BBK ಮುಗಿದ್ಮೇಲೆ ಅಮ್ಮಂದಿರ ಆಟ? – ಹನುಮಂತ ಗೆದ್ದಿದ್ದೇ ತಪ್ಪಾ?
ಹನು ಬದಲು ಯಾರು ಗೆಲ್ಬೇಕಿತ್ತು?

BBK ಮುಗಿದ್ಮೇಲೆ ಅಮ್ಮಂದಿರ ಆಟ? – ಹನುಮಂತ ಗೆದ್ದಿದ್ದೇ ತಪ್ಪಾ?ಹನು ಬದಲು ಯಾರು ಗೆಲ್ಬೇಕಿತ್ತು?

ಬಿಗ್‌ ಬಾಸ್‌ ಕನ್ನಡ ಗ್ರ್ಯಾಂಡ್‌ ಫಿನಾಲೆ ಮುಗಿತು.. ಹನುಮಂತ ಕಪ್‌ ಗೆದ್ದಿದ್ದೂ ಆಯ್ತು.. ಹನುಮಂತ ಕಪ್‌ ಗೆಲ್ಲೋದಿಕ್ಕೆ ಅರ್ಹರು ಅಂತಾ ಹಬಹುತೇಕರು ಹೇಳ್ತಿದ್ದಾರೆ. ಆದ್ರೀಗ ಹನುಮಂತನ ಗೆಲುವಿನ ಬಗ್ಗೆ ಈಗ ಅಪಸ್ವರ ಎದ್ದಿದೆ.. ಹನುಮಂತನ ಗೆಲ್ಸೋದಿಕ್ಕಿಂತ ಬೇರೆ ಯಾರನ್ನಾದ್ರೂ ಗೆಲ್ಲಿಸುತ್ತಿದ್ರೆ ಒಳ್ಳೆದಿತ್ತು ಅಂತಾ ತ್ರಿವಿಕ್ರಮ್‌ ತಾಯಿ ಬೇಸರ ಹೊರ ಹಾಕಿದ್ದಾರೆ. ಈ ಹೇಳಿಕೆ ನೀಡಿದ ಬೆನ್ನಲ್ಲೇ ತ್ರಿವಿಕ್ರಮ್‌ ತಾಯಿ ಟ್ರೋಲ್‌ ಗೆ ಆಹಾರ ಆಗಿದ್ದಾರೆ. ಅಷ್ಟಕ್ಕೂ ತ್ರಿವಿಕ್ರಮ್‌ ತಾಯಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಯಾಕೆ? ಹನುಮಂತನಿಗೆ ವಿನ್ನರ್‌ ಪಟ್ಟ ಕೊಡ್ಬಾರ್ದಿತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕುಂಭಮೇಳ ಹೆಸರಲ್ಲಿ ದೋಚೋರೇ ಬಾಸ್ ಲಗಾಮು ಹಾಕೋರು ಯಾರು ಇಲ್ವಾ?

ಈ ಬಾರಿಯ ಬಿಗ್ ಬಾಸ್ 11ನೇ ಸೀಸನ್‌ ಎಲ್ಲಾ ಸೀಸನ್‌ಗಳಿಗಿಂತ ದೊಡ್ಡ ಮಟ್ಟದಲ್ಲಿ ಸಕ್ಸಸ್‌ ಕಂಡಿದೆ. ಅಷ್ಟೇ ಅಲ್ಲ ಹೊಸ ದಾಖಲೆಯೊಂದು ನಿರ್ಮಾಣವಾಗಿದೆ. ಪ್ರತಿ ಬಾರಿಯೂ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟವರು ಮಧ್ಯದಲ್ಲಿಯೇ ಮನೆಯಿಂದ ಆಚೆ ಹೋಗಿಬಿಡುತ್ತಿದ್ದರು. ಆದರೆ ಇದೀಗ ಅದು ಉಲ್ಟಾ ಆಗ್ಬಿಟ್ಟಿದೆ. ಈ ಸೀಸನ್‌ ನಲ್ಲಿ ಹನುಮಂತ ಗೆದ್ದಿದ್ದು, ರಜತ್‌ ಮೂರನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಹನುಮಂತು ಗೆಲುವಿನ ಬಗ್ಗೆ ಅಪಸ್ವರವೊಂದು ಎದ್ದಿದೆ. ತ್ರಿವಿಕ್ರಮ ತಾಯಿ ಹನುಮಂತು ಗೆಲ್ಬಾರ್ದಿತ್ತು ಅಂತಾ ಹೇಳಿ, ಟೀಕೆಗೆ ಗುರಿಯಾಗಿದ್ದಾರೆ.

ಬಿಗ್‌ ಬಾಸ್‌ ಗ್ರ್ಯಾಂಡ್‌ ಫಿನಾಲೆ ಬೆನ್ನಲ್ಲೇ ಬಿಗ್ ಬಾಸ್ ರನ್ನರಪ್ ತ್ರಿವಿಕ್ರಮ್ ತಾಯಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆಯೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದಾರೆ. ತಮ್ಮ ಮಾತುಗಳಿಂದಲೂ ಎಲ್ಲರ ಗಮನ ಸೆಳೆದಿದ್ದಾರೆ.  ಕಾರಣ, ತ್ರಿವಿಕ್ರಮ್ ತಾಯಿ ಬಿಗ್‌ ಬಾಸ್‌ ವಿನ್ನರ್‌ ಬಗ್ಗೆ ನೇರಾ ನೇರವಾಗಿಯೇ ಮಾತನಾಡಿದ್ದಾರೆ.  ಹನುಮಂತು ಏನೂ ಅಲ್ಲ. ಅವನಲ್ಲಿ ಏನೂ ಕಾಣಲೇ ಇಲ್ಲ. ಆತನಿಗೆ ವಿನ್ನರ್‌ ಪಟ್ಟ ಕೊಡದೇ ಬೇರೆ ಯಾರಿಗೂ ಕೊಟ್ಟಿದ್ರೆ  ಖುಷಿ ಆಗುತ್ತಿತ್ತು. ಹಾಗಂತ ನನ್ನ ಮಗನಿಗೆ ಬಿಗ್ ಬಾಸ್ ಟ್ರೋಫಿ ಕೊಡಬೇಕು ಅಂತ ಏನೂ ಅಲ್ಲ. ಆದರೆ, ಹನುಮಂತುಗೆ ಟ್ರೋಫಿ ಕೊಟ್ಟಿರೋದು ಸರಿ ಅಲ್ಲ ಅಂತಾ ಹೇಳಿದ್ದಾರೆ. ಇದು ಈಗ ಹನುಮಂತು ಫ್ಯಾನ್ಸ್‌ ಕೋಪಕ್ಕೆ ಕಾರಣವಾಗಿದೆ. ಇದೆ ವಿಡಯೋ ಇಟ್ಕೊಂಡು ಟ್ರೋಲ್‌ ಮಾಡ್ತಿದ್ದಾರೆ. 5.23 ಕೋಟಿ ವೋಟ್‌ ಬಂದಿರೋದು ಸುಳ್ಳಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ.

ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತ್ ಆಡ್ತಾರೆ. ಅದನ್ನ ದೊಡ್ಮನೆಗೆ ಬಂದಾಗಲೇ ಗೊತ್ತಾಗಿದೆ. ಭವ್ಯ ಗೌಡ ಮತ್ತು ತ್ರಿವಿಕ್ರಮ್ ಬಗೆಗಿನ ಸ್ನೇಹದ ವಿಚಾರದಲ್ಲೂ ತ್ರಿವಿಕ್ರಮ್ ತಾಯಿ ನೇರವಾಗಿಯೇ ಮಾತನಾಡಿದ್ರು. ನನ್ನ ಮಗನನ್ನ ತುಂಬಾನೆ ಚೆನ್ನಾಗಿಯೇ ನೋಡಿಕೊಂಡಿದ್ದೀಯಾ, ತುಂಬಾನೆ ಖುಷಿ ಆಯಿತು. ರಾಧಾ ಮತ್ತು ಕೃಷ್ಣನನ್ನ ನೋಡಿದ ಹಾಗೆ ಆಯಿತು ಅಂತಲೇ ಹೇಳಿದ್ದರು. ಈ ಬಗ್ಗೆ ತಿಳಿದುಕೊಂಡ ತ್ರಿವಿಕ್ರಮ್ ತಮ್ಮ ಅಮ್ಮನ ಬಗ್ಗೆ ಹೇಳಿದ್ದರು. ನಮ್ಮ ಅಮ್ಮ ತುಂಬಾನೆ ನೇರವಾಗಿಯೇ ಇದ್ದಾರೆ. ಅವರು ನೇರವಾಗಿಯೇ ಎಲ್ಲವನ್ನೂ ಹೇಳಿಕೊಳ್ಳುತ್ತಾರೆ ಅಂತಲೇ ಹೇಳಿದ್ದರು. ಅದೇ ರೀತಿ ಇದೀಗ ನೇರವಾಗಿಯೇ ಮಾತನಾಡಿದ್ದಾರೆ ಅನಿಸುತ್ತದೆ. ಆದರೂ ಒಂದು ಪ್ರಶ್ನೆ ಕಾಡುತ್ತಿದೆ. ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತನ ಆಟದಲ್ಲಿ ಯಾಕೆ ಏನೂ ಕಾಣಿಸಲೇ ಇಲ್ಲ ಅನ್ನೋದೇ ಅನೇಕರನ್ನು ಪ್ರಶ್ನೆ ಆಗಿದೆ.

ಇನ್ನು ಹನುಮಂತನ ಗೆದ್ದಿರುವುದು ಬಹುತೇಕ ವೀಕ್ಷಕರಿಗೆ ಖುಷಿಯಿದೆ. ಗ್ರ್ಯಾಂಡ್‌ ಫಿನಾಲೆಗೂ ಮುನ್ನ ಹನುಮಂತ ಗೆಲ್ಬೇಕು ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು.. ಇನ್ನು ಸಹ ಸ್ಪರ್ಧಿಗಳು ಕೂಡ ಹನುಮಂತ ಗೆದ್ದಿರುವುದು ಖುಷಿ ಇದೆ. ಅವರೇ ಈ ಸ್ಥಾನಕ್ಕೆ ಅರ್ಹರು ಅಂತಾ ಹೇಳಿದ್ರು.. ಇನ್ನು  ಸ್ವತಃ ತ್ರಿವಿಕ್ರಮ್ ಕೂಡ ಹನುಮಂತ ಗೆದ್ದಿರೋದು ನನಗೆ ಖುಷಿ ಆಗಿದೆ ಅಂತಲೇ ಹೇಳಿದ್ದರು. ರಜತ್ ಕಿಶನ್ ಕೂಡ ಇದನ್ನೆ ಹೇಳಿದ್ರು.. ಹನುಮಂತ ನನ್ನ ತಮ್ಮನೇ ಆಗಿದ್ದಾನೆ. ಈತ ಗೆದ್ದಿದ್ದಾನೆ. ಇದು ಖುಷಿ ತಂದಿದೆ ಅಂತಲೇ ಹೇಳಿದ್ದಾರೆ. ಧನರಾಜ್ ಆಚಾರ್ ಕೂಡ ಇದನ್ನೆ ಹೇಳಿದ್ದಾರೆ. ಹನುಮಂತ ಗೆಲ್ತಾನೆ ಅಂತ ಗೊತ್ತಿತ್ತು. ಅದು ಆಗಿದೆ. ಖುಷಿನೂ ಇದೆ ಅಂತಲೇ ಧನರಾಜ್ ಹೇಳಿಕೊಂಡಿದ್ದಾರೆ. ಒಟ್ಟಾರೆ, ಬಿಗ್ ಬಾಸ್‌ನಿಂದ ಹೊರಬಂದ ಹನುಮಂತನ ಗೆಲುವು ಎಲ್ಲರಿಗೂ ಖುಷಿ ತಂದಿದೆ. ಆದ್ರೀಗ ತ್ರಿವಿಕ್ರಮ್‌ ತಾಯಿ ತನ್ನ ನೇರಾ ನೇರಾ ಮಾತುಗಳಿಂದ ಟ್ರೋಲ್‌ ಪೇಜ್‌ ಗಳಿಗೆ ಆಹಾರ ಆಗಿದ್ದಾರೆ.. ಯಾಕೆ ಬಡವರ ಮಕ್ಕಳು ಬೆಳಿಬಾರ್ದು ನಿಮಗೆ.. ರೈತರ ಮಕ್ಕಳು ಬೆಳೆದ್ರೆ ನಿಮಗೆ ಸಹಿಸೋದಿಕ್ಕೆ ಆಗಲ್ವಾ ಅಂತಾ ಅನೇಕರು ಕೇಳಿದ್ದಾರೆ. ಇನ್ನೂ ಕೆಲವರು ತ್ರಿವಿಕ್ರಮ್‌ ತಾಯಿಗೆ ಹನುಮಂತನಲ್ಲಿ ಏನೂ ಕಾಣಿಸಿಲ್ಲ ಅಂತೆ.. ಏನೂ ಕಾಣಿಸದೇ 5 ಕೋಟಿ ಜನ ವೋಟ್‌ ಹಾಕಿದ್ರಾ ಅಂತಾ ಕೇಳ್ತಿದ್ದಾರೆ.

Shwetha M

Leave a Reply

Your email address will not be published. Required fields are marked *