗ್ ಫೈಟ್
ಯಾರು OUT.. ಯಾರಿಗೆ LUCK?

ರೋHIT ಪಡೆಗೆ ಟ್ರೋಫಿ ಟಾರ್ಗೆಟ್ – ವಿಂಡೀಸ್ ನೆಲದಲ್ಲಿ ಬಿಗ್ ಫೈಟ್ಯಾರು OUT.. ಯಾರಿಗೆ LUCK?

ವಿಶ್ವಕಪ್​ಗೆ ಟೀಮ್​ ಸೆಲೆಕ್ಷನ್​ ಆದಾಗಲೇ ರೋಹಿತ್ ಶರ್ಮಾ​ ಒಂದು ಮಾತು ಹೇಳಿದ್ರು. ಸ್ಪಿನ್ನರ್​ಗಳ ಆಯ್ಕೆ ಬಗ್ಗೆ ಕೇಳಿದ ಪ್ರಶ್ನೆಗೆ ವೆಸ್ಟ್​ ಇಂಡೀಸ್​ನಲ್ಲಿ ಉತ್ತರ ಕೊಡ್ತೀನಿ ಅಂತಾ. ಇದೀಗ ಆ ಪ್ರಶ್ನೆಗೆ ಉತ್ತರ ಸಿಗೋ ಸಮಯ ಬಂದಿದೆ. ಕೆರೆಬಿಯನ್​ ನಾಡಲ್ಲಿ ಇನ್ನೇನು ಸ್ಪಿನ್ನರ್​​ಗಳ ದರ್ಬಾರ್ ಶುರುವಾಗಲಿದೆ. ಅಮೆರಿಕಾಕ್ಕೆ ಟೀಮ್ ಇಂಡಿಯಾ ಗುಡ್‌ಬೈ ಹೇಳಿ ವಿಂಡೀಸ್ ನೆಲಕ್ಕೆ ಕಾಲಿಟ್ಟಿದೆ. ವಿಂಡೀಸ್‌ಗೂ ಸ್ಪಿನ್ನರ್‌ಗೂ ಏನಿದೆ ನಂಟು, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಸ್ಟ್ರಾಟಜಿಯೇನು? ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸೇವಂತಿ ಸೇವಂತಿ ಸಿನಿಮಾ ಕಥೆ ಸೀರಿಯಲ್‌ನಲ್ಲಿ‌! – ನಿದ್ದೆಯಲ್ಲಿದ್ದ ಭಾವನಾ ಕೊರಳಲ್ಲಿ ತಾಳಿ

ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿ ಕೆರೆಬಿಯನ್​ ನಾಡಲ್ಲಿ ಸ್ಪಿನ್ನರ್​ಗಳೇ ದರ್ಬಾರ್ ಮಾಡ್ತಿರೋದನ್ನು ನೀವು ನೋಡಿಯೇ ಇರ್ತೀರಾ. ಆಡಿದ ಪಂದ್ಯಗಳಲ್ಲಿ ವರ್ಲ್ಡ್​ ಕ್ಲಾಸ್​​ ಸ್ಪಿನ್ನರ್​ಗಳು ನಿಜವಾಗಿಯೂ ಮ್ಯಾಜಿಕ್ ಮಾಡಿದ್ದಾರೆ. ಸ್ಟಾರ್ ಬ್ಯಾಟರ್‌ಗಳ ಕಾನ್ಫಿಡೆನ್ಸ್ ಲೆವೆಲ್ ಲೋ ಮಾಡಿದ್ದಾರೆ. ಸ್ಪಿನ್ ಮೋಡಿಗೆ ಬಲಿಷ್ಠ ಬ್ಯಾಟರ್‌ಗಳು ಮಂಡಿಯೂರಿದ್ದಾರೆ. ಇನ್ಮುಂದೆ ಶುರುವಾಗಲಿದೆ ನೋಡಿ ಟೀಮ್ ಇಂಡಿಯಾ ಸ್ಪಿನ್ ಮೋಡಿ. ಹೌದು. ಯುಎಸ್​​ಎ ಎದುರಿನ ಭರ್ಜರಿ ಗೆಲುವಿನ ಬೆನ್ನಲ್ಲೇ ಟೀಮ್​ ಇಂಡಿಯಾ ಸೂಪರ್-​​ 8 ಹಂತಕ್ಕೇರಿದೆ. ಹ್ಯಾಟ್ರಿಕ್​ ಗೆಲುವು ಸಾಧಿಸಿರೋ ರೋಹಿತ್​ ಪಡೆ, ಸೂಪರ್-​​ 8ಗೆ ಲಗ್ಗೆಯಿಟ್ಟಿದ್ದಲ್ಲದೇ, ಅಮೇರಿಕದ ಬಳಿಕ ವೆಸ್ಟ್​ ಇಂಡೀಸ್​​ನಲ್ಲೂ ಗೆಲುವಿನ ಪತಾಕೆ ಹಾರಿಸಲು ಸಜ್ಜಾಗಿದೆ. ಅಮೆರಿಕಾ ನೆಲದಲ್ಲಿ ಇಂಡಿಯಾ ಬಲಿಷ್ಠ ಟೀಮ್ ಆದ್ರೂ ಕೂಡಾ ರನ್ ಗಳಿಸಲು ಸ್ವಲ್ಪ ಒದ್ದಾಡಿದ್ದು ಸುಳ್ಳಲ್ಲ. ಅಮೆರಿಕಾ ನೆಲದಲ್ಲಿ ಇಂಡಿಯಾ ಬಿಗ್ ಹಿಟ್ಟರ್‌ಗಳು ಸಿಕ್ಸ್ ಫೋರ್ ಹೊಡೆಯಲು ಒದ್ದಾಡಿದ್ದೂ ಕೂಡಾ ಸತ್ಯ. ಪಿಚ್​ ಅದೆಷ್ಟೇ ಕಷ್ಟ ಇದ್ರೂ ನಮ್ಮ ಬ್ಯಾಟರ್‌ಗಳು ಜವಾಬ್ದಾರಿಯುತ ಆಟವಾಡಿ ಟೀಮ್ ಗೆಲ್ಲಿಸಿದ್ದಾರೆ. ಈ ಗೆಲುವೇ ವಿಂಡೀಸ್ ನೆಲದಲ್ಲಿ ಆಡುವ ಆತ್ಮವಿಶ್ವಾಸ ಹೆಚ್ಚಿಸಿದೆ. ಜೊತೆಗೆ ಕಪ್ ಗೆಲ್ಲೋ ಫೆವರೇಟ್ ಟೀಮ್ ಆಗಿ ಇಂಡಿಯಾ ಕೂಡಾ ಪೈಪೋಟಿಗಿಳಿದಿದೆ.

ಕೋಚ್ ರಾಹುಲ್ ದ್ರಾವಿಡ್ ಮತ್ತು ಕ್ಯಾಪ್ಟನ್ ರೋಹಿತ್ ಶರ್ಮಾ ವಿಂಡೀಸ್ ನೆಲ ಟಚ್ ಮಾಡೋದನ್ನೇ ಕಾಯ್ತಿದ್ದಾರೆ. ಯಾಕೆಂದ್ರೆ, ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಸೆಲೆಕ್ಟ್ ಆಗಿದ್ದೇ ವಿಂಡೀಸ್ ನೆಲದಲ್ಲಿ ಯಾವ ರೀತಿ ಸ್ಟ್ರಾಟಜಿ ಮಾಡ್ಬೇಕು ಎಂಬ​ ಆಧಾರದಿಂದ. ಹೌದು ಸ್ನೇಹಿತರೇ, ಕೆರಬಿಯನ್​ ನಾಡಲ್ಲಿ ಸ್ಪೆಷಲ್​ ಅಸ್ತ್ರದ ದಾಳ ಉರುಳಿಸಲು ಕೋಚ್​ ರಾಹುಲ್​ ದ್ರಾವಿಡ್​​ ಮತ್ತು ರೋಹಿತ್​ ಶರ್ಮಾ ರೆಡಿಯಾಗಿದ್ದಾರೆ. ವಿಶ್ವಕಪ್​ಗೆ ಟೀಮ್​ ಸೆಲೆಕ್ಷನ್ ನಲ್ಲಿ ಸ್ಪಿನ್ನರ್​ಗಳೇ ಮೊದಲ ಆಯ್ಕೆಯಾಗಿದ್ರು. ಯಾಕೆಂದರೆ, ವಿಂಡೀಸ್​​ ನಾಡಲ್ಲಿ ಟೀಮ್​ ಇಂಡಿಯಾದ ವಿಶ್ವ ಶ್ರೇಷ್ಟ ಸ್ಪಿನ್ನರ್​ಗಳ ಮ್ಯಾಜಿಕ್ ನಡೆದೇ ನಡೆಯುತ್ತೆ ಎಂಬ ವಿಶ್ವಾಸ ರೋಹಿತ್ ಶರ್ಮಾಗಿದೆ. ಜೊತೆಗೆ ಕೋಚ್ ದ್ರಾವಿಡ್ ಕೂಡಾ ಸ್ಪಿನ್ ಬಲವನ್ನೇ ನಂಬಿದ್ದಾರೆ. ಆಲ್​​ರೌಂಡರ್​ ರವೀಂದ್ರ ಜಡೇಜಾ, ಅಕ್ಷರ್​ ಪಟೇಲ್ ಈಗಾಗಲೇ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಪಡೆದು ಮೋಡಿ ಮಾಡಿದ್ದಾರೆ. ಇದೀಗ ಇಷ್ಟು ದಿನ ಬೆಂಚ್​ ಕಾದ ಸ್ಪೆಷಲಿಸ್ಟ್​ ಸ್ಪಿನ್ನರ್​ಗಳಾದ ಕುಲ್​ದೀಪ್​ ಯಾದವ್​, ಯುಜುವೇಂದ್ರ ಚಹಲ್​ ಕಣಕ್ಕಿಳಿಯಲು ಕೌಂಟ್​​ಡೌನ್​ ಶುರುವಾಗಿದೆ. ಇವ್ರ ಅನುಭವ ಪ್ಲಸ್ ಟ್ಯಾಲೆಂಟ್​​ ತಂಡದ ಕೈ ಹಿಡಿಯೋದ್ರಲ್ಲಿ ನೋ ಡೌಟ್. ​​​ ವೆಸ್ಟ್​ ಇಂಡೀಸ್​ನಲ್ಲಿ ಈವರೆಗೆ 3 ಪಂದ್ಯಗಳನ್ನಾಡಿರುವ ಕುಲ್​ದೀಪ್​ ಯಾದವ್​ 12 ಓವರ್​ ಬೌಲಿಂಗ್​ ಮಾಡಿ 5 ವಿಕೆಟ್​ ಕಬಳಿಸಿದ್ದಾರೆ. 3 ಪಂದ್ಯದಿಂದ 10 ಓವರ್​ ಬೌಲಿಂಗ್​ ಮಾಡಿ ಯುಜುವೇಂದ್ರ ಚಹಲ್​ 4 ವಿಕೆಟ್​​ ಬೇಟೆಯಾಡಿದ್ದಾರೆ. ಸ್ಪಿನ್ ಅಸ್ತ್ರದ ಸಕ್ಸಸ್​ ಟೀಮ್​ ಇಂಡಿಯಾದ ಕಾನ್ಫಿಡೆನ್ಸ್​ ಲೆವೆಲ್ ತುಂಬಾ ಹೆಚ್ಚಿಸಿದೆ. ಹೀಗಾಗಿ ವೀಂಡಿಸ್ ನೆಲದಲ್ಲಿ ಸ್ಪಿನ್ನರ್ ಗಳ ಲಗ್ಗೆ ನೋಡಲು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಜೊತೆಗೆ ಟೀಮ್ ಇಂಡಿಯಾದಲ್ಲಿ ಇಷ್ಟೊಂದು ಸ್ಪಿನ್ನರ್ ಗಳು ಯಾಕೆ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ.

ಸದ್ಯ ಲೀಗ್ ಹಂತದಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್‌ನ ಸೂಪರ್ ಎಂಟಕ್ಕೆ ತಲುಪಿದೆ ನಿಜ. ಬಟ್ ಮುಂದೆ ಕಠಿಣ ಹೋರಾಟ ಇರಲಿದ್ದು, ಬಲಿಷ್ಠ ತಂಡಗಳನ್ನು ಎದುರಿಸಬೇಕಿದೆ. ಸತತ ಗೆಲುವುಗಳ ಹೊರತಾಗಿಯೂ, ಸೂಪರ್ ಎಂಟಕ್ಕೆ ಇಳಿಯುವ ಮೊದಲು ಹಲವು ವಿಚಾರಗಳ ಬಗ್ಗೆ ಗಮನಹರಿಸಬೇಕಿದೆ. ಭಾರತ ತಂಡ ನ್ಯೂಯಾರ್ಕ್‌ನ ಬೌಲಿಂಗ್‌ ಪಿಚ್‌‌ನಲ್ಲಿ ಕಷ್ಟಕಟ್ಟು ಆಡಿದೆ. ಅಲ್ದೇ ಯಾವುದೇ ಪಂದ್ಯದಲ್ಲಿಯೂ ಟೀಂ ಇಂಡಿಯಾ ಬಿಗ್‌ ಸ್ಕೋರ್‌ ಮಾಡಿಲ್ಲ ಆಟವಾಡಿಲ್ಲ. ಆದ್ರೆ ಮುಂದಿನ ಹಂತದ ಪಂದ್ಯಗಳು ವೆಸ್ಟ್‌‌ ಇಂಡೀಸ್‌‌ನಲ್ಲಿ ನಡೆಯಲಿದೆ. ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ಹೊಸ ಆರಂಭಿಕ ಜೋಡಿಯೊಂದಿಗೆ ಆಡುತ್ತಿದೆ. ಬಟ್ ಈ ಜೋಡಿ ಉತ್ತಮವಾಗಿ ರನ್ ಕಲೆ ಹಾಕಲು ಸಾಧ್ಯವಾಗಿಲ್ಲ. ಸೋ  ಆರಂಭಿಕ ಹಂತದಲ್ಲಿ ರನ್ ಗಳಿಸದಿದ್ದರೆ ಮುಂದಿನ ಹಂತದಲ್ಲಿ ಭಾರತದ ಒತ್ತಡ ಹೆಚ್ಚಲಿದೆ.  ಅಲ್ಲದೆ ವಿರಾಟ್ ಕೂಡ ಅಮೆರಿಕ ನೆಲದಲ್ಲಿ ರನ್ ಗಳಿಸಲು ಒದ್ದಾಡಿದ್ದು,  ಟೀಮ್ ಮ್ಯಾನೇಜ್‌ಮೆಂಟ್‌ ಹಾಗೂ ಅಭಿಮಾನಿಗಳು ಕೊಹ್ಲಿ ಸೂಪರ್ ಎಂಟರ ಹಂತದಲ್ಲಿ ತಮ್ಮ ಹಳೆಯ ಫಾರ್ಮ್‌ಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ಕೊಹ್ಲಿ ಫಾರ್ಮ್‌ಗೆ ಬರುವುದು ಭಾರತ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇಲ್ಲವಾದ್ದಲ್ಲಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಲಿದೆ. ಹಾಗೇ ರೋಹಿತ್ ಶರ್ಮಾ ಕೂಡ ಬ್ಯಾಟಿಂಗ್​ನಲ್ಲಿ ಸ್ಥಿರತೆ ಕಾಯ್ದುಕೊಳ್ಳೋದು ಅತ್ಯವಶ್ಯಕವಾಗಿದೆ.  ಜೊತೆಗೆ ತಂಡದ ಇತರ ಬ್ಯಾಟರ್ಸ್​ ಕೂಡ ಉತ್ತಮ ರನ್ ಕಲೆ ಹಾಕಬೇಕಿದೆ. ರವೀಂದ್ರ ಜಡೇಜಾ ಸಹ ಫಾರ್ಮ್‌ ಅಲ್ಲಿ ಇಲ್ಲದಿರುವುದು ರೋಹಿತ್‌ ಟೆನ್ಷನ್‌ ಹೆಚ್ಚಿಸಿದೆ. ಸೂಪರ್ 8ನ ಒಂದೊಂದು ಪಂದ್ಯಗಳೂ ಟೀಂ ಇಂಡಿಯಾನೇ ತುಂಬಾನೇ ಮುಖ್ಯ ಆಗಿರುತ್ತೆ. ಇಷ್ಟು ದಿನ ಟೀಮ್​ ಇಂಡಿಯಾ ಅಮೆರಿಕದಲ್ಲಿತ್ತು. ಅಲ್ಲಿಗೂ, ವಿಂಡೀಸ್​ಗೂ ಪ್ಲೇಯಿಂಗ್​ ಕಂಡಿಷನ್​ನಲ್ಲಿ ತುಂಬಾ ವ್ಯತ್ಯಾಸವಿದೆ. ಅಮೆರಿಕದಲ್ಲಿದ್ದ ತಂಡ ಫಾಲೋ ಮಾಡಿದ ಸ್ಟ್ರಾಟಜಿ ಬೇರೆಯದ್ದು. ಆದ್ರೆ, ವಿಂಡೀಸ್​ನಲ್ಲಿ ಟೀಮ್ ಇಂಡಿಯಾ ಗೇಮ್​ಪ್ಲಾನ್ ಸಂಪೂರ್ಣ ಡಿಫರೆಂಟ್ ಆಗಿರಲಿದೆ. ವಿಂಡೀಸ್​ನಲ್ಲಿ ಟೀಮ್ ಇಂಡಿಯಾಕ್ಕೆ ಬಲಿಷ್ಠ ತಂಡಗಳು ಎದುರಾಗಲಿವೆ. ಎದುರಾಳಿ ಟೀಂ , ಕಂಡಿಷನ್​​, ಪಿಚ್ ಎಲ್ಲ ಬದಲಾಗಲಿದೆ. ಹೀಗಾಗಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಆಯ್ಕೆ ದೊಡ್ಡ ಸವಾಲಾಗಲಿದೆ. ಟೀಮ್ ಇಂಡಿಯಾದಲ್ಲಿ ವರ್ಲ್ಡ್​ಕ್ಲಾಸ್ ಬ್ಯಾಟರ್ಸ್ ಇದ್ರೂ ವಿಂಡೀಸ್​ನ ಸ್ಲೋ ಪಿಚ್​ಗಳಲ್ಲಿ ದೊಡ್ಡ ಸವಾಲು ಎದುರಾಗಲಿದೆ. ಐಪಿಎಲ್​ನಲ್ಲಿ ಸಲೀಸಾಗಿ 200, 250 ರನ್​ಗಳಿಸಿದ ಮೈಂಡ್​​ ಸೆಟ್​ನಲ್ಲಿರೋ ಟೀಮ್ ಇಂಡಿಯಾ ಬ್ಯಾಟರ್ಸ್, ಕೆರಬಿಯನ್​ ನಾಡಲ್ಲಿ ರನ್​ಗಳಿಸೋಕೆ ಕಷ್ಟಪಡಬೇಕಾಗುತ್ತದೆ. ತಾಳ್ಮೆಯಿಂದ, ಎಚ್ಚರಿಕೆಯ ಆಟವಾಡಿದ್ರೆ ಮಾತ್ರ ಸೇಫ್​..

Shwetha M

Leave a Reply

Your email address will not be published. Required fields are marked *