ತ್ರಿವಿಕ್ರಮ್ ಕಪ್ ಗೆದ್ರೆ ಮದುವೆ – ಬಿಗ್ ಮನೆಯಲ್ಲಿ ಭವ್ಯಾ ಡೀಲ್
ಸೋತ್ರೆ ವಿಕ್ಕಿಗೆ ಕೈ ಕೊಡ್ತಾಳಾ ?
ಬಿಗ್ ಬಾಸ್ ಮನೆಯಲ್ಲಿ ಕ್ರಶ್ ಲವ್ ಕಾಮನ್ ಆಗಿದೆ. ಆದ್ರೆ ಈಗೀಗ ಲವ್ ಮಾಡೋದಿಕ್ಕೆ ಬಿಗ್ ಬಾಸ್ ಮನೆಗೆ ಬರ್ತಾರಾ ಅನ್ನೋದು ವೀಕ್ಷಕರ ಪ್ರಶ್ನೆ. ಯಾಕಂದ್ರೆ ಬಿಗ್ ಬಾಸ್ ಕನ್ನಡ ಸೀಸನ್ 11 ನಲ್ಲೂ ಹೆಚ್ಚು ಸದ್ದು ಮಾಡ್ತಿರೋದು ಲವ್ ಮ್ಯಾಟರ್.. ಇದೀಗ ತ್ರಿವಿಕ್ರಮ್ ಹಾಗೂ ಭವ್ಯಾ ಗೌಡ ದೊಡ್ಮೆಯಲ್ಲಿ ಮದುವೆ ಆಗೋದ್ರ ಬಗ್ಗೆ ಮಾತನಾಡಿದ್ದಾರೆ.. ಇದು ವೀಕ್ಷಕರಲ್ಲಿ ಅಸಮಧಾನ ಮೂಡುವಂತೆ ಆಗಿದೆ. ಅಷ್ಟಕ್ಕೂ ಬಿಗ್ ಬಾಸ್ ಮನೆಯಲ್ಲಿ ಏನ್ ನಡಿತಾ ಇದೆ. ತ್ರಿವಿಕ್ರಮ್ ಭವ್ಯಾ ಮಧ್ಯೆ ಆಗಿರೋ ಮಾತುಕತೆ ಏನು? ಕಪ್ ಗೆದ್ರಷ್ಟೇ ಮದುವೆನಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಮತ್ತೆ ಪಾಕಿಸ್ತಾನವಾಗುತ್ತಾ ಬಾಂಗ್ಲಾ ?ವೀಸಾ ರಿಲೀಫ್ ಹಿಂದಿದ್ಯಾ ನರಿ ಲೆಕ್ಕ?
ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ಹಂತಕ್ಕೆ ಬಂದಿದೆ. ಎಲ್ಲರೂ ಕಪ್ ಗೆಲ್ಲುವತ್ತ ಗಮನ ಹರಿಸಿದ್ರೆ ಭವ್ಯ ಹಾಗೂ ತ್ರಿವಿಕ್ರಮ್ ಗೆ ಮದುವೆ ಬಗ್ಗೆನೇ ಚಿಂತೆ ಆಗಿದೆ. ಹೌದು.. ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಭವ್ಯಾ ಹಾಗೂ ತ್ರಿವಿಕ್ರಮ್ ತುಂಬಾ ಕ್ಲೋಸ್ ಆಗಿದ್ರು.. ಸದಾ ಒಬ್ಬರಿಗೊಬ್ಬರು ಎಂಬಂತೆ ಅಂಟಿಕೊಂಡೇ ಆಟ ಆಡುತ್ತಿದ್ದಾರೆ. ಈಗ ತಮ್ಮ ಸ್ನೇಹವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಸೂಚನೆಯನ್ನು ಬಿಗ್ಬಾಸ್ನಲ್ಲೇ ನೀಡಿದ್ದಾರೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್ ಹಾಗೂ ಭವ್ಯಾರ ಒಂದು ವಿಡಿಯೋವನ್ನ ಬಿಗ್ ಬಾಸ್ ನಲ್ಲಿ ಪ್ರಸಾರ ಮಾಡಲಾಗಿದೆ. ಶನಿವಾರದ ಎಪಿಸೋಡ್ ನಲ್ಲಿ ಸುದೀಪ್ ಆಗಮಿಸುವ ಮೊದಲು.. ಮನೆಯಲ್ಲಾದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಈ ಸಂದರ್ಭದಲ್ಲಿ ಎಲ್ಲರೂ ಮಲಗಿದ ಮೇಲೆ ತ್ರಿವಿಕ್ರಮ್ ಮತ್ತು ಭವ್ಯಾ ಒಂದು ಮೂಲೆಯಲ್ಲಿ ಕೂತು ಏನೋ ವಿಷಯ ಮಾತನಾಡುತ್ತಿದ್ದರು. ಆರಂಭದಲ್ಲಿ ಅವರಿಬ್ಬರು ಏನ್ ಮಾತಾನಾಡ್ತಿದ್ದಾರೆ ಅಂತಾ ಗೊತ್ತಿರ್ಲಿಲ್ಲ.. ಅದಾದ್ಮೇಲೆ ಅವರ ಮಾತುಕತೆ ಮುಂದುವರೆದಂತೆ ಅವರಿಬ್ಬರು ಪ್ರೀತಿ, ಮದುವೆ ವಿಷಯ ಮಾತಾಡ್ತಿದ್ದಾರೆ ಅಂತ ಅರ್ಥವಾಗಿದ್ದು..
ಹೌದು, ತ್ರಿವಿಕ್ರಮ್, ಭವ್ಯಾ ಕುರಿತು, ನೀನು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ ಎನ್ನುತ್ತಾರೆ. ಅದಕ್ಕೆ ಭವ್ಯಾ ಖುಷಿಯಿಂದ ಕೊಡುತ್ತೇನೆ, ಸ್ವಲ್ಪ ದಿನ ಕಾಯಿ ಎನ್ನುತ್ತಾರೆ. ನೀನು ಆಡುತ್ತಿರುವ ರೀತಿ, ಮಾತನಾಡುತ್ತಿರುವುದು ನೋಡಿದರೆ ನೆಗೆಟಿವ್ ಉತ್ತರ ನೀಡುತ್ತೀಯ ಅನಿಸುತ್ತಿದೆ ಎನ್ನುತ್ತಾರೆ ತ್ರಿವಿಕ್ರಮ್. ಅದಕ್ಕೆ ಭವ್ಯಾ ನಗುತ್ತಾ, ‘ಅಯ್ಯೋ ಹಾಗೇನಿಲ್ಲ. ಸ್ವಲ್ಪ ವೇಟ್ ಮಾಡು ಎಂದು ನಗುತ್ತಾ ಹೇಳುತ್ತಾರೆ. ಹಾಗೆ ಮಾತು ಮುಂದುವರೆಸಿ, ‘ಸ್ವಲ್ಪ ದಿನ ಆಗಲಿ, ಹೊರಗೆ ಹೋದ ಮೇಲೆ ಹೇಳುತ್ತೀನಿ ಎಂದು ಭವ್ಯಾ ಹೇಳುತ್ತಾರೆ. ತ್ರಿವಿಕ್ರಮ್ ಸಹ ಆಡಿ ಗೆದ್ದು ಆ ಮೇಲೆ ನಿನ್ನ ಬಳಿ ಆ ಬಗ್ಗೆ ಮಾತನಾಡುತ್ತೀನಿ ಎನ್ನುತ್ತಾರೆ. ಒಟ್ಟಾರೆ ಇಬ್ಬರೂ ಸಹ ಗುಟ್ಟಿನಲ್ಲಿ ಪ್ರೀತಿಯ ವಿಚಾರವನ್ನೇ ಮಾತನಾಡಿದ್ದಾರೆ ಎಂಬುದು ವೀಕ್ಷಕರಿಗೆ ಅರ್ಥವಾಗಿದೆ.
ಇನ್ನು ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರ ಮನೆಯವರೂ ಸಹ ಪರಸ್ಪರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು. ಆ ನಂತರ ವೀಕೆಂಡ್ನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಇನ್ನು ಮುಂದೆ ತಾವು ಪರಸ್ಪರರ ಗೆಳೆತನ ಮುರಿಯುವುದಾಗಿ ಹೇಳಿದ್ದರು. ಆ ನಂತರವೂ ಸಹ ಒಬ್ಬರ ಬಗ್ಗೆ ಇನ್ನೊಬ್ಬರು ಕೆಲ ಚುಚ್ಚು ಮಾತುಗಳನ್ನು ಆಡಿಕೊಂಡಿದ್ದರು. ಆದರೆ ಈಗ ನೋಡಿದರೆ ಪರೋಕ್ಷವಾಗಿ ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲ ಮಾತನಾಡುತ್ತಿದ್ದಾರೆ.
ಇನ್ನು ಕಿಚ್ಚ ಸುದೀಪ್ ಕೂಡ ಪ್ರತಿವಾರ ಈ ಬಗ್ಗೆ ಎಚ್ಚರಿಕೆ ನೀಡ್ತಾನೇ ಬಂದಿದ್ದಾರೆ.. ಇಬ್ಬರು ಇಂಡಿವಿಜುವಲ್ ಆಗಿ ಆಡಿ ಅಂತಾ ಹೇಳ್ತಾನೆ ಇದ್ದಾರೆ.. ಆದ್ರೆ ಇವರಿಬ್ಬರು ಎಚ್ಚೆತ್ತುಕೊಳ್ತಾನೆ ಇಲ್ಲ.. ಭವ್ಯಾ ಹಾಗೂ ತ್ರಿವಿಕ್ರಮ್ ವರ್ತನೆ ಬಗ್ಗೆ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ಇದು ಫ್ಯಾಮಿಲಿ ಶೊ.. ಎಲ್ಲಾ ವಯಸ್ಸಿನವರೂ ಶೋ ನೋಡ್ತಿರ್ತಾರೆ.. ಮೈ ಮುಟ್ಟಿ ಮಾತನಾಡಿಸೋದು.. ತಬ್ಬಿಕೊಳ್ಳೋದು.. ಮುತ್ತು ಕೊಡೋದು, ನಡು ರಾತ್ರಿಯಲ್ಲಿ ಪಿಸು ಪಿಸು ಮಾತನಾಡೋದು.. ಕೈ ಕೈ ಹಿಡಿದು ಓಡಾಡೋದು.. ಎಷ್ಟೋ ಸಲ ವೀಕ್ಷಕರಿಗೆ ಮುಜುಗರ ಅನ್ನಿಸಿದೆ. ಹೀಗಾಗಿ ಅವರಿಬ್ಬರ ಮೇಲೆ ಅಸಮಧಾನ ಹೊರ ಹಾಕಿದ್ದಾರೆ.